May the tradition of guru and disciple not be extinguished.
ತುರುವೇಕೆರೆ: ಗುರು ತನ್ನ ಶಿಷ್ಯತನಗಿಂತ ಎತ್ತರಕ್ಕೆ ಬೆಳೆಯಬೇಕು. ಆತ ದೇಶದ ಸತಜೆಯಾಗಬೇಕೆಂಬ ಹಂಬಲದಿಂದ ತನ್ನ ಶಿಷ್ಯರಿಗೆ ಶಿಕ್ಷಿಸುತ್ತಾನೆ ವಿನ@, ಶಿಕ್ಷಕನಿಗೆ ಯಾವುದೇ ದುರುದ್ದೇಶವಿರುವುದಿಲ್ಲ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ನಲ್ಲಿರುವ ನೆಹರು ವಿದ್ಯಾಶಾಲಾ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 2004&05ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಬೇಕೆಂದು ಹೇಗೆ ತಂದೆ&ತಾಯಿಯರು ಭಾವಿಸುವರೋ, ಹಾಗೆಯೇ ಗುರುವೂ ಸಹ ತನ್ನ ವಿದ್ಯಾರ್ಥಿ ತನಗಿಂತ ಎತ್ತರಕ್ಕೆ ಬೆಳೆಯಬೇಕೆಂದು ಅಪೇಕ್ಷಿಸುತ್ತಾರೆ. ಅವರಲ್ಲಿ ಯಾವುದೇ ಸ್ವಾರ್ಥವಿರುವುದಿಲ್ಲ. ಎಲ್ಲ ವೃತ್ತಿಗಳಿಗಿಂತ ಮಿಗಿಲಾದುದು ಶಿಕ್ಷಕ ವೃತ್ತಿ. ಅದೊಂದು ಪವಿತ್ರವಾದ ಹುದ್ದೆ. ತನ್ನ ಶಿಷ್ಯ ಎಷ್ಟೇ ಎತ್ತರಕ್ಕೆ ಏರಿದರೂ ಸಹ ಆತ ತನಗೆ ಪಾಠ ಕಲಿಸಿದ ಗುರುಗಳು ಸಿಕ್ಕ ಕೂಡಲೇ ಗೌರವ ನೀಡುತ್ತಾನೆ. ಇದೇ ಗುರುಗಳ ಸೌಭಾಗ್ಯ ಎಂದರು.
ಇತ್ತೀಚೆಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಬಾರದು ಎಂಬ ಕಾನೂನು ಜಾರಿಗೆ ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ತನ್ನ ಶಿಷ್ಯ ಕಲಿಯಲಿ ಎಂಬ ಉದ್ದೇಶದಿಂದ ದಂಡಿಸಿದರೆ ಅದೊಂದು ಮಹಾ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಮಕ್ಕಳು ಕೇವಲ ಅಂಕಗಳನ್ನು ಗಳಿಸಿದರೆ ಸಾಲದು. ಗುರು&ಹಿರಿಯರು, ತಮ್ಮ ಪಾಲಕರಿಗೆ ಗೌರವ ಕೊಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು ಎಂದರು.
ನಿವೃತ್ತ ಶಿಕ್ಷಕ ಶಿವರಾಮ್ ಮಾತನಾಡಿ, ಶಿಕ್ಷಕರು ಮೊದಲು ಪ್ರಾಮಾಣಿಕವಾಗಿರಬೇಕು. ವಿದ್ಯಾರ್ಥಿಗಳಿಗೆ ಮೊದಲು ಶಿಸ್ತು ಕಲಿಸಬೇಕು. ತಮ್ಮ ಮಕ್ಕಳನ್ನು ಉನ್ನತ ಮಟ್ಟಕ್ಕೇರಿಸಬೇಕೆಂದು ಛಲ ಇರಬೇಕು. ವಿದ್ಯಾರ್ಥಿಗಳು ಆರಂಭದಲ್ಲಿ ಕಲಿಯುವ ಪಾಠ ಜೀವನದಲ್ಲಿ ಯಾವಾಗಲು ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಂದರ್ಭದಲ್ಲಿ ಉತ್ತಮ ಸ್ನೇಹಿತರನ್ನು ಗಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೆ.ಭೈರಪ್ಪ, ಶಿವರಾಮ್, ಶಿವಾನಂದಮೂರ್ತಿ, ಬಸವಲಿಂಗಯ್ಯ, ಶಿವರಾಜು, ರಾಮಚಂದ್ರು, ಚನ್ನೇಗೌಡ, ಹೊನ್ನಾದೇವಿ, ಮಾಯಿಗಯ್ಯ, ಪಿ.ಹಾಲನಾಯಕ್, ಶಿವಣ್ಣ, ನಿಂಗೇಗೌಡ, ಮುತ್ತುರಾಜ್, ದಾಸಪ್ಪ ಅವರನ್ನು ಸನ್ಮಾನಿಸಲಾಯಿತು.
ಎಲ್ಲ ವಿದ್ಯಾರ್ಥಿಗಳು ಅಂದಿನ ಕಾಲದ ಸಮವಸ್ತ್ರವಾಗಿದ್ದ ಬಿಳಿ ಟೋಪಿ ಧರಿಸಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಮುರುಳಿ, ಎಂ.ವಿ.ಸೋಮಶೇಖರ್, ಶಾಂತಕುಮಾರ್ ಇದ್ದರು.