Moral values ​​are necessary for the development of society. 
ತುಮಕೂರು

ಸಮಾಜದ ಅಭಿವೃದ್ಧಿಗೆ ನೈತಿಕ ಮೌಲ್ಯ ಅಗತ್ಯ

ಬರಗೂರು: ಸಮಾಜದ ಅಭಿವೃದ್ಧಿಗೆ ಆರ್ಥಿಕ ಪ್ರಗತಿಯಷ್ಟೇ ನೈತಿಕ ಮೌಲ್ಯ ಮತ್ತು ಆಧ್ಯಾತ್ಮಿಕ ಚಿಂತನೆ ಅತ್ಯಗತ್ಯ ಎಂದು ಮಾಜಿ ಶಾಸಕ ಡಾ.ರಾಜೇಶ್​ಗೌಡ ಹೇಳಿದರು. ಶಿರಾ ತಾಲೂಕು ಮಾದನಾಯಕನಹಳ್ಳಿ ಶ್ರೀ ಪದ್ದಮ್ಮ ದೊಡ್ಡದೇವರ ಬ್ರಹ್ಮರಥೋತ್ಸವದಲ್ಲಿ ಮಾತನಾಡಿ, ಧರ್ಮವೆಂದರೆ ಕೇವಲ ಪೂಜೆ, -ಪುನಸ್ಕಾರವಲ್ಲ. ಸತ್ಯ, ಪ್ರಾಮಾಣಿಕತೆ, ಕರುಣೆ, ಸೇವೆ ಹಾಗೂ ಸಮಾಜದ ಒಳಿತಿಗಾಗಿ ಬದುಕುವುದೇ ನಿಜವಾದ ಧರ್ಮ ಎಂದರು.
ಭಾರತೀಯ ತತ್ವಶಾಸ್ತ್ರವು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಾಶ್ವತ ಮಾರ್ಗದರ್ಶಿಯಾಗಿವೆ. ಯುವಜನತೆ ನಮ್ಮ ಸಂಸತಿ, ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿಮಾರ್ಣವಾಗುತ್ತದೆ. ಜನರ ಆಶೀರ್ವಾದವೇ ನನ್ನ ರಾಜಕೀಯ ಜೀವನದ ನಿಜವಾದ ಶಕ್ತಿ. ಅಧಿಕಾರವು ಸೇವೆಗಾಗಿ ಇರಬೇಕು. ಜನರ ವಿಶ್ವಾಸಕ್ಕೆ ತಕ್ಕಂತೆ ಸದಾ ಸಮಾಜದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಕೃಷ್ಣಮೂರ್ತಿ, ಎಸ್​ಬಿಐ ರಾಜಶೇಖರ್​, ರಾಜೇಶ್​, ಅಶೋಕ್​, ಆನಂದ್​, ಮಹೇಶ್​ ಇದ್ದರು.