ಡಾ.ಲಕ್ಷ್ಮಣದಾಸ್​ 
ತುಮಕೂರು

29ರಂದು ಕಲಾಶ್ರೀ ಡಾ.ಲಕ್ಷ್ಮಣದಾಸ್​ ಅಭಿನಂದನಾ ಸಮಾರಂಭ

ಪ್ರಮುಖ ಮುಖ್ಯಾಂಶಗಳು

  • ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಂದ ಉದ್ಘಾಟನೆ
  • ಡಾ.ಬರಗೂರು ರಾಮಚಂದ್ರಪ್ಪ, ಪುರುಷೋತ್ತಮ ಬಿಳಿಮಲೆ ಭಾಗಿ
  • ಸಂಜೆ ಸಮಾರೋಪದಲ್ಲಿ ಮಾಜಿ ಸಚಿವ ರಾಜಣ್ಣ
ತುಮಕೂರು: ಹರಿಕಥಾ ವಿದ್ವಾನ್​, ಕಲಾಶ್ರೀ ಡಾ. ಲಕ್ಷ್ಮಣದಾಸ್ ಅಭಿನಂದನಾ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ರಂಗಭೂಮಿ ಕಲಾವಿದ ಸಂ ಹಾಗೂ ಅಖಿಲ ಕರ್ನಾಟಕ ಕೀರ್ತನಾ ಕಲಾ ಪರಿಷತ್​ ಸಹಯೋಗದಲ್ಲಿ ಮಾ.29ರಂದು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಲಕ್ಷ್ಮಣದಾಸ್ ಬದುಕು, ಜೀವನ, ರಂಗಗೀತೆ, ಕಥಾಕೀರ್ತನ ಅವರೊಂದಿಗೆ ಸಂವಾದ ಸೇರಿದಂತೆ ಇಡಿದೀನ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 10ಕ್ಕೆ ಸಮಾರಂಭವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಉದ್ಘಾಟಿಸುವರು. ಶಾಸಕ ಜಿ.ಬಿ. ಜ್ಯೋತಿಗಣೇಶ್​ ಅಧ್ಯಕ್ಷತೆಯಲ್ಲಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ದಿಕ್ಸೂಚಿ ಭಾಷಣ ಮಾಡುವರು. ಮಧ್ಯಾಹ್ನ 11.30ಕ್ಕೆ ಕಲಾಶ್ರೀ ಡಾ.ಲಕ್ಷ್ಮಣದಾಸ್​ ಅವರ ಜೀವನ ಮತ್ತು ಸಾಧನೆ ಕುರಿತ ಗೋಷ್ಠಿಯು ಸಾಹಿತಿ ಡಾ.ರಾಜಪ್ಪ ದಳವಾಯಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಕಲಾಶ್ರೀ ಜಿ. ಶೀಲಾನಾಯ್ಡು ಅವರ ಅಧ್ಯಕ್ಷತೆಯಲ್ಲಿ ರಂಗಗೀತೆ ಗಾಯನ, ನಂತರ ಕಲಾಶ್ರೀ ಸೋಮಶೇಖರ ದಾಸ್​ ಅಧ್ಯಕ್ಷತೆಯಲ್ಲಿ ಕಥಾಕೀರ್ತನೆ, ಸಂಜೆ 4 ಗಂಟೆಗೆ ಡಾ. ಲಕ್ಷ್ಮಣದಾಸ್​ ಅವರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿದೆ.
ಸಂಜೆ ಸಮಾರೋಪ: ಸಂಜೆ 5 ಗಂಟೆಗೆ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಸಚಿವ, ಶಾಸಕ ಕೆ.ಎನ್​. ರಾಜಣ್ಣ ಅವರು ಡಾ. ಲಕ್ಷ್ಮಣದಾಸ್​ರನ್ನು ಸನ್ಮಾನಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮನೆ ಸಮಾರೋಪ ಭಾಷಣ ಮಾಡುವರು.