ಸಂಕ್ರಾಂತಿ ಸಿದ್ಧತೆಯಲ್ಲಿರುವ ಜನರು
- ಜನವರಿಗೆ 14ರಿಂದ 15ಕ್ಕೆ ಶಿಫ್ಟ್
- ಭವಿಷ್ಯದಲ್ಲಿ ಒಂದು ದಿನ ಮುಂದಕ್ಕೆ
- ಸಂಕ್ರಾಂತಿ ದಿನಾಂಕ ಕುತೂಹಲ
ತುಮಕೂರು: ಹಿಂದಿನ ವರ್ಷಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ಜನವರಿ 14 ರಂದು ಬರುತ್ತಿತ್ತು. ಈಗಿನ ವರ್ಷಗಳಲ್ಲಿ ಜನವರಿ 15 ರಂದು ಬರುತ್ತಿದೆ. ಕಾರಣವೇನು ಎಂಬ ಕುತೂಹಲಕ್ಕೆ ತುಮಕೂರಿನ ಕ್ಯಾಲೆಂಡರ್ ಶಿವಕುಮಾರ್ ಉತ್ತರಿಸಿದ್ದಾರೆ.
ಮಕರ ಸಂಕ್ರಾಂತಿ 1862 ರಿಂದ 1934ರ ವರೆಗೆ ಜನವರಿ 13, 1935 ರಿಂದ 2007ರ ವರೆಗೆ ಜ.14, 2008 ರಿಂದ 2080ರ ವರೆಗೆ ಜ.15 ಹಾಗೂ 2081 ರಿಂದ 2153ರ ವರೆಗೆ ಜ.16ರಂದು ಬರಲಿದೆ.
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಸೂರ್ಯ ಪ್ರತಿವರ್ಷ ಧನುರ್ ರಾಶಿಯಿಂದ ಮಕರ ರಾಶಿಗೆ 20 ನಿಮಿಷಗಳು ತಡವಾಗಿ ಪ್ರವೇಶಿಸುತ್ತಾನೆ ಹಾಗಾಗಿ, ಸೂರ್ಯ 3 ವರ್ಷಗಳಿಗೊಮ್ಮೆ 1 ಗಂಟೆ ತಡವಾಗಿ ಪ್ರವೇಶಿಸುತ್ತಾನೆ. ಅಂದರೆ 72 ವರ್ಷಗಳಿಗೊಮ್ಮೆ ಸೂರ್ಯ ಮಕರ ರಾಶಿ ಪ್ರವೇಶಿಸಲು ಒಂದು ದಿನ ತಡವಾಗಲಿದೆ. ಇದರಿಂದಾಗಿ ಪ್ರತಿ 72 ವರ್ಷಗಳಿಗೊಮ್ಮೆ ಮಕರ ಸಂಕ್ರಾಂತಿ ಹಬ್ಬ ಒಂದು ದಿನ ಮುಂದೆ ಹೋಗುತ್ತದೆ.