ತುಮಕೂರಿನ ಎಸ್ಐಟಿ ಮುಂಭಾಗ ಮಹಾತ್ಮರ ಉತ್ಸವಕ್ಕೆ ಸಿದ್ದಗಂಗಾಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಚಾಲನೆ ನೀಡಿದರು.
- ಬಸವೇಶ್ವರರು, ರೇಣುಕಾಚಾರ್ಯರು, ಸಿದ್ದರಾಮೇಶ್ವರರ ಜಯಂತಿ
- ತುಮಕೂರು ನಗರ ವೀರಶೈವ ಸೇವಾ ಸಮಾಜ
- ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ
ತುಮಕೂರು: ನಗರ ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿಯಂದು ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಸ್ರೀ ಸಿದ್ದರಾಮೇಶ್ವರರ ವೈಭವದ ಜಂಟಿ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ಎಸ್ಐಟಿ ಆವರಣದಲ್ಲಿರುವ ಸ್ರೀ ಗಣಪತಿ ದೇವಾಲಯದಲ್ಲಿ ಸೋಮವಾರ ಸಂಜೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಹಾತ್ಮರ ಉತ್ಸವಕ್ಕೆ ಚಾಲನೆ ನೀಡಿದರು. ಸಿದ್ದರಬೆಟ್ಟದ ಶ್ರೀ ವೀರಭಧ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರ ಬಸವ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ಸಾನಿಧ್ಯವಹಿಸಿದ್ದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಸಮಾಜದ ಅಧ್ಯಕ್ಷ ಕೋರಿ ಮಂಜುನಾಥ್, ಉಪಾಧ್ಯಕ್ಷ ಟಿ.ಬಿ.ಹರೀಶ್, ಕಾರ್ಯದರ್ಶಿ ಶಶಿಧರನ್, ಖಜಾಂಚಿ ಜಿ.ಕೆ.ಸ್ವಾಮಿ, ಟಿ.ಜೆ.ರುದ್ರಪ್ಪ,ಮಲ್ಲಿಕಾರ್ಜುನ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಡಾ.ಎಸ್.ಪರಮೇಶ್, ಕೆ.ಎನ್.ದರ್ಶನ್, ಚಂದ್ರಶೇಖರ್, ಟಿ.ಆರ್.ಸದಾಶಿವಯ್ಯ ಹಾಗೂ ವೀರಶೈವ ಸಮಾಜದ ಅಂಗಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೂವಿನ ಅಲಂಕೃತ ಮಂಟಪದಲ್ಲಿ ಮೂವರು ಮಹಾತ್ಮರ ಭಾವಚಿತ್ರಗಳ ಅದ್ದೂರಿ ಮೆರವಣಿಗೆ ಎಸ್ಐಟಿ ಆವರಣದಿಂದ ಆರಂಭವಾಗಿ ಗಂಗೋತ್ರಿ ರಸ್ತೆ, ಎಸ್ಐಟಿ, ಎಸ್ಎಸ್ ಪುರಂ ರಸ್ತೆ, ಡಾ. ರಾಧಾಕೃಷ್ಣ ರಸ್ತೆ, ಜಗದ್ಗುರು ರೇಣುಕಾಚಾರ್ಯ ವೃತ್ತದ ಮೂಲಕ ಸಾಗಿದ ಉತ್ಸವವು ಬಿ.ಹೆಚ್. ರಸ್ತೆ, ಎಂ.ಜಿ. ರಸ್ತೆ, ಸ್ವಾತಂತ್ರ ಚೌಕ, ಮಂಡಿಪೇಟೆ ಹಾದು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಂಪನ್ನಗೊಂಡಿತು.