KPS school supports bilingual education
ಐ.ಡಿ.ಹಳ್ಳಿ: ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಒಂದೇ ಸೂರಿನಡಿ ದ್ವಿಭಾಷೆಯ ಶಿಕ್ಷಣ ಪಡೆಯಲು ಕೆಪಿಎಸ್ ಶಾಲೆ ವರದಾನವಾಗಿದೆ ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಮಾದವ ರೆಡ್ಡಿ ತಿಳಿಸಿದರು.
ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕೆಪಿಎಸ್ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಈ ಹಿಂದೆ ಐ.ಡಿ.ಹಳ್ಳಿಯಲ್ಲಿ ಶಾಲೆ ಬಿಟ್ಟಾಗ ವಿದ್ಯಾರ್ಥಿಗಳು ರಸ್ತೆ ಊದಕ್ಕೂ ಇರುತ್ತಿದ್ದರು. ಆದರೆ ಇಂದು ಖಾಸಗಿ ಶಾಲೆಗಳ ವ್ಯಾಮೋಹ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕಡಿಮೆಯಾಗಿದೆ. ಸರ್ಕಾರ ಇಂದು ವಿದ್ಯಾರ್ಥಿಗಳ ಸುಂದರ ಭವಿಷ್ಯಕ್ಕೆ ಕೆಪಿಎಸ್ ಶಾಲೆಗಳನ್ನು ಪ್ರಾರಭಿಸಿದ್ದು, ಒಂದೇ ಸೂರಿನಡಿ ವಿದ್ಯಾರ್ಥಿಗಳು 1ರಿಂದ ಪಿಯುವರೆಗೆ ನಿರಂತರ ಶಿಕ್ಷಣ ಪಡೆಯಬಹುದಾಗಿದೆ ಎಂದರು.
ಮಧುಗಿರಿ ತಾಪಂ ಇಒ ಉತ್ತಮ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಸಾಮಾಜಿಕ ವಾತಾವರಣ, ಸಾಮಾಜಿಕ ಸೌರ್ಹಾದತೆ, ಸಮುದಾಯ ಸಹೋದರತ್ವ ಕಲಿಸಬೇಕು. 1ರಿಂದ 5ನೇ ತರಗತಿಯವರೆಗೆ ಏಕ ಶಿಕ್ಷಕ ಇದ್ದಾಗ ಮಕ್ಕಳಲ್ಲಿ ಹೊಸತನ ಮೂಡುವುದಿಲ್ಲ. ಆದ್ದರಿಂದ ಇಂದು ಪರಿವರ್ತನೆಯಾಗುತ್ತಿರುವ ಮತ್ತು ಕೌಶಲಮಯ ವಾತಾವರಣ ಇರುವಾಗ ಶಾಲೆಯಲ್ಲಿ ಹೊಸತನ ಇರಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುರೇಂದ್ರ ಕುಮಾರ್ ಮಾತನಾಡಿ, ಈ ಹೋಬಳಿಯಲ್ಲಿ ಎರಡು ಕೆಪಿಎಸ್ ಶಾಲೆಗಳು ಮಂಜೂರುರಾಗಿದ್ದು, ಇದು ಈ ಭಾಗದ ವಿದ್ಯಾರ್ಥಿಗಳಿಗೆ ವರವಾಗಿದೆ ಎಂದು ತಿಳಿಸಿದರು. ಬಿಇಒ ಹನುಮಂತರಾಯಪ್ಪ, ಸಿಆರ್ಪಿ ರಮೇಶ್, ಕಾಲೇಜು ಅಭಿವೃಧ್ಧಿ ಸಮಿತಿ ಉಪಾಧ್ಯಕ್ಷ ಸುರೇಂದ್ರ ಕುಮಾರ್, ಪ್ರೌಢಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ನಾಯಕ, ಸಂಜಯ್, ಗ್ರಾಪಂ ಮಾಜಿ ಅಧ್ಯಕ್ಷ ಶನಿವಾರಮರೆಡ್ಡಿ, ಸದಾಶಿವರೆಡ್ಡಿ, ವಕೀಲ ನರಸಿಂಹಮೂರ್ತಿ ಮತ್ತಿತರರು ಇದ್ದರು.