ಖೋಖೋ ಪಂದ್ಯದಲ್ಲಿ ದಕ್ಷಿಣ ಕನ್ನಡದ ಆಟಗಾರನ ಪೋಲ್ ಡೈವ್.
- ಕರ್ನಾಟಕ ಕ್ರೀಡಾಕೂಟ
- ಶಿವಮೊಗ್ಗ, ಮಂಡ್ಯಕ್ಕೆ ಕಂಚು
- ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯ
ತುಮಕೂರು: ಬೆಂಗಳೂರು ನಗರ ಮತ್ತು ಮೈಸೂರು ತಂಡಗಳು ಕರ್ನಾಟಕ ಕ್ರೀಡಾಕೂಟದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದ ಖೋಖೋ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದವು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಪುರುಷರ ಖೋಖೋ ಫೈನಲ್ ಪಂದ್ಯದಲ್ಲಿ ಬೆಂಗಳೂರು ನಗರ ತಂಡ 18-&15 ರಿಂದ ದಕ್ಷಿಣಕನ್ನಡ ವಿರುದ್ಧ ಜಯ ಸಾಧಿಸಿ ಚಿನ್ನದ ಪದಕ ಗೆದ್ದಿತು. ಶಿವಮೊಗ್ಗ ಪುರುಷರ ತಂಡ ಕಂಚಿನ ಪದಕ ಪಡೆಯಿತು.
ಮಹಿಳೆಯರ ಫೈನಲ್ ನಲ್ಲಿ ಮೈಸೂರು ತಂಡ ಇನ್ನಿಂಗ್ಸ್ ಹಾಗೂ 3 ಅಂಕಗಳಿಂದ ಬೆಂಗಳೂರು ನಗರ ತಂಡವನ್ನ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು.
ಬೆಂಗಳೂರು ನಗರ ಬೆಳ್ಳಿ ಹಾಗೂ ಮಂಡ್ಯ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡವು.