ವಿಜಯವಾಣಿ ಸುದ್ದಿಜಾಲ ತುಮಕೂರು
ವೈದ್ಯಕಿಯ ಸಂಶೋಧನೆ, ವೈಜ್ಞಾನಿಕ ಆವಿಷ್ಕಾರಗಳು ಹಾಗೂ ಆರೋಗ್ಯ ಕ್ಷೇತ್ರದ ನಾವೀನ್ಯತೆಗಳಲ್ಲಿ ಜಾಗತಿಕ ನಾಯಕತ್ವ ವಹಿಸುವತ್ತ ಭಾರತ ಮುನ್ನಡೆಯಬೇಕು ಎಂದು ಸಿದ್ಧಾರ್ಥ ಹೈಯರ್ ಅಕಾಡೆಮಿ ಆ್ ಎಜುಕೇಷನ್ (ಸಾಹೇ) ಕುಲಾಧಿಪತಿ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಹೊರವಲಯದ ಡಾ.ಎಚ್.ಎಂ.ಗಂಗಾಧರಯ್ಯ ಸ್ಮಾರಕ ಸಭಾಂಗಣದಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕಿಯ ಮಹಾವಿದ್ಯಾಲಯದಿಂದ ಮಂಗಳವಾರ ಆಯೋಜಿಸಿದ್ದ "ಆಧುನಿಕ ವೈದ್ಯಕಿಯಕ್ಕೆ ಬಹುಶಿಸ್ತೀಯ ವಿಧಾನಗಳು: ವೈದ್ಯಕಿಯ ಚಿಕಿತ್ಸೆ, ಸಂಶೋಧನೆ, ತಂತ್ರಜ್ಞಾನ ಮತ್ತು ಸಾರ್ವಜನಿಕ ಆರೋಗ್ಯದ ಬೆಸುಗೆ' ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಈ ನಿಟ್ಟಿನಲ್ಲಿ ಭಾರತವು ತನ್ನ ಶ್ರೀಮಂತ ವೈದ್ಯಕಿಯ ಪರಂಪರೆ ಹಾಗೂ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ವೈದ್ಯಕಿಯ ಪ್ರತಿಭೆಯನ್ನು ಬಳಸಿಕೊಳ್ಳಬೇಕಿದೆ ಎಂದರು.
ಆಯುರ್ವೇದದಿಂದ ಕೃತಕಬುದ್ಧಿಮತ್ತೆವರೆಗೆ ಸುಮಾರು 5 ಸಾವಿರ ವರ್ಷಗಳ ಭಾರತದ ವೈದ್ಯಕಿಯ ಕ್ಷೇತ್ರದ ಬೆಳವಣಿಗೆ ಬೆರಗು ಮೂಡಿಸುವಂತದ್ದು. ವೈದ್ಯಕಿಯ ಶಿಕ್ಷಣ, ಆರೋಗ್ಯ ಮೂಲಸೌಕರ್ಯ, ವಿಶೇಷ ಚಿಕಿತ್ಸಾ ಸೌಲಭ್ಯಗಳು ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ದೇಶ ಸಾಧಿಸಿರುವ ಗಮಾರ್ನ ಪ್ರಗತಿ ಸಾಧಿಸಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆ, ಸುಧಾರಿತ ರೋಗ ರ್ನಿಣಯ, ಔಷಧ ಸಂಶೋಧನೆ ಮತ್ತು ಟೆಲಿಮೆಡಿಸಿನ್ ಕ್ಷೇತ್ರಗಳು ಆರೋಗ್ಯ ಸೇವೆಯಲ್ಲಿ ಕ್ರಾಂತಿ ಕಾರಿ ಹೆಜ್ಜೆ ಇಡಲಾಗಿದೆ. ಭಾರತೀಯ ವೈದ್ಯರು ತಮ್ಮ ವೃತ್ತಿ ಸಾಮರ್ಥ್ಯ, ಜ್ಞಾನ ಮತ್ತು ಸೇವಾ ಮನೋಭಾವದಿಂದ ವಿಶ್ವದಾದ್ಯಂತ ಮನ್ನಣೆಗಳಿಸಿದ್ದಾರೆ. ಇನ್ಮುಂದೆ ಭಾರತವು ವೈಜ್ಞಾನಿಕ ಆವಿಷ್ಕಾರಗಳು ಮತ್ತು ಹೊಸ ವೈದ್ಯಕಿಯ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಈ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕು ಎಂದು ಆಶಿಸಿದರು.
