Leave the Link Canal and proceed along the Goat Trail. 
ತುಮಕೂರು

ಲಿಂಕ್​ ಕೆನಾಲ್​ ಬಿಟ್ಟು ಮೇಕೆದಾಟು ಜಾರಿ ಮಾಡಿ

ತುರುವೇಕೆರೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ತಮ್ಮ ಸರ್ಕಾರದಲ್ಲಿ ಮೇಕೆದಾಟು ಯೋಜನೆಯನ್ನು ಜಾರಿ ಮಾಡಿ ತೋರಿಸಲಿ. ಅದನ್ನು ಬಿಟ್ಟು ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಮೂಲಕ ನಮ್ಮ ಜಿಲ್ಲೆಯ ರೈತರ ಪಾಲಿನ ಹೇಮಾವತಿ ನೀರುನ್ನು ಕಿತ್ತು ಕೊಳ್ಳವ ಕೆಲಸ ಮಾಡಬೇಡಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಸವಾಲು ಹಾಕಿದರು.
ತಾಲೂಕಿನ ಅರೇಮಲ್ಲೇನಹಳ್ಳಿ ರಂಗನಾಥಸ್ವಾಮಿ ಬೆಟ್ಟದಲ್ಲಿ ತುಮುಲ್​, ಜಿಲ್ಲಾ ರೈತರ ಮತ್ತು ಎಂಪಿಸಿಎಸ್​ ನೌಕರರ ಮತ್ತು ಸಾಮಾನ್ಯ ಕಲ್ಯಾಣ ಟ್ರಸ್ಟ್​ ಮಲ್ಲಸಂದ್ರ, ತುಮಕೂರು ಪಶುಪಾಲನಾ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆ, ಆದಿಚುಂಚನಗಿರಿ ಆಸ್ಪತ್ರೆ, ಸಿದ್ಧಗಂಗಾ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಅರೇಮಲ್ಲೇನಹಳ್ಳಿ ಡೇರಿ ಸಹಯೋಗದಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹೇಮಾವತಿ ಲಿಂಕ್​ ಕೇನಾಲ್​ ಮೂಲಕ ಪೈಪ್​ಲೈನ್​ ಮೂಲಕ ಕುಣಿಗಲ್​ ಎಂದು ಹೆಸರು ಹೇಳಿ ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವ ಹುನ್ನಾರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ನಡೆಸುತ್ತಿದ್ದಾರೆ. ಮೇಕೆದಾಟು ಬಗ್ಗೆ ಪಾದಯಾತ್ರೆ ಮಾಡಿದ್ದ ಟಿಕೆಶಿ ಮೇಕೆದಾಟು ಯೋಜನೆಯನ್ನು ಸರ್ಕಾರದಿಂದ ಕೈಗೆತ್ತಿಕೊಂಡು ಇಡೀ ರಾಮನಗರ, ಮಾಗಡಿ ಸೇರಿದಂತೆ ಬೆಂಗಳೂರಿಗೂ ನೀರು ನೀಡಬಹುದು. ಅದನ್ನು ಮಾಡಲು ಸಾಧ್ಯವಾಗದೇ ಜಿಲ್ಲೆಯ ರೈತರ ಮರಣ ಶಾಸನವಾಗಿರುವ ಎಕ್ಸ್​ಪ್ರಸ್​ ಕೆನಾಲ್​ ಯೋಜನೆ ಮೂಲಕ ತೆಗೆದುಕೊಳ್ಳುವುದನ್ನು ಕೈಬಿಡಬೇಕು ಇಲ್ಲದಿದ್ದರೇ ನಾವು ಮತ್ತೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ತುಮುಲ್​ ನಿರ್ದೇಶಕಸಿ.ವಿ.ಮಹಾಲಿಂಗಯ್ಯ ಮಾತನಾಡಿದರು.
ಮುಖಂಡರಾದ ಕೊಂಡಜ್ಜಿ ವಿಶ್ವನಾಥ್​, ಪ್ರೊ.ಪುಟ್ಟರಂಗಪ್ಪ, ರಾಮೇಗೌಡ, ಸ್ವಾಮಿ, ಸಿದ್ಧಗಂಗಾ ಆಸ್ಪತ್ರೆ ವೈದ್ಯರಾದ ಜೆ.ಎಂ.ಅಭಿಜ್ಞಾ, ಡಾ.ಶರಣ್​, ತುಮುಲ್​ ವ್ಯವಸ್ಥಾಪಕರಾದಜಿ.ಶ್ರೀನಿವಾಸನ್​, ಶಿವಪ್ರಸಾದ್​, ಬಿ.ಶ್ರೀನಿವಾಸ್​, ಚಂದ್ರಶೇಖರ ಕೇದನೂರಿ ಮತ್ತಿತರರು ಇದ್ದರು.