ತುಮಕೂರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಪಿ.ಆರ್​.ತಿಪ್ಪೇಸ್ವಾಮಿ ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಕೆ.ಎನ್​.ರಾಜಣ್ಣ, ಎಂಎಲ್ಸಿ ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.  
ತುಮಕೂರು

ಹದಗೆಟ್ಟ ಚುನಾವಣೆ ವ್ಯವಸ್ಥೆ, ನಾನು ಸ್ಪರ್ಧಿಸೋಲ್ಲ !

ಜಗನ್ನಾಥ್ ಕಾಳೇನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಪಿ.ಆರ್​.ತಿಪ್ಪೇಸ್ವಾಮಿ ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ
  • ಜನರು ಕೆಟ್ಟಿಲ್ಲ, ರಾಜಕಾರಣಿಗಳು ಕೆಡಸಿರೊದು
  • ದುಡ್ಡು ಕೊಟ್ಟು ಓಟು ಕೊಟ್ಟು ಗೆಲ್ಲಸಿದ್ದರು
ತುಮಕೂರು: ಈಗಿನ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿದೆ. ಇನ್ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ. ಈ ಚುನಾವಣಾ ವ್ಯವಸ್ಥೆ ಸುಧಾರಣೆ ಆಗದೆ ಹೋದರೆ ಯಾರು ಕೂಡ ಒಳ್ಳೆಯವರು ಚುನಾವಣೆಯಲ್ಲಿ ನಿಲ್ಲಲು ಆಗೋಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.
ನಗರದ ಶ್ರೀದೇವಿ ಇಂಜಿನಿಯರಿಂಗ್​ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಪಿ.ಆರ್​.ತಿಪ್ಪೇಸ್ವಾಮಿ ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,
1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಿದ್ದ ಮೊದಲ ಚುನಾವಣೆ ಮೆಲುಕು ಹಾಕಿದರು. ನನ್ನ ಹತ್ತಿರ ಒಂದು ರೂಪಾಯಿ ಕೂಡ ಇರಲಿಲ್ಲ. ಒಟ್ಟಾರೆ 63 ಸಾವಿರ ರೂಪಾಯಿ ನನ್ನ ಚುನಾವಣೆಗೆ ರ್ಖಚಾಗಿತ್ತು. ಜಾರ್ಜ್​ ರ್ನಾಂಡೀಸ್​ 10 ಸಾವಿರ ರೂಪಾಯಿ ಕೊಟ್ಟಿದ್ದರು. ಉಳಿದ 53 ಸಾವಿರ ರೂಪಾಯಿ ಜನರೇ ಹೊಂದಿಸಿಕೊಟ್ಟಿದ್ದರು. ದುಡ್ಡು ಕೊಟ್ಟು ಓಟು ಕೊಟ್ಟು ಗೆಲ್ಲಿಸಿದ್ದರು. ಅವತ್ತು ಕಾಂಗ್ರೆಸ್​ನ ಪ್ರಬಲ ಎದುರಾಳಿಯನ್ನು ಸೋಲಿಸಿದ್ದೇ. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ದುಡ್ಡಿಲ್ಲ ಅಂದರೆ ಚುನಾವಣೆ ಮಾಡಲಿಕ್ಕೆ ಆಗೋಲ್ಲ. ಜನರು ಕೆಟ್ಟಿಲ್ಲ. ನಾವು ರಾಜಕಾರಣಿಗಳು ಕೆಡಿಸಿದ್ದೇವೆ ಎಂದು ಬೇಸರಿಸಿದರು.
ಮಾಜಿ ಸಚಿವ ಕೆ.ಎನ್​.ರಾಜಣ್ಣ, ಎಂಎಲ್ಸಿ ಎಂ.ಶಿವಣ್ಣ, ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ, ಸಾಹಿತಿ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್​ ರಾಜ್​ ಮೌರ್ಯ, ಪತ್ರಿಕೋದ್ಯಮಿ ಎಸ್​.ನಾಗಣ್ಣ, ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್​ ಉಪಸ್ಥಿತರಿದ್ದರು.