ಕೇವಲ ಸಮರ್ಥ ವೈದ್ಯರನ್ನು ರೂಪಿಸುವುದಕ್ಕೆ ನಮ್ಮ ಗುರಿ ಸೀಮಿತವಾಗಬಾರದು. ವೈದ್ಯಕಿಯ ವಿಜ್ಞಾನದ ಕ್ಷಿತಿಜವನ್ನು ವಿಸ್ತರಿಸುವ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಮನುಕುಲಕ್ಕೆ ಸುಲಭವಾಗಿ ತಲುಪಿಸುವ ಅಗ್ರಗಣ್ಯ ಸಂಶೋಧಕರು, ವೈಜ್ಞಾನಿಕ ನಾವೀನ್ಯಕಾರರು ಹಾಗೂ ಮಾನವೀಯ ಮೌಲ್ಯವುಳ್ಳ ವೈದ್ಯಕಿಯ ವೃತ್ತಿಪರರನ್ನು ನಾವು ಬೆಳೆಸಬೇಕಿದೆ. ಜ್ಞಾನ ವಿನಿಮಯ, ವೈಜ್ಞಾನಿಕ ಸಹಯೋಗ ಮತ್ತು ಶೈಕ್ಷಣಿಕ ಶ್ರೇಷ್ಟತೆಗಾಗಿ ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಮೇಶ್ವರ ತಿಳಿಸಿದರು.
ಎಐ ಸಹಕಾರಿಯಾಗಲಿದೆ: ಕೃತಕಬುದ್ಧಿಮತ್ತೆ ಭವಿಷ್ಯದ ವೈದ್ಯಕಿಯ ಸೇವೆಗಳ ಸ್ವರೂಪವನ್ನೇ ಬದಲಾಯಿಸಬಲ್ಲದು. ರೋಗಗಳನ್ನು ಹೆಚ್ಚು ವೇಗವಾಗಿ ಮತ್ತು ನಿಖರವಾಗಿ ಪತ್ತೆಹಚ್ಚುವುದು. ಈ ನಿಟ್ಟಿನಲ್ಲಿ ವೈಜ್ಞಾನಿಕ ವಿಭಾಗಗಳು ಹಾಗೂ ವೈದ್ಯಕಿಯ ಸಂಸ್ಥೆಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವುದನ್ನು ಬಿಟ್ಟು, ಅಂತರ್ -ಶಿಸ್ತೀಯ ಸಂಶೋಧನೆ ಮತ್ತು ಜಾಗತಿಕ ಶೈಕ್ಷಣಿಕ ಸಹಯೋಗವನ್ನು ಅಳವಡಿಸಿ ಕೊಳ್ಳಬೇಕಿದೆ. ಕ್ಯಾನ್ಸರ್, ಮದುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಬಗೆಹರಿಯದ ವೈಜ್ಞಾನಿಕ ಸವಾಲುಗಳನ್ನು ಕೈಗೆತ್ತಿಕೊಳ್ಳುವಂತೆ ನಮ್ಮ ಜೆನ್ ಜೀ ಪೀಳಿಗೆಯ ವೈದ್ಯಕಿಯ ವೃತ್ತಿಪರರಿಗೆ ಪರಮೇಶ್ವರ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಫೋರ್ಟಿಸ್ ಆಸ್ಪತ್ರೆಯ ಅಧ್ಯಕ್ಷ ಡಾ.ವಿವೇಕ್ ಜವಳಿ, ಸಾಹೇ ವಿವಿ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವ ಡಾ.ಅಶೋಕ್ ಮೆಹ್ತಾ, ಪರೀಾಂಗ ನಿಯಂತ್ರಕ ಡಾ.ಸುನಿಲ್, ಉಪಪ್ರಾಚಾರ್ಯ, ಡಾ.ಜಿ.ಎನ್.ಪ್ರಭಾಕರ್, ಸಿದ್ಧಾರ್ಥ ದಂತ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರವಿಣ್ ಕುಡ್ವ ಎಸ್ಎಸ್ಎಂಸಿ ಸೂಪರಿಂಡೆಂಟ್ ಡಾ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ಸಿಗಲಿದೆ ಪ್ರೋತ್ಸಾಹ ಧನ: ಶ್ರೀ ಸಿದ್ಧಾರ್ಥ ಸಂಸ್ಥೆಗಳಲ್ಲಿ ಸಂಶೋಧನಾ ಸಂಸತಿಯನ್ನು ಬಲಪಡಿಸುವ ನಿಟ್ಟಿನಲ್ಲಿ, ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ (ರ್ಜನಲ್) ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ವಿದ್ಯಾರ್ಥಿಗಳಿಗೆ 25,000 ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸುವವರಿಗೆ 50,000 ರೂ. ಪ್ರೋತ್ಸಾಹ ಧನವನ್ನು ಘೋಷಿಸಿದೆ. ಇದರೊಂದಿಗೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಲು ಪ್ರಯಾಣ ಮತ್ತು ನೋಂದಣಿ ವೆಚ್ಚವನ್ನು ಸಂಸ್ಥೆಯಿಂದಲೇ ಭರಿಸಲಾಗುವುದು. ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಶೈಕ್ಷಣಿಕ ಅವಕಾಶಗಳನ್ನು ಪಡೆಯಲು ಮತ್ತು ಜಾಗತಿಕ ಮಟ್ಟದ ಸಂಶೋಧನಾ ಅನುಭವವನ್ನು ಗಳಿಸಲು ಸದಾ ಬೆಂಬಲವಾಗಿ ಸಂಸ್ಥೆ ನಿಲ್ಲಲಿದೆ ಎಂದು ಪರಮೇಶ್ವರ ಭರವಸೆ ನೀಡಿದರು.
18 ಟಿಎಂಕೆ ಎಸ್ಎಸ್ಎಂಸಿ : ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕಿಯ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಹೊರತಂದಿರುವ ವಿಶೇಷ ಸಂಚಿಕೆಯನ್ನು ಡಾ.ಜಿ.ಪರಮೇಶ್ವರ ಬಿಡುಗಡೆಗೊಳಿಸಿದರು. ಡಾ.ವಿವೇಕ್ ಜವಳಿ, ಡಾ.ಕೆ.ಬಿ.ಲಿಂಗೇಗೌಡ, ಡಾ.ಅಶೋಕ್ ಮೆಹ್ತಾ, ಡಾ.ಸುನಿಲ್, ಡಾ.ಪ್ರವಿಣ್ ಕುಡ್ವ ಮತ್ತಿತರರು ಇದ್ದರು.
ವೈದ್ಯಕಿಯ ಶಿಕ್ಷಣವು ನಿರಂತರ ಕಲಿಕೆ, ತ್ಯಾಗ ಮತ್ತು ಸಮರ್ಪಣಾಭಾವವನ್ನು ಬೇಡುವ ಜೀವನಪರ್ಯಂತದ ಪಯಣವಾಗಿದೆ. ವೈದ್ಯರು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ವೈದ್ಯಕಿಯ ವಿಜ್ಞಾನದ ಬೆಳವಣಿಗೆ ಜತೆಜತೆಗೆ ಮಾನವಕಲ್ಯಾಣ್ಕಾಗಿ ಸೇವೆ ಸಲ್ಲಿಸುವ ಬದ್ಧತೆ ರೂಢಿಸಿಕೊಳ್ಳಬೇಕು.
- ಡಾ.ಜಿ.ಪರಮೇಶ್ವರ, ಡಿಸಿಎಂ