ತುಮಕೂರಿನಲ್ಲಿ ಆಯೋಜಿಸಿರುವ ಕಲ್ಪತರು ಉತ್ಸವದ ಕರಪತ್ರಗಳನ್ನು ರೇಖಾ, ಮಂಜುಳಾ, ಶೀಲಾಮಧು, ಸುಮಿತ್ರಾ, ಲತಾ ಬಿಡುಗಡೆಗೊಳಿಸಿದರು.
- ಐಕ್ಯ ಫೌಂಡೇಶನ್ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ
- ಸರ್ಕಾರಿ ಜೂನಿಯರ್ ಕಾಲೇಜು ಮೈದಾನ
- 58 ಪ್ರಗತಿಪರ ರೈತರಿಗೆ ಅಭಿನಂದನೆ
ತುಮಕೂರು: ಐಕ್ಯ ಫೌಂಡೇಶನ್ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ ಸಹಯೋಗದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನ.22, 23 ರಂದು ಕಲ್ಪತರು ಉತ್ಸವ ಆಯೋಜಿಸಲಾಗಿದೆ. ಜಿಲ್ಲೆಯ 58 ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಗುವುದು.
ರೈತರ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಉತ್ಸವದಲ್ಲಿ ತೆರೆಯುವ ಮೂಲಕ ರೈತರ ಉತ್ಪನ್ನಗಳನ್ನು ನೇರವಾಗಿ ಖರೀದಿಸಲು ಗ್ರಾಹಕರಿಗೆ ವೇದಿಕೆ ಒದಗಿಸಲಾಗುವುದು. ರೈತ-ಗ್ರಾಹಕರ ನಡುವೆ ಸಂಪರ್ಕ ಸೇತುವೆ ನಿರ್ಮಿಸುವುದು ಈ ಕಲ್ಪತರು ಉತ್ಸವದ ಉದ್ದೇಶ ಎಂದು ಐಕ್ಯ ಫೌಂಡೇಶನ್ ಅಧ್ಯಕ್ಷೆ ರೇಖಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
22 ರಂದು ಸಂಜೆ 4.30ಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಳಿಗೆಗಳ ಉದ್ಘಾಟನೆ ನೆರವೇರಿಸಿ ನಂತರ ನಡೆಯುವ ಸಮಾರಂಭದಲ್ಲಿ ಪ್ರಗತಿಪರ ರೈತನ್ನು ಸನ್ಮಾನಿಸಿ ಗೌರವಿಸುವರು. ರೈತಪರ ಹೋರಾಟಗಾರ ಗಂಗಾಧರ ಕಾಸರಘಟ್ಟ, ನಟ ಹನುಮಂತೇಗೌಡ, ಕಿರುತೆರೆ ನಟರಾದ ಶಿಲ್ಪ ಶೈಲೇಶ್. ಅರ್ಜುನ್ ಯೋಗೇಶ್ರಾಜ್ ಉಪಸ್ಥಿತರಿರುವರು ಎಂದು ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾ ಹೇಳಿದರು.
23ರಂದು ಸಂಜೆ 6ಕ್ಕೆ ರಂಗನಟಿ ಸವಿತಕ್ಕ ಮತ್ತು ತಂಡದಿಂದ ಜಾನಪದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇನ್ನರ್ ವ್ಹೀಲ್ ಕಾರ್ಯದರ್ಶಿ ಸುಮಿತ್ರಾ, ನಿಕಟಪೂರ್ವ ಅಧ್ಯಕ್ಷೆ ಶೀಲಾ ಮಧು, ಜಂಟಿ ಕಾರ್ಯದರ್ಶಿ ಲತಾ ಹಾಜರಿದ್ದರು.