ಜಿಲ್ಲೆಯಲ್ಲಿ ದಾಖಲಾಗಿದ್ದ ಹೇಮಾವತಿ ಎಕ್ಸ್ಪ್ರೆಸ್ ನಾಲೆ ವಿರೋಧಿಸಿದ್ದ ಕಿಚ್ಚು
- ಹೈಕೋರ್ಟ್ನಲ್ಲಿ ಜಿಲ್ಲೆಯ ಪರವಾಗಿ ಶ್ರತಿನಾಯ್ಡು ವಾದ
- ಕಾನೂನು ಹೋರಾಟಕ್ಕೆ ದಿಕ್ಕು ಬದಲಿಸಿದ ರೈತರು
- ಕೆಲವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ?
- ಜೆಸಿಎಂ ನೇತೃತ್ವದಲ್ಲಿ ಪಕ್ಷಾತೀತ ಸಭೆಗೆ ಸಜ್ಜು
ತುಮಕೂರು: ಜಿಲ್ಲೆಯ ರೈತರ ಪಾಲಿಕೆ ಮರಣ ಶಾಸನ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಹೋರಾಟದ ದಿಕ್ಕು ಬದಲಾಯಿಸಲಾಗಿದ್ದು ನ್ಯಾಯಕ್ಕಾಗಿ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಾಲ್ಕು ದಿನದಿಂದಲೂ ವಾದ, ಪ್ರತಿವಾದ ಆಲಿಸಿರುವ ಹೈಕೋರ್ಟ್ ಶುಕ್ರವಾರ ನಿರ್ಧಾರ ಪ್ರಕಟಿಸುವ ನಿರೀೆಯಿದೆ.
ಮಾಜಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾರ್ಗದರ್ಶನದಲ್ಲಿ ಜಿಲ್ಲೆಯ ಪರವಾಗಿ ಹಿರಿಯ ವಕೀಲರಾದ ಶ್ರತಿನಾಯ್ಡು, ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದು ಗುಬ್ಬಿಯ ಕಾಡಶೆಟ್ಟಿಹಳ್ಳಿ ಸತೀಶ್ ಹಾಗೂ ಎಸ್.ಡಿ.ದಿಲೀಪ್ಕುಮಾರ್ ಮತ್ತಿತರರು ವಕೀಲರ ತಂಡಕ್ಕೆ ಅಗತ್ಯ ಸಂಪನ್ಮೂಲದ ಜತೆಗೆ ದಾಖಲಾತಿಗಳನ್ನು ಪೂರೈಸುವ ಕೆಲಸದ ಹೊಣೆ ಹೊತ್ತಿದ್ದಾರೆ.
ಜೂ.29ರಿಂದ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು ಸರ್ಕಾರದ ಪರವಾಗಿ ವಕಾಲತ್ತು ವಹಿಸಿರುವ ಟಾನುಟಿ ವಕೀಲರು
ವಾದ ಮಂಡಿಸಲು ಒಂದು ತಿಂಗಳ ಕಾಲಾವಕಾಶ ಕೇಳುತ್ತಿರುವುದು ಕುತೂಹಲ ಮೂಡಿಸಿದೆ. ಹೈಕೋರ್ಟ್ನಲ್ಲಿ ಸತತವಾಗಿ ಕಳೆದ ಮೂರು ದಿನಗಳಿಂದಲೂ ಸತತ ವಾದ, ಪ್ರತಿವಾದ ನಡೆಯುತ್ತಿದ್ದು ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ಸಿಗುವ ವಿಶ್ವಾಸ ಮೂಡಿಸಿದೆ.
ಕುಣಿಗಲ್ ತಾಲೂಕಿಗೆ ಸ್ವಾಭಾವಿಕವಾಗಿಯೇ ನೀರು ಹರಿದಿರುವ ಅಂಕಿ, ಅಂಶಗಳು ಹಾಗೂ ಭೂಸ್ವಾಧಿನವಾಗದೆ ಕಾಮಗಾರಿ ಆರಂಭಿಸಿರುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. 1905ರಲ್ಲಿ ಬ್ರೀಟಿಷರು ನಡೆಸಿರುವ ಸಮೀೆ, 1961ರ ಭಾರತ ಸರ್ಕಾರದ ಜನಗಣತಿಯಲ್ಲಿ ಜಿಲ್ಲೆಯ ಜನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಹಾಗೂ ಹೇಮಾವತಿ ನಾಲೆ ನಂತರ ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಕುಣಿಗಲ್ ತಾಲೂಕಿನ ಪಾಲಿನ ನೀರು ಸ್ವಾಭಾವಿಕವಾಗಿ ಹರಿದಿರುವ ಅಂಕಿ, ಅಂಶಗಳು ಜಿಲ್ಲೆಯ ಪರವಾದ ವಾದಕ್ಕೆ ಪೂರಕವಾಗಿವೆ. ಸ್ವಾಭಾವಿಕ
ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಶಾಸಕ ಬಿ.ಸುರೇಶ್ಗೌಡ ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಹೋರಾಟಗಾರರನ್ನು ಕೆರಳುವಂತೆ ಮಾಡಿದೆ. ತುಮಕೂರು ತಾಲೂಕಿಗೆ ನೀರು ಕೊಟ್ಟು ಎಲ್ಲಿಗಾದರೂ ತೆಗೆದುಕೊಂಡು ಹೋಗಲಿ ಎಂಬ ಬಿಜೆಪಿ ಶಾಸಕರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರುವ ಮುಖಂಡ ಎಸ್.ಡಿ.ದಿಲೀಪ್ಕುಮಾರ್, ಸುರೇಶ್ಗೌಡ ದ್ವಿಮುಖ ನೀತಿ ಬಿಡಬೇಕು ಎಂದು ಹೇಳಿದ್ದಾರೆ.
