Journalists should be careful about their health.
ಕುಣಿಗಲ್: ಪತ್ರಕರ್ತರು ದಿನನಿತ್ಯ ಒತ್ತಡದಿಂದ ಆರೋಗ್ಯಕ್ಕೆ ಗಮನ ನೀಡದೆ ಕೆಲಸ ನಿರ್ವಹಿಸುತ್ತಿರುವಾಗ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು, ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳುವ ಮೂಲಕ ಆರೋಗ್ಯವಂತರಾಗಿ ಇರಬೇಕೆಂದು ಎಂಎಂ ಆಸ್ಪತ್ರೆಯ ಮುಖ್ಯಸ್ಥ ಡಾ.ಎಂ.ಆರ್.ರವಿಕುಮಾರ್ ತಿಳಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂ ಕುಣಿಗಲ್ ಟಕದಿಂದ ಮತ್ತು ಎಂ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ದಿನನಿತ್ಯ ಸಮಾಜದ ಅಂಕು ಡೊಂಕು ಎತ್ತಿಡಿಯುವ ಪತ್ರಕರ್ತರು ಸದಾ ಒತ್ತಡದಿಂದ ಸಮಯ ಪ್ರೆಯೊಂದಿಗೆ ಸುದ್ದಿ ಸಮಾಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾಯಕದಲ್ಲಿ ತೊಡಗಿರುವ ಬಹುತೇಕ ಪತ್ರಕರ್ತರು ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಆದ್ದರಿಂದ ಎಷ್ಟೇ ಒತ್ತಡ ಇರಲಿ ಮೊದಲು ನಿಮ್ಮ ಆರೋಗ್ಯಕ್ಕೆ ಒತ್ತು ನೀಡಿ ಎಂದು ಹೇಳಿದರು.
ಕರುಳು ಹಾಗೂ ಉದರ ರೋಗ ತ ಡಾ.ವಿನೋದಗೌಡ ಮಾತನಾಡಿ, ಪತ್ರಕರ್ತರು ತಮ್ಮ ಆರೋಗ್ಯವನ್ನು ಕಾಲಕಾಲಕ್ಕೆ ಪರೀೆ ಮಾಡಿಕೊಳ್ಳುವ ಮೂಲಕ ಜತೆಗೆ ಅತಿ ಹೆಚ್ಚು ನೀರು ಕುಡಿಯುವ ಮೂಲಕ ಆರೋಗ್ಯ ಪರೀೆ ಮಾಡಿಕೊಂಡು ಸಮಾಜಮುಖಿಯಾಗಿ ಆರೋಗ್ಯವಂತರಾಗಿ ಇರಬೇಕೆಂದು ತಿಳಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯ ಬೀಚನಹಳ್ಳಿ ಶ್ರೀನಿವಾಸ್ ಮಾತನಾಡಿ,
ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುವುದರಿಂದ ಸಂದಿಂದ ಎಂ.ಎಂ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಕೈಗೊಂಡು ಪತ್ರಕರ್ತರ ಹಾಗೂ ಅವರ ಕುಟುಂಬದವರಿಗೆ ಎಂ.ಎಂ ಆಸ್ಪತ್ರೆಯ ಮುಖ್ಯಸ್ಥರನ್ನು ಮುಕ್ತ ಕಂಠದಿಂದ ಶ್ಲಾಸಿದರು ಎಂದರು. ಪ್ರಧಾನ ಕಾರ್ಯದರ್ಶಿ ಶರೀಫ್, ಕಾರ್ಯದರ್ಶಿ ಆನಂದ್ ಸಿಂಗ್, ಹಿರಿಯ ಪತ್ರಕರ್ತರಾದ
ರಾಮಚಂದ್ರಯ್ಯ, ಕೆ.ಆರ್ ರಂಗನಾಥ್, ದಲಿತ್ ನಾರಾಯಣ್ ಇದ್ದರು.