ರೈಲ್ವೆ ಇಲಾಖೆ ಪದನ್ನೋತಿ ಪರೀೆಯಲ್ಲಿ ಕನ್ನಡ ಭಾಷೆ ಕಡೆಗಣನೆ ವಿರೋಧಿಸಿ ಕರವೇ ಜಿಲ್ಲಾಧ್ಯಕ್ಷ ಅರುಣ್​ ಕೃಷ್ಣಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚೆನ್ನಬಸಪ್ಪ, ಅಂಬರೀಷ್​, ಲಿಂಗರಾಜು, ಮಿಸ್ಬಾ ಬಾರಿ, ಪವನ್​ ಮತ್ತಿತರರು ಇದ್ದರು.  
ತುಮಕೂರು

ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡಗಣನೆ

ಪ್ರಮುಖ ಮುಖ್ಯಾಂಶಗಳು

  • ಹಿಂದಿ, ಇಂಗ್ಲಿಷ್​ ಆದ್ಯತೆ
  • ಸರ್ಕಾರದ ನಡೆಗೆ ಕರವೇ ಆಕ್ರೋಶ
  • ಪದನ್ನೋತಿ ಹುದ್ದೆ ವೇಳೆ ಪ್ರತಿಭಟನೆ
ತುಮಕೂರು: ರೈಲ್ವೆ ಇಲಾಖೆಯ ಕನ್ನಡ ಕಡೆಗಣನೆ ಮುಂದುವರೆದಿದೆ. ಈ ತಿಂಗಳ 25ರಂದು ಕರ್ನಾಟಕದಲ್ಲಿಯೇ ನಡೆಯುವ ನೈರುತ್ಯ ರೈಲ್ವೆಯ ಗೂಡ್ಸ್​ ಟ್ರೇನ್​ ಮ್ಯಾನೇಜರ್​ ಹುದ್ದೆ ಪದೋನ್ನತಿ ಪರೀಕ್ಷೆಯನ್ನು ಕನ್ನಡಕ್ಕೆ ಅವಕಾಶ ನೀಡದೆ, ಹಿಂದಿ, ಇಂಗ್ಲೀಷ್​ ಭಾಷೆಗೆ ಮಾನ್ಯತೆ ನೀಡಿರುವುದು ಕನ್ನಡ ಸಂಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡ ಕಡೆಗಣನೆ ಬಗ್ಗೆ ರೈಲ್ವೆ ಇಲಾಖೆಯ ರಾಜ್ಯ ಸಚಿವರು ಆದ ತುಮಕೂರು ಸಂಸದ ವಿ. ಸೋಮಣ್ಣ ಗಮನಕ್ಕೆ ತಂದರೂ ಅವರು ಇಲಾಖೆ ಕ್ರಮವನ್ನು ಸಮರ್ಥಿಸಿಕೊಂಡಿರುವುದು ದುರಾದೃಷ್ಟಕರ. ಕೇಂದ್ರ ಸರ್ಕಾರದ ಇಲಾಖೆಗಳ ಕನ್ನಡ ರ್ನಿಲಕ್ಷ$್ಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ರಾಜ್ಯದ ಎಲ್ಲಾ ಸಂಸದರು, ಸಂಬಂಧಿಸಿದ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದರೂ ಕೇಂದ್ರ ಸರ್ಕಾರ ತನ್ನ ಕನ್ನಡ ವಿರೋಧಿ ಚಾಳಿ ಮುಂದುವರೆಸಿದ್ದು ಇದು ಕನ್ನಡಗರಿಗೆ ಮಾಡಿರುವ ದ್ರೋಹ ಎಂದು ಕರವೇ ಜಿಲ್ಲಾಧ್ಯಕ್ಷ ಅರುಣ್​ ಕೃಷ್ಣಯ್ಯ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೂ.25 ರಂದು ನೈರುತ್ಯ ರೈಲ್ವೆಯ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿ ಗೂಡ್ಸ್​ ಟ್ರೇನ್​ ಮ್ಯಾನೇಜರ್​ ಹುದ್ದೆಗಳಿಗಾಗಿ ಕಂಪ್ಯೂಟರ್​ ಆಧಾರಿತ ಪದೋನ್ನತಿ ಪರೀಕ್ಷೆ ನಡೆಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ರೈಲ್ವೆಯ ಅಧಿಕೃತ ದಾಖಲೆಗಳ ಪ್ರಕಾರ ಹುಬ್ಬಳ್ಳಿಯಲ್ಲಿ 179, ಬೆಂಗಳೂರಿನಲ್ಲಿ 112 ಹಾಗೂ ಮೈಸೂರಿನಲ್ಲಿ 139 ಹುದ್ದೆಗಳಿಗೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಆದರೆ ಕನ್ನಡಿಗ ನೌಕರರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಲಾಗಿದೆ. ಇದು ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುವ ಮನೋಭಾವವಾಗಿದ್ದು ರೈಲ್ವೆ ಇಲಾಖೆ ಧೋರಣೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದ ಎಂದು ಎಚ್ಚರಿಸಿದರು.