ವಿರೋಧವಿದ್ದರೂ ಯೋಜನೆ ಪೂರ್ಣಗೊಳಿಸಲು ಡಿಸಿಎಂ ಡಾ.ಜಿ.ಪರಮೇಶ್ವರ ತೋರಿಸುತ್ತಿರುವ ಅತ್ಯುತ್ಸಾಹ ಜಿಲ್ಲೆಯಲ್ಲಿ ರೈತರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ಸಿಎಂ ಆದ ನಂತರವೂ ಯೋಜನೆಯನ್ನು ಅರ್ಧಕ್ಕೆ ನಿಲ್ಲಿಸಲಾಗದು ಪೂರ್ಣಗೊಳಿಸುತ್ತೇವೆ ಎಂದು ಪರಮೇಶ್ವರ್ ಪದೇಪದೇ ಹೇಳಿಕೆ ನೀಡುತ್ತಿರುವ ನಡುವೆಯೇ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಕೂಡ ಬೆಂಬಲ ನೀಡಿರುವ ಹೇಳಿಕೆ ರೈತರಿಗೆ ಆಘಾತ ತಂದಿದೆ.
ಶೀಘ್ರದಲ್ಲಿಯೇ ಜಿಲ್ಲೆಯ ರೈತರ ಸಭೆ:
ಹೇಮಾವತಿ ನೀರು ಆಶ್ರಯಿಸಿರುವ ರೈತರು ಕೃಷಿ ಬದುಕಿನ ಉಳಿವಿನ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗುತ್ತಿದ್ದು ಶ್ರೀದಲ್ಲಿಯೇ ನಿಟ್ಟೂರು ಹಾಗೂ ತುರುವೇಕೆರೆ ಭಾಗದಲ್ಲಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ರೈತರ ಸಭೆ ನಡೆಸಲು ಸಮಾನ ಮನಸ್ಕರು ಕಸರತ್ತು ಆರಂಭಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಭಾವುಟ ಪ್ರದರ್ಶಿಸದೇ ಹೋರಾಟ ರೂಪಿಸಬೇಕು ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆಗೆ ಬಹುತೇಕ ಎಲ್ಲಾ ಸಂಘಟನೆಗಳೂ ಒಪ್ಪಿದ್ದು ಬೃಹತ್ ಹೋರಾಟಕ್ಕೆ ವೇದಿಕೆ ಸಿದ್ಧಗೊಳಿಸಲಾಗುತ್ತಿದೆ.
ಹೈಕೋರ್ಟ್ನಲ್ಲಿ ಯೋಜನೆಯ ಬಗ್ಗೆ ವಾದ, ಪ್ರತಿವಾದ ನಡೆಯುತ್ತಿದ್ದು ಕಾನೂನು ಹೋರಾಟಕ್ಕೆ ಪರ್ಯಾಯವಾಗಿ ರೈತರು ಬೀದಿಗಳಿದು ಸರ್ಕಾರದ ಮೇಲೆ ಒತ್ತಡ ತರಲು ನಿರ್ಧರಿಸಿದ್ದಾರೆ. ಯೋಜನೆ ಆರಂಭದಲ್ಲಿ ದಾಖಲಿಸಿದ್ದ ಪ್ರತಿರೋಧದ ಮಾದರಿಯಲ್ಲಿ ಮತ್ತೊಮ್ಮೆ ಜನಶಕ್ತಿ ಪ್ರದರ್ಶಿಸಲು ಅಣಿಯಾಗುತ್ತಿರುವುದು ಹೊಸ ಬೆಳವಣಿಗೆ ಎನ್ನಿಸಿದೆ.
ಉದ್ದೇಶಿತ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯಿಂದ ತುಮಕೂರು ಜಿಲ್ಲೆಯ ಜನರಿಗೆ ಆಗುವ ಅನ್ಯಾಯ ಹಾಗೂ ಆರ್ಥಿಕ, ಸಾಮಾಜಿಕ ದುಷ್ಪರಿಣಾಮದ ಅಧ್ಯಯನ ವರದಿಯೊಂದಿಗೆ ಕಾನೂನು ಹೋರಾಟ ಆರಂಭಿಸಲಾಗಿದ್ದು ಜಿಲ್ಲೆಯ ರೈತರಿಗೆ ನ್ಯಾಯ ಸಿಗುವ ವಿಶ್ವಾಸವಿದೆ. ಕಾನೂನು ಹೋರಾಟದ ಪ್ರತಿಹಂತದಲ್ಲಿಯೂ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