ತುಮಕೂರಿನ ಅಮಾನಿಕೆರೆ ಅಂಗಳದಲ್ಲಿ ನೂತನವಾಗಿ ಆರಂಭಿಸಿರುವ ಜಿಪ್ ಲೈನ್ ಸಾಹಸ ಕ್ರೀಡೆಗೆ ಜಿ.ಪರಮೇಶ್ವರ್ ಚಾಲನೆ ನೀಡಿದರು.
- ಜಿಪ್ಲೈನ್ನಲ್ಲಿ ಜಾರಿದ ಪರಮೇಶ್ವರ
- ಎಸ್ಕೇಪ್ 2 ಎಕ್ಸ್ಪ್ಲೋರ್ ಸಂಸ್ಥೆ
- ತುಮಕೂರು ಅಮಾನಿಕೆರೆ ಅಂಗಳ
ತುಮಕೂರು: ಅಮಾನಿಕೆರೆ ಅಂಗಳದಲ್ಲಿ ನಿರ್ಮಿಸಿರುವ "ಜಿಪ್ಲೈನ್'ನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಾಹಸ ಮೆರೆದರು.
ಎಸ್ಕೇಪ್ 2 ಎಕ್ಸ್ಪ್ಲೋರ್ (ಇ2ಇ) ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಜಿಪ್ಲೈನ್ ಸಾಹಸ ಕ್ರೀಡೆ ಉದ್ಘಾಟನೆ ವೇಳೆ ಭಾನುವಾರ ಖುದ್ದು ಸಚಿವ ಪರಮೇಶ್ವರ್ ಸುರಕ್ಷತಾ ಉಪಕರಣಗಳನ್ನು ಧರಿಸಿ ಯಾರ ಸಹಾಯವಿಲ್ಲದೆ ಜಾರಿ, ಗಾಳಿಯಲ್ಲಿ ತೇಲಿ ಸಂಭ್ರಮಿಸಿದರು.
ಸ್ಪೀಡ್ ಬೋಟ್, ಜೆಟ್ ಸ್ಕೀ, ಕಯಾಕೆ ಹೀಗೆ ದೋಣಿ ವಿಹಾರದ ಜತೆಗೆ ಪ್ಲೋಟಿಂಗ್ ರೆಸ್ಟೋರೆಂಟ್ ಕೂಡ ಆರಂಭಿಸಿದೆ. ಇದರ ಜತೆಗೆ ಮತ್ತೊಂದು ಸಾಹಸ ಕ್ರೀಡೆಯನ್ನು ಇ2ಇ ಸಂಸ್ಥೆ ಪರಿಚಯಿಸಿದ್ದು ಜಿಪ್ಲೈನ್ಗೆ ಅಧಿಕೃತ ಚಾಲನೆ ನೀಡಲಾಗಿದೆ.
ಈ ವೇಳೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತ ಯೋಗಾನಂದ್, ಟೂಡಾ ಆಯುಕ್ತ ಎನ್.ಆರ್.ಉಮೇಶ್ ಚಂದ್ರ ಮತ್ತಿತರರು ಇದ್ದರು.