ತುಮಕೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟದ ಅಥ್ಲಿಟಿಕ್​ ಸ್ಪರ್ಧೆಯ ಮಹಿಳೆಯರ 100 ಮೀ., ಓಟದ ನೋಟ. 
ತುಮಕೂರು

ಗೌತಮ್​, ವೈಭವಿ ಚಿನ್ನದ ಓಟ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಕ್ರೀಡಾಕೂಟಕ್ಕೆ ಅದ್ದೂರಿ ತೆರೆ
  • ಮುಂದಿನ ಕೂಟ ವಿಜಯಪುರ-ಬಾಗಲಕೋಟೆ
  • ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ತುಮಕೂರು: ಶಿವಮೊಗ್ಗದ ಎಂ.ಗೌತಮ್​ ಹಾಗೂ ಬೆಳಗಾವಿ ವೈಭವಿ ಬದ್ರೂಕ್​ ಕರ್ನಾಟಕ ಕ್ರೀಡಾಕೂಟ 2025-26ನೇ ಸಾಲಿನ ಅಥ್ಲಿಟಿಕ್ಸ್​ನಲ್ಲಿ ವೇಗದ ರಾಜ, ರಾಣಿ ಎನಿಸಿದರು. ಇದರೊಂದಿಗೆ ತುಮಕೂರಿನಲ್ಲಿ ನಡೆದ 7 ದಿನಗಳ ಕರ್ನಾಟಕ ಕ್ರೀಡಾಕೂಟಕ್ಕೆ ವೈಭವದ ತೆರೆಬಿತ್ತು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಕರ್ನಾಟಕ ಕ್ರೀಡಾಕೂಟದ ಅಂತಿಮದಿನ ಪುರುಷರ 100 ಮೀ., ಓಟದ ಸ್ಪರ್ಧೆಯಲ್ಲಿ ಗೌತಮ್​ 10.40 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದುಕೊಂಡರು. ಉಡುಪಿಯ ಡಿ.ಧನುಶ್​ (10.70 ಸೆ.) ಬೆಳ್ಳಿ ಗೆದ್ದರೆ, ಉಡುಪಿಯ ಪಿ.ಭವಿಶ್​ (10.80 ಸೆ.) ಕಂಚಿನ ಪದಕ ಪಡೆದರು.
ಮಹಿಳೆಯರ 100 ಮೀ., ಓಟದ ಸ್ಪರ್ಧೆಯಲ್ಲಿ ಬೆಳಗಾವಿಯ ವೈಭವಿ 12.21 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಕೊರಳೊಡ್ಡಿದರು. ಮೈಸೂರಿನ ಎಚ್​.ಎಸ್​.ಹರ್ಷಿತ (12.31 ಸೆ.) ಬೆಳ್ಳಿ ಗೆದ್ದರೆ, ಮೈಸೂರಿನ ಎಂ.ಮಮತ (12.56 ಸೆ.) ಕಂಚಿಗೆ ತೃಪ್ತಿಪಟ್ಟುಕೊಂಡರು.
ಶ್ರೇಷ್ಟ ಅಥ್ಲೀಟ್​: ಶಿವಮೊಗ್ಗದ ಎಂ.ಗೌತಮ್​ ಹಾಗೂ ದಕ್ಷಿಣ ಕನ್ನಡದ ಶ್ರಾವಣಿ ಭಾಟೆ ಕ್ರೀಡಾಕೂಟದ ಶ್ರೇಷ್ಟ ಅಥ್ಲೀಟ್​ ಪುರಸ್ಕಾರಕ್ಕೆ ಭಾಜನರಾದರು.
