ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಉನ್ನತಮಟ್ಟದ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ಅರಣ್ಯ ಕಾರ್ಯಪಡೆ ಮುಖ್ಯಸ್ಥೆ ವೀನಾಕ್ಷಿ ನೇಗಿ, ಮುಖ್ಯ ವನ್ಯಜಿವಿ ಪರಿಪಾಲಕ ಕುಮಾರ ಪುಷ್ಕರ್​, ಪಿಸಿಸಿಎ್​ ರಾಧಾದೇವಿ ಮತ್ತಿತರರು ಭಾಗವಹಿಸಿದ್ದರು.  
ತುಮಕೂರು

ತುಮಕೂರಿಗೆ ಪ್ರತ್ಯೇಕ ಚಿರತೆ ಟಾಸ್ಕ್​ ಪೋರ್ಸ್​

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಚಿರತೆ ಉಪಟಳ
  • ಕಾರ್ಯಪಡೆ ರಚನೆಗೆ ಪ್ರಸ್ತಾವನೆಗೆ ಸಲ್ಲಿಕೆ
  • ಚಿರತೆ-ಮಾನವ ಸಂಘರ್ಷ
ತುಮಕೂರು: ಜಿಲ್ಲೆಯಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು ನಾಡಿನತ್ತ ನುಗ್ಗುತ್ತಿರುವ ಚಿರತೆಗಳನ್ನು ಸುರತವಾಗಿ ಹಿಡಿದು ಕಾಡಿಗೆ ಮರಳಿಸಲು ವಿಶೇಷ ಚಿರತೆ ಕಾರ್ಯಪಡೆಯನ್ನು ರಚನೆಗೆ ಸರ್ಕಾರ ಮುಂದಾಗಿದೆ.
ಗ್ರಾಮೀಣಭಾಗಗಳಲ್ಲದೆ, ನಗರ ಪ್ರದೇಶಗಳತ್ತ ಚಿರತೆ ಆಹಾರ ಅರಸಿ ಬರುತ್ತಿದ್ದು ಜಿಲ್ಲೆಯಲ್ಲೆಡೆ ಚಿರತೆ ಭೀತಿ ಉಂಟಾಗಿದೆ. ಚಿರತೆ-ಮಾನವ ಸಂಘರ್ಷವನ್ನು ತಪ್ಪಿಸಲು, ಜನವಸತಿ ಪ್ರದೇಶಗಳಲ್ಲಿ ಕಾರಣಿಸಿಕೊಳ್ಳುವ ಚಿರತೆಗಳನ್ನು ಸೆರೆಹಿಡಿದು ಸುರತವಾಗಿ ಸ್ವಸ್ಥಾನಕ್ಕೆ ಮರಳಿಸುವ ಅಥವಾ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ಚಿರತೆ ಕಾರ್ಯಪಡೆ ರಚನೆಗೆ ಕೂಡಲೆ ಪ್ರಕ್ರಿಯೆ ಆರಂಭಿಸಲು ಅರಣ್ಯ ಇಲಾಖೆ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ಗುರುವಾರ ಅರಣ್ಯ ಇಲಾಖೆ ಉನ್ನತಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ತುಮಕೂರು ಜಿಲ್ಲೆಗೆ ಪ್ರತ್ಯೇಕ ಚಿರತೆ ಕಾರ್ಯಪಡೆ ರಚನೆಗೆ ತತ್​ಕ್ಷಣವೇ ಕ್ರಮವಹಿಸಬೇಕಿದೆ.
ಚಿರತೆಗಳು ಜನವಸತಿ ಪ್ರದೇಶಗಳತ್ತ ನುಗ್ಗಿ ಬಂದಾಗ ಜನರು ಭಯಭೀತರಾಗುತ್ತಾರೆ. ಹಾಗಾಗಿ, ತಕ್ಷಣ ಸ್ಪಂದಿಸುವ ಅಗತ್ಯವಿದ್ದು, ಅವುಗಳನ್ನು ಸೆರೆ ಹಿಡಿಯುವ ಸಿಬ್ಬಂದಿಗೆ ಸುರಕ್ಷತಾ ಉಪಕರಣಗಳು, ಬೋನುಗಳು ಮತ್ತು ವಿಶೇಷ ವಿನ್ಯಾಸದ ವಾಹನ ಒದಗಿಸುವಂತೆ ಸಚಿವರು ಆದೇಶಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥೆ ವೀನಾಕ್ಷಿ ನೇಗಿ, ಮುಖ್ಯ ವನ್ಯಜಿವಿ ಪರಿಪಾಲಕ ಕುಮಾರ ಪುಷ್ಕರ್​, ಪಿಸಿಸಿಎಫ್​ ರಾಧಾದೇವಿ ಮತ್ತಿತರರು ಉಪಸ್ಥಿತರಿದ್ದರು.
ಚಿರತೆ ಟಾಸ್ಕ್​ ಪೋರ್ಸ್​?
ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿರತೆ ಟಾಸ್ಕ್​ ಪೋರ್ಸ್​ ಮುಖ್ಯಸ್ಥರಾಗಲಿದ್ದು ತಲಾ ಒಬ್ಬರು ಎಸಿಎಫ್​ , ಪಶುವೈದ್ಯರು, ಒಬ್ಬ ವಲಯ ಅರಣ್ಯಾಧಿಕಾರಿ, ವಾಹನ ಚಾಲಕ ಇರಲಿದ್ದಾರೆ. ಈ ಟಾಸ್ಕ್​ ಪೋರ್ಸ್​ಗೆ ಬೋನು ಹೊಯ್ಯವು ಒಂದು ವಿಶೇಷ ವಿನ್ಯಾಸದ ವಾಹನ, ಟ್ರಾಂಕ್ವಲೈಸರ್​ ಗನ್​ (ಅರವಳಿಕೆ ನೀಡುವ ), ಅರವಳಿಕೆ ಕಿಟ್​ ಹಾಗೂ ಟಾಸ್ಕ್​ ಪೋರ್ಸ್​​ ಪಡೆ ಸಿಬ್ಬಂದಿಗೆ ಸುರಕ್ಷತಾ ಉಪಕರಣಗಳ (ಎಲ್ಬೋ ಗಾರ್ಡ್​, ಗ್ಲೌಸ್​, ಹೆಲ್ಮೆಟ್​) ಅವಶ್ಯಕತೆ ಇದೆ. ಚಿರತೆ ಹಾವಳಿ ಹೆಚ್ಚಿರುವ ಕಡೆ ಈ ಟಾಸ್ಕ್​ ಪೋರ್ಸ್​ ಗಸ್ತು ತಿರುಗಲಿದೆ. ಚಿರತೆ ಸೆರೆಹಿಡಿಯುವ ಹೊಣೆ ಟಾಸ್ಕ್​ ಪೋರ್ಸ್​​ನದ್ದಾಗಿರಲಿದೆ.
ವನ್ಯಜಿವಿಗಳ ಆವಾಸ್ಥಾನಕ್ಕೆ ಧಕ್ಕೆ
ಎಂ ಸ್ಯಾಂಡ್​ ಬಳಕೆ ಹೆಚ್ಚಿರುವುದರಿಂದ ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ಕ್ರಷರ್​ಗಳು ತಲೆಎತ್ತಿವೆ. ಕ್ರಷರ್​ಗಳು ಬಂಡೆ ಸ್ಫೋಟಕಗಳನ್ನು ಬಳಸುತ್ತಿದ್ದು ಆವಾಸ್ಥಾನವನ್ನು ವನ್ಯಜಿವಿಗಳು ತೊರೆಯುವಂತಾಗಿದೆ. ಆ ಕಾರಣಕ್ಕೆ ಹಾಗೂ ಆಹಾರ ಅರಸಿ ಚಿರತೆಗಳು ಗ್ರಾಮಗಳು, ನಗರ ಪ್ರದೇಶಗಳ ಜನವಸತಿ ಪ್ರದೇಶಗಳತ್ತ ಧಾವಿಸುತ್ತಿವೆ. ಚಿರತೆಗಳು ಸಾಕಪ್ರಾಣಿಗಳನ್ನಲ್ಲದೆ ಕೆಲವೊಮ್ಮೆ ಮನುಷ್ಯರನ್ನು ಬಲಿ ತೆಗೆದುಕೊಂಡು ನಿದರ್ಶನಗಳಿವೆ. ಇತ್ತೀಚೆಗೆ ಒಂದಲ್ಲ ಒಂದು ಹಳ್ಳಿಯಲ್ಲಿ ಚಿರತೆ ಕಾಣಿಸಿಕೊಂಡ ವರದಿಯಾಗುತ್ತಲೇ ಇವೆ. ಹಾಗಾಗಿ, ಜಿಲ್ಲಾ ಅರಣ್ಯಾಧಿಕಾರಿಗಳು ಎರಡು ಬಾರಿ ಕಾರ್ಯಪಡೆ ರಚನೆಗೆ ಪ್ರಸ್ತಾವನೆ ಸಲ್ಲಿಸಿದ್ದು ಅಂತಿಮವಾಗಿ ಚಿರತೆ ಕಾರ್ಯಪಡೆ ರಚನೆಗೆ ಸಚಿವ ಈಶ್ವರ್​ ಖಂಡ್ರೆ ಗ್ರೀನ್​ ಸಿಗ್ನಲ್​ ತೋರಿಸಿದ್ದಾರೆ.