- ತುಮಕೂರು ಓಪನ್
- ಡಬಲ್ಸ್ನಲ್ಲಿ ಕ್ಸೆನಿಯಾ-ಎಲಿನಾ ಜೋಡಿ ಫೈನಲ್ಗೆ
- ಸಿಂಗಲ್ಸ್ನಲ್ಲಿ ಸೆಮೀಸ್ಗೆ ಝೀಲ್ , ಜುಝಾನ್ನಾ
ತುಮಕೂರು: ಭಾರತದ ವೈದೇಹಿ ಚೌಧರಿ ಹಾಗೂ ಝೀಲ್ ದೇಸಾಯಿ ಐಟಿಎಫ್ ವಿಶ್ವ ಮಹಿಳಾ ಚಾಂಪಿಯನ್ಸ್ (ಡಬ್ಲೂ 35) ಸಿಂಗಲ್ಸ್ ವಿಭಾಗದಲ್ಲಿ ಉಪಾಂತ್ಯ ತಲುಪಿದ್ದಾರೆ.
ನಗರದ ವಿವಿ ಆವರಣದ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಪ್ರಧಾನಸುತ್ತಿನ ಸಿಂಗಲ್ಸ್ ಕ್ವಾರ್ಟರ್ಫೈನಲ್ ನಲ್ಲಿ ಭಾರತದ 3ನೇ ಶ್ರೇಯಾಂಕಿತೆ ವೈದೇಹಿ ಚೌಧರಿ 6-4, 6-7(5), 7-5 ಸೆಟ್ಗಳಿಂದ 6ನೇ ಶ್ರೇಯಾಂಕಿತ ರಷ್ಯಾದ ಎಕಟೆರಿನಾ ಯಾಶಿನಾ ವಿರುದ್ಧ ಅರ್ಹ ಗೆಲುವು ದಾಖಲಿಸಿ ಸೆಮಿಫೈನಲ್ ಗೆ ಲಗ್ಗೆಯಿಟ್ಟರು.
2 ಗಂಟೆ 40 ನಿವಿಷಗಳ ದೀರ್ ಕಾಲ ನಡೆದ ರೋಮಾಂಚಕಾರಿ ಹಣಾಹಣಿಯ ಪಂದ್ಯದಲ್ಲಿ ನೆರೆದಿದ್ದ ಬೆರಳೆಣಿಕೆ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತಹ ಪ್ರದರ್ಶವನ್ನು ವೈದೇಹಿ, ಯಾಶಿನಾ ನೀಡಿದರು. ವೈದೇಹಿ ಆಕ್ರಮಣಕಾರಿ ಪ್ರದರ್ಶನಕ್ಕೆ ಭುಜದ ನೋವಿನಿಂದ ಡಬಲ್ಸ್ನಲ್ಲಿ ಕಣದಿಂದ ಹಿಂದೆ ಸರಿದಿದ್ದ ಯಾಶಿನಾ ಪ್ರಬಲ ಪೈಪೋಟಿ ನೀಡಿದರು. ಮಧ್ಯಾಹ್ನದ ಬಿರುಬಿಸಿಲಿನಲ್ಲಿ 6-4 ರಿಂದ ಮೊದಲ ಸೆಟ್ ಗೆದ್ದ ವೈದೇಹಿಗೆ ಯಾಶಿನಾ ಪ್ರಬಲ ಪ್ರತ್ಯುತ್ತರ ನೀಡಿದರು. ಟೈ ಬ್ರೇಕರ್ ನಲ್ಲಿ ಈ ಸೆಟ್ ಅನ್ನು 7-6 ರಿಂದ ಗೆದ್ದುಕೊಂಡ ಯಾಶಿನಾ ಪುಟಿದೆದ್ದರು. ಬಳಿಕ 3ನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ವೈದೇಹಿ ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು. ಉತ್ತಮ ಸರ್ವೀಸ್, ಬ್ಯಾಕ್ ಹ್ಯಾಂಡ್ ಹೊಡೆತಗಳ ಮೂಲಕ ಎದುರಾಳಿ ಯಾಶಿನಾರನ್ನು ಗಲಿಬಿಲಿಗೊಳಿಸಿದ ವೈದೇಹಿ ಅರ್ಹವಾಗಿ ಉಪಾಂತ್ಯ ಪ್ರವೇಶಿಸಿದರು. ಪ್ರತಿ ಹೊಡೆತದ ವೇಳೆ ಯಾಶಿನಾ "ಕೂಗು' ಪ್ರೇಕ್ಷಕರ ಗಮನಸೆಳೆಯಿತು.
4ನೇ ಶ್ರೇಯಾಂಕದ ಭಾರತದ ತಾರೆ ಝೀಲ್ ದೇಸಾಯಿ 4-6, 6-3, 7-5 ಸೆಟ್ಗಳಿಂದ ರಷ್ಯಾದ ಅರಿನಾ ಅರಿಫುಲ್ಲಿನಾ ವಿರುದ್ಧ ಮ್ಯಾರಥಾನ್ ಹೋರಾಟ ಕಂಡ ಪಂದ್ಯದಲ್ಲಿ ಗೆದ್ದುಬಿಗಿದರು. 2 ಗಂಟೆ 52 ನಿವಿಷಗಳ ಕಾಲದ ದೀರ್ ಹೋರಾಟದ ಪಂದ್ಯದಲ್ಲಿ ಮೊದಲ ಸೆಟ್ನಲ್ಲಿ 4-6 ಹಿನ್ನೆಡೆ ಅನುಭವಿಸಿದ ಝೀಲ್ 2ನೇ ಸೆಟ್ನಲ್ಲಿ ಪುಟಿದೆದ್ದರು. ಮೊದಲ ಸೆಟ್ ಗೆಲುವಿನ ಲಯವನ್ನು ಮುಂದುವರೆಸುವಲ್ಲಿ ಅರಿನಾ ಎಡವಿದರು.
2ನೇ ಸೆಟ್ ತೀವ್ರ ಹಣಾಹಣಿಯಿಂದ ಕೂಡಿದ್ದು ಇಬ್ಬರೂ ಪದೇ ಪದೇ ಬ್ರೇಕ್ ಪಾಯಿಂಟ್ಗಳಲ್ಲಿ ಮಿಂಚಿದರಾದರೂ ಝೀಲ್ ದೇಸಾಯಿ ಉತ್ತಮ ನಿರ್ವಹಣೆ ತೋರಿ ಸೆಟ್ ಅನ್ನು ಗೆದ್ದುಕೊಂಡರು. ನಿರ್ಣಾಯಕ 3ನೇ ಸೆಟ್ ಸಮಬಲ ಹೋರಾಟ ಕಂಡುಬಂತು. ಪ್ರತಿ ಪಾಯಿಂಟ್ಗು ಜಿದ್ದಾಜಿದ್ದಿನ ಹೋರಾಟ ನಡೆಯಿತು. ಪಂದ್ಯ ಟೈಬ್ರೇಕರ್ ಕಡೆ ಸಾಗುತ್ತಿರುವಂತೆ ಕಾಣುತ್ತಿದ್ದಂತೆ, ಝೀಲ್ ನಿರ್ಣಾಯಕ ಬ್ರೇಕ್ ಪಾಯಿಂಟ್ ಗಳಿಸಿ ಅರಿನಾಗೆ ಆಘಾತ ನೀಡಿದರು. ಒಂಭತ್ತು ಡಬಲ್ಫಾಲ್ಟ್ ಗಳನ್ನು ಮಾಡಿದರು ಝೀಲ್ ಎದೆಗುಂದಲಿಲ್ಲ. ಅರಿುಲ್ಲಿನಾ ಉತ್ತಮ ಏಸ್ಗಳನ್ನು ಹಾಕಿದರಾದರು ಮೇಲುಗೈ ಸಾಧಿಸಲಾಗಲಿಲ್ಲ. ಕೊನೆಗೆ ಝೀಲ್ ಗೆಲುವಿನ ನಗೆಬೀರಿದರು.