Kannada Literary Conference on the 25th
ವೈ.ಎನ್.ಹೊಸಕೋಟೆ: ಗ್ರಾಮದಲ್ಲಿ ಡಿ.25ರಂದು ಹೋಬಳಿಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಹೋಬಳಿ ಘಟಕದ ಅಧ್ಯಕ್ಷ ಹೊ.ಮ.ನಾಗರಾಜು ತಿಳಿಸಿದರು. kannada
ಹೋಬಳಿ ಕಸಾಪ ಕಾರ್ಯಕಾರಿ ಸಮಿತಿಯು ಶನಿವಾರ ಆಯೋಜಿಸಿದ್ದ ಸಮ್ಮೇಳನದ 2ನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಡಿ.25ರಂದು ಹೋಬಳಿ ಕೇಂದ್ರದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಸ್ಥಳಿಯ ನಿವೃತ್ತ ವಿಜ್ಞಾನ ಶಿಕ್ಷಕ ಮತ್ತು ಲೇಖಕ ಮಧುಶ್ರೀನಿವಾಸನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದರು.
ತಾಲೂಕು ಘಟಕದ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ ಮಾತನಾಡಿ, ಜಿಲ್ಲಾ ಘಟಾಕದ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮತ್ತು ತಂಡ, ತಾಲೂಕು ಮತ್ತು ಹೋಬಳಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಎಲ್ಲ್ಲ ಕನ್ನಡ ಮನಸ್ಸುಗಳು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಭಾಗವಾಗಿ ಧ್ವಜಾರೋಹಣ, ಅಧ್ಯಕ್ಷರ ಪುರಮೆರವಣಿಗೆ, ಉದ್ಘಾಟನೆ, ವಿಚಾರಗೋಷ್ಠಿ, ಕವಿಗೋಷ್ಠಿ, ಅಭಿನಂದನೆ ಮತ್ತು ಸಮಾರೋಪ ಸಮಾರಂಭಗಳನ್ನು ಆಯೋಜಿಸಲಾಗಿದೆ ಎಂದರು.\
ತಾಲೂಕು ಘಟಕ ಕಾರ್ಯದರ್ಶಿ ಐ.ಎ.ನಾರಾಯಣಪ್ಪ, ಹೋಬಳಿ ಘಟಕದ ಕಾರ್ಯದರ್ಶಿಗಳಾದ ಚಂದ್ರಶೇಖರ್ ಮುದ್ರಾಡಿ, ರಾಮಲಿಂಗಯ್ಯ, ಸದಸ್ಯರಾದ ಹರಿಕೃಷ್ಣ, ಕೃಷ್ಣಕುಮಾರ್, ತಿರುಮಲೇಶ್, ಮಾರುತಿ, ಕೆ.ಎನ್.ಸುಧೀಂದ್ರ ಇತರರು ಇದ್ದರು.