Leave the mobile and read the textbook
ಹುಳಿಯಾರು: ವಿದ್ಯಾರ್ಥಿಗಳು ಮೊಬೈಲ್ಗಾಗಿ ವ್ಯರ್ಥ ಮಾಡುತ್ತಿರುವ ಅಮೂಲ್ಯ ಸಮಯವನ್ನು ಪಠ್ಯಪುಸ್ತಕಗಳ ಅಧ್ಯಯನಕ್ಕೆ ಮೀಸಲಿಟ್ಟರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದು ನಿಶ್ಚಿತ ಎಂದು ಪ್ರಾಂಶುಪಾಲ ಎನ್.ಜಿ.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ೋನ್ಗಳಲ್ಲಿ ಸಮಯದ ಪರಿವಿಲ್ಲದೆ "ರೀಲ್ಸ್' ಮತ್ತು ಸಾಮಾಜಿಕ ಜಾಲತಾಣಗಳನ್ನು ನೋಡುವುದರಲ್ಲೇ ಮುಳುಗಿದೆ. ಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಚಟಕ್ಕೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ತಂತ್ರಜ್ಞಾನವು ಜ್ಞಾನಾರ್ಜನೆಗೆ ಪೂರಕವಾಗಿರಬೇಕೇ ವಿನ@ ಭವಿಷ್ಯವನ್ನು ಹಾಳುಗೆಡವಬಾರದು ಎಂದು ಎಚ್ಚರಿಸಿದರು.
ಪಾಲಕರು ಪಿಯುಸಿ ಹಂತಕ್ಕೆ ಬಂದಾಗ ಸಾವಿರಾರು ರೂ. ವೆಚ್ಚ ಮಾಡಿ ಪಠ್ಯಪುಸ್ತಕಗಳನ್ನು ಖರೀದಿಸಬೇಕಾಗಿತ್ತು. ಆದರೆ, ಈ ಬಾರಿ ಸರ್ಕಾರ ವಿದ್ಯಾರ್ಥಿ ಕಲ್ಯಾಣದತ್ತ ಮಹತ್ವದ ಹೆಜ್ಜೆಯಿಟ್ಟು, ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪುಸ್ತಕ ಭಾಗ್ಯ ಕಲ್ಪಿಸಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಮತ್ತು ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಿರ್ಧಾರ ವರದಾನವಾಗಿ ಪರಿಣಮಿಸಿದೆ. ಸರ್ಕಾರ ನೀಡುತ್ತಿರುವ ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.