ಎಇಇ ಮದುಸೂದನ್​ರ ತುಮಕೂರು ಸಪ್ತಗಿರಿ ಬಡಾವಣೆಯ ಮನೆ 
ತುಮಕೂರು

ಸಣ್ಣ ನೀರಾವರಿ ಇಲಾಖೆಯ ತಿಮಿಂಗಲ !

ಪ್ರಮುಖ ಮುಖ್ಯಾಂಶಗಳು

  • ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
  • ಎಇಇ ಮದುಸೂದನ್​ ಮನೆ ಸೇರಿ 5 ಕಡೆ ಶೋಧ
  • ಆದಾಯ ಮಿರಿ ಅಧಿಕ ಸಂಪಾದನೆ ಮಾಹಿತಿ
ತುಮಕೂರು: ಆದಾಯ ಮೀರಿ ಅಧಿಕ ಸಂಪಾದನೆ ಮಾಹಿತಿ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಭೇಟೆಯಾಡಿದ್ದಾರೆ. ತಿಪಟೂರು ಉಪವಿಭಾಗದ ಸಣ್ಣ ನೀರಾವರಿ ಇಲಾಖೆ ಎಇಇ ಮದುಸೂದನ್​ ಕಚೇರಿ, ನಿವಾಸ ಸೇರಿದಂತೆ 5 ಕಡೆ ಶೋಧ ಕೈಗೊಂಡಿದ್ದು 2.10 ಕೋ.ರೂ., ಚರ&ಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ.
ನಗರದ ಸಪ್ತಗಿರಿ ಬಡಾವಣೆಯ ಮದುಸೂದನ್​ ಬೃಹತ್​ ಬಂಗ್ಲೆ, ತಿಪಟೂರಿನ ಕಚೇರಿ, ಬೆಂಗಳೂರಿನ ಸಂಬಂಧಿಕರ ಮನೆ ಸೇರಿ 5 ಕಡೆ ಏಕಕಾಲದಲ್ಲಿ ಇಬ್ಬರು ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ 12 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಳಗ್ಗೆ 6 ರಿಂದ ಸಂಜೆ ವರೆಗೆ ಈ ಕಾರ್ಯಾಚರಣೆ ಕೈಗೊಂಡಿದ್ದು ಆದಾಯಕ್ಕು ಮೀರಿ ಸಂಪದಾನೆಯ ಶೋಧ ಕಾರ್ಯ ಕೈಗೊಂಡಿದೆ.
3 ನಿವೇಶನ: ಸಣ್ಣ ನೀರಾವರಿ ಇಲಾಖೆಯ ಎಇಇ ಮದುಸೂದನ್​ ತುಮಕೂರಿನಲ್ಲಿ 1.10 ಕೋ.ರೂ., ಮೌಲ್ಯದ ಮನೆ ಹೊಂದಿದ್ದು ಜತೆಗೆ 52 ಲಕ್ಷ ಮೌಲ್ಯದ 3 ನಿವೇಶನಗಳು ಅವರ ಹೆಸರಲ್ಲಿವೆ. ಕೃಷಿ ಭೂಮಿ ಮೇಲೆ ವ್ಯಾಮೋಹ ಇಲ್ಲ.
ದಾಳಿ ವೇಳೆ 11.94 ಲಕ್ಷ ರೂ., ನಗದು ಪತ್ತೆಯಾಗಿದೆ. 94 ಲಕ್ಷದ ಚಿನ್ನಾಭರಣ , 27 ಲಕ್ಷದ ವಾಹನ ಮದುಸೂದನ್​ ಹೆಸರಲ್ಲಿವೆ. ಆದಾಯಕ್ಕಿಂತ 246% ಹೆಚ್ಚು ಮೌಲ್ಯದ ಚರ&ಸ್ಥಿರಾಸ್ತಿ ಮದುಸೂದನ್​ ಹೊಂದಿರುವುದು ದಾಳಿ ವೇಳೆ ಕಂಡುಬಂದಿದ್ದು ಸಂಬಂಧಪಟ್ಟ ದಾಖಲೆಗಳನ್ನು ಲೋಕಾ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.