ಶಿರಾ ತಾಲೂಕಿನ ಬರಗೂರಿನಲ್ಲಿ ಫಾಮ್ರ್ಹೌಸ್
- ಖಿನ್ನತೆಗೊಳಗಾಗಿದ್ದ ಎಸ್ಪಿ ಪವನ್
- ನಿದ್ರೆ ಮಾತ್ರೆ ಸೇವಿಸಿದ್ದರೆಂಬ ವದಂತಿ?
- ವದಂತಿ ಅಲ್ಲೆಗೆಳೆದ ಪರಮೇಶ್ವರ್
ತುಮಕೂರು: ಬಳ್ಳಾರಿ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಅಮಾನತಾಗಿರುವ ಐಪಿಎಸ್ ಅಧಿಕಾರಿ ಪವನ್ ನಜ್ಜೂರ್ ಶಿರಾ ತಾಲೂಕು ಬರಗೂರು ಸಮೀಪ ಸ್ನೇಹಿತ ಐಪಿಎಸ್ ಅಧಿಕಾರಿಯ ಫಾಮ್ರ್ಹೌಸ್ನಲ್ಲಿ ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಸುದ್ದಿ ಶನಿವಾರ ಕಾಡ್ಗಿಚ್ಚಿನಂತೆ ಹರಡಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಪೊಲೀಸ್ ಅಧಿಕಾರಿಗಳು ಈ ವದಂತಿಯನ್ನು ಅಲ್ಲೆಗೆಳೆದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬಹಿರಂಗವಾಗಿಯೇ ವಿಷಯ ಪ್ರಸ್ತಾಪಿಸುವ ಮೂಲಕ ರಾಜ್ಯದ ಗಮನ ಸೆಳೆದರು, ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುಮಕೂರಿನಲ್ಲಿ ತಡವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಟನೆ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.
ಮಾಧ್ಯಮಗಳಿಗೆ ಮಾಹಿತಿ ನೀಡಿದವರು ಯಾರು? ಆರ್.ಅಶೋಕ್ ಈಗ ವಿರೋಧ ಪಕ್ಷದ ನಾಯಕರು, ಸರ್ಕಾರದಲ್ಲಿ ಅವರು ಇದ್ದಿದ್ದರೆ ಅವರಿಗೆ ಎಲ್ಲಾ ಮಾಹಿತಿ ಇರುತ್ತಿತ್ತು. ಖಿನ್ನತೆಗೆ ಒಳಗಾಗಿದ್ದ ಪವನ್ ನಜ್ಜೂರ್ ಚೇತರಿಸಿಕೊಂಡಿದ್ದು ಬೆಂಗಳೂರಿಗೆ ತೆರಳುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದಷ್ಟೇ ಹೇಳಿದರು.
ಶಿರಾ ತಾಲೂಕು ಬರಗೂರು ಫಾಮ್ರ್ಹೌಸ್ನಲ್ಲಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಅಮಾನತು ಆಗಿರುವುದರಿಂದ ಸಹಜವಾಗಿಯೇ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ನನಗೆ ಹೇಳಿದರು. ನೀವು(ಮಾಧ್ಯಮ) ಹೇಳಬೇಕು. ನಾನು ವಿಚಾರಿಸಿ ಆ ತರಹದ್ದು ಏನಾದರು ಇದ್ದರೆ ನಿಮಗೆ(ಮಾಧ್ಯಮ) ಮಾಹಿತಿ ನೀಡುತ್ತೇನೆ ಎಂದು ಸಿಟ್ಟಾಗಿಯೇ ಪ್ರತಿಕ್ರಿಯಿಸಿದರು.
ನಿದ್ರೆ ಮಾತ್ರೆ ಸೇವಿಸಿದ್