ನೈರುತ್ಯ ರೈಲ್ವೆಯು ಮತ್ತೊಮ್ಮೆ ಕನ್ನಡಿಗರ ಬೆನ್ನಿಗೆ ಚೂರಿ ಹಾಕುವ ಕೆಲಸಕ್ಕೆ ಮುಂದಾಗಿದೆ.
ಹಿಂದಿ ಬಾರದ ಕನ್ನಡಿಗರು ಅನಗತ್ಯ ಭಾಷಾ ಅಡೆತಡೆ ಎದುರಿಸಬೇಕಾಗುತ್ತಿದೆ. ಇದು ಸಮಾನ ಅವಕಾಶದ ತತ್ವಕ್ಕೆ ವಿರುದ್ಧವಾಗಿರುವ ಅನ್ಯಾಯ. ಉದ್ದೇಶಪೂರ್ವಕವಾಗಿ ಕನ್ನಡವನ್ನು ಕಡೆಗಣಿಸುವ ಮತ್ತು ಕನ್ನಡಿಗರ ಅವಕಾಶಗಳನ್ನು ಸೀಮಿತಗೊಳಿಸುವ ಷಡ್ಯಂತ್ರವಾಗಿದೆ. ದೇಶದ ಹಲವು ಭಾಗಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡುವ ಕೇಂದ್ರ ಸಂಸ್ಥೆಗಳು, ಕರ್ನಾಟಕಕ್ಕೆ ಬಂದಾಗ ಮಾತ್ರ ಕನ್ನಡವನ್ನು ರ್ನಿಲಕ್ಷಿಸುವುದು ಯಾವ ನ್ಯಾಯ? ಕರ್ನಾಟಕದ ನೆಲ ಬೇಕು. ಕರ್ನಾಟಕದ ತೆರಿಗೆ ಬೇಕು. ಕನ್ನಡ ಮಾತ್ರ ಬೇಡ ಎಂಬ ಧೋರಣೆಯನ್ನು ಕನ್ನಡಿಗರು ಸಹಿಸಿಕೊಳ್ಳುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಚೆನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಅಂಬರೀಷ್​, ತಾಲೂಕು ಅಧ್ಯಕ್ಷ ಲಿಂಗರಾಜು, ಸಂಘಟನಾ ಕಾರ್ಯದರ್ಶಿ ಮಿಸ್ಬಾ ಬಾರಿ, ಯುವ ಘಟಕ ಅಧ್ಯಕ್ಷ ಪವನ್​, ಕಾರ್ಯದರ್ಶಿ ಗಿರೀಶ್​, ಮುಖಂಡರಾದ ದಿಲೀಪ್​, ನವೀನ್​, ಜುನೈದ್​, ದಿಲೀಪ್​. ಅಫ್ಜಲ್​ ಮತ್ತಿತರರು ಹಾಜರಿದ್ದರು.
25 ರಂದು ಪ್ರತಿಭಟನೆ
ರೈಲ್ವೆ ಇಲಾಖೆ ತಕ್ಷಣವೇ ತನ್ನ ನಿರ್ಧಾರವನ್ನು ಹಿಂಪಡೆದು ಪರೀಕ್ಷೆಯನ್ನು ಕನ್ನಡದಲ್ಲೂ ನಡೆಸುವ ಕುರಿತು ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ 25ರಂದು ನಡೆಯುವ ಪರೀಕ್ಷೆಯನ್ನು ವಿರೋಧಿಸಿ ರಾಜ್ಯದಾದ್ಯಂತ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪರೀಕ್ಷೆಯನ್ನು ತಕ್ಷಣವೇ ಮುಂದೂಡಬೇಕು. ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಸೇರಿಸಿ ಹೊಸ ವೇಳಾಪಟ್ಟಿ ಪ್ರಕಟಿಸಬೇಕು. ಕರ್ನಾಟಕದಲ್ಲಿ ನಡೆಯುವ ಎಲ್ಲಾ ರೈಲ್ವೆ ನೇಮಕಾತಿ ಮತ್ತು ಪದೋನ್ನತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಕಡ್ಡಾಯ ಆಯ್ಕೆಯಾಗಿ ಸೇರಿಸಬೇಕೆಂಬುದು ಕನ್ನಡ ರಕ್ಷಣಾ ವೇದಿಕೆ ಒತ್ತಾಯವಾಗಿದೆ.