ಪುರುಷರ ವಿಭಾಗ:
5000 ಮೀ., ಓಟ: 1. ವೈಭವ್​ ಎಂ. ಪಾಟೀಲ್​ (ಬೆಳಗಾವಿ), 2. ಎಸ್​.ಭೀಮಾಶಂಕರ್​ (ಯಾದಗಿರಿ), 3. ಆರ್​.ಕೀರ್ತಿ (ದಾವಣಗೆರೆ)
400 ಮೀ., ಹರ್ಡಲ್ಸ್​: 1. ವೀರೇಶ್​ ಬಿ.ಕಾಂಬ್ಳೆ (ಬೆಳಗಾವಿ), 2. ಸೂರಜ್​ ಆರ್​.ಬಾಳೇಕುಂದ್ರಿ (ಬೆಳಗಾವಿ), 3. ಜಾಗೃತ್​ (ಬೆಂಗಳೂರುನಗರ)
ಹೈಜಂಪ್​: 1. ಅಭಯ್​ ಕುಮಾರ್​ ಗೌಡ (ಬೆಂಗಳೂರು ನಗರ) . 2. ಎಸ್​.ಹರ್ಷಿತ್​ (ಬೆಂಗಳೂರು ನಗರ), 3. ತ್ರಿಲೋಕ್​ ಒಡೆಯರ್​ (ಬೆಂಗಳೂರು ನಗರ)
ಶಾಟ್​ಪಟ್​: 1. ಪ್ರಜ್ವಲ್​ ಎಂ.ಶೆಟ್ಟಿ (ಉಡುಪಿ), 2. ಪಿ.ಎಂ.ಮಣಿಕಂಠ (ಕೊಡಗು), 3. ಇ.ಮೋಹನ್​ (ಮೈಸೂರು)
ಜಾವೆಲಿನ್​ ಥ್ರೋ: 1. ಕಲ್ಲೋಳೆಪ್ಪ (ಬೆಳಗಾವಿ), 2. ಶಾರುಖ್​ (ಬೆಂಗಳೂರು ನಗರ), 3. ಯುವರಾಜ್​ ಲಮಾಣಿ (ಬಾಗಲಕೋಟೆ)
ಹ್ಯಾಮೆರ್​ ಥ್ರೋ: 1. ಧೀರಜ್​ ಪೂಜಾರಿ (ಉಡುಪಿ), 2. ಸುದೀಪ್​ (ಶಿವಮೊಗ್ಗ), 3. ಅಬ್ದುಲ್​ ರಜಾಕ್​ (ದ.ಕನ್ನಡ)
ಮಹಿಳೆಯರ ವಿಭಾಗ
5000 ಮೀ., ಓಟ: 1. ಎನ್​.ಎಲ್​.ತೇಜಸ್ವಿ (ಬೆಂಗಳೂರು ನಗರ), 2. ಜಿ.ನಂದಿನಿ (ಉಡುಪಿ), 3. ಪ್ರಣತಿ (ಬೆಂಗಳೂರು ಗ್ರಾಮಾಂತರ)
400 ಮೀ., ಹರ್ಡಲ್ಸ್​ : 1. ಮೇಘಾ ಮುನವಳ್ಳಿ ಮಠ (ಗದಗ), 2. ಅಪೂರ್ವನಾಯಕ್​ (ಬೆಳಗಾವಿ), 3. ರಮ್ಯಾ ಕದಂ (ವಿಜಯಪುರ)
ಹೈಜಂಪ್​: 1. ತ್ರಿಷ್ಣವಿ (ಉಡುಪಿ)
ವಿಜಯಪುರ-ಬಾಗಲಕೋಟೆಯಲ್ಲಿ ಮುಂದಿನ ಕೂಟ
ಮುಂದಿನ ವರ್ಷದ ಕರ್ನಾಟಕ ಕ್ರೀಡಾಕೂಟದ ಆತಿಥ್ಯ ವಿಜಯಪುರ&ಬಾಗಲಕೋಟೆ ವಹಿಸಲಿವೆ ಎಂದು ಕೆಒಎ ಅಧ್ಯಕ್ಷ ಕೆ.ಗೋವಿಂದರಾಜು ಪ್ರಕಟಿಸಿದರು.