Kempegowda Jayanti celebration on the 27th 
ತುಮಕೂರು

27ರಂದು ಕೆಂಪೇಗೌಡ ಜಯಂತಿ ಆಚರಣೆ

ವಿಜಯವಾಣಿ ಸುದ್ದಿಜಾಲ ತುರುವೇಕೆರೆ
ತಾಲೂಕು ಆಡಳಿತ, ತಾಲೂಕಿನ ವಿವಿಧ ಒಕ್ಕಲಿಗರ ಸಂಘದ ನೆರವಿನೊಂದಿಗೆ ಜೂ.27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಹಾಗೂ ಒಕ್ಕಲಿಗರ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಎಸ್​.ಬಡಗರಹಳ್ಳಿ ತ್ಯಾಗರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.27 ರಂದು ಬೆಳಗ್ಗೆ 10 ಗಂಟೆಯಿಂದ ತಾಲೂಕು ಕಚೇರಿ ಮುಂಭಾಗದಿಂದ ಜಾನಪದ ಕಲಾಮೇಳಗಳು, ಎತ್ತಿನಗಾಡಿ ಮೆರವಣಿಗೆ, ಸೋಮನ ಕುಣಿತ, ಕುದುರೆಯ ಮೇಲೆ ಕೆಂಪೇಗೌಡರ ವೇಷಧಾರಿ ಮೆರವಣಿಗೆ, ನಗಾರಿ ಸಮೇತ ಬಸವಣ್ಣನ ಮೆರವಣಿಗೆ, ಚಂಡೆವಾದ್ಯ, ಕೋಲಾಟ, ರಂಗನ ಕುಣಿತ, ಹಾಗೂ ಸಿಡಿಮದ್ದಿನ ಚಮತ್ಕಾರದೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ದಬ್ಬೇಘಟ್ಟ ರಸ್ತೆಯಲ್ಲಿರುವ ಬಿಜಿಎಸ್​ ಸಮುದಾಯ ಭವನಕ್ಕೆ ಕರೆ ತರಲಾಗುವುದು. ಇದಕ್ಕೂ ಮೊದಲು ಬಿಜಿಎಸ್​ ಒಕ್ಕಲಿಗರ ಸಮುದಾಯ ಭವನದ ಮುಂಭಾಗದಿಂದ ನೂರಾರು ಯುವಕರಿಂದ ಬೈಕ್​ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.97ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದು ತಿಳಿಸಿದರು. ಟೌನ್​ ಬ್ಯಾಂಕ್​ ಮಾಜಿ ಅಧ್ಯಕ್ಷ ಎಚ್​.ಆರ್​.ರಾಮೇಗೌಡ, ಪ್ರಹ್ಲಾದ್​, ವಿಜಯೇಂದ್ರ ಇದ್ದರು.
25ಟಿವಿಕೆ1
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸದ್ದ ಸುದ್ದಿಗೋಷ್ಠಿಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಡಗರಹಳ್ಳಿ ತ್ಯಾಗರಾಜ್​ ಮಾತನಾಡಿದರು. ಸಂಘದ ಉಪಾಧ್ಯಕ್ಷ ಮಂಗೀಕುಪ್ಪೆ ಬಸವರಾಜು, ಕಾರ್ಯದರ್ಶಿ ಎ.ಬಿ.ಜಗದೀಶ್​, ಡಾ,ನವೀನ್​, ಎಪಿಎಂಸಿ ಅಧ್ಯಕ್ಷ ಎಂ.ಡಿ.ರಮೇಶ್​ ಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ ಮತ್ತಿತರರಿದ್ದರು.