Kollapuradamma Devdi Mandal Pooja Sampanna 
ತುಮಕೂರು

ಕೊಲ್ಲಾಪುರದಮ್ಮ ದೇವ್ದಿ ಮಂಡಲ ಪೂಜೆ ಸಂಪನ್ನ

ಗುಬ್ಬಿ: ತಾಲೂಕಿನ ಸಿಎಸ್​.ಪುರ ಹೋಬಳಿ ಇಡಗೂರು ಗ್ರಾಮದ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಂಡಲ ಪೂಜಾ ಮಹೋತ್ಸವವು ಭಾನುವಾರ ಭಕ್ತರ ಸಮ್ಮಖದಲ್ಲಿ ಸಂಪನ್ನಗೊಂಡಿತು.
ಮಂಡಲ ಪೂಜೆಯ ಅಂಗವಾಗಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮಗಳು ಸಡಗರದಿಂದ ನೆರವೇರಿದವು. ಗಣಪತಿ, ನವಗ್ರಹ ಹೋಮ ಹಾಗೂ ಮಂಡಲ ಪೂಜೆಯ ಪೂರ್ಣಾಹುತಿ ಹೋಮಗಳನ್ನು ನೆರವೇರಿಸಲಾಯಿತು.
ಮಧ್ಯಾಹ್ನ 12.30ಕ್ಕೆ ವೇದಘೋಷಗಳ ನಡುವೆ ದೇವಿಗೆ ಮಹಾಮಂಗಳಾರತಿ ಬೆಳಗಿ, ಕಲ್ಪೋಕ್ತ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ದೇವಸ್ಥಾನದ ಸಮಿತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು
ಕಳೆದ 48 ದಿನಗಳಿಂದ ಪೂಜಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸ್ಥಳಿಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ಸುತ್ತ ಮತ್ತಲ ಗ್ರಾಮಸ್ಥರು ಇದ್ದರು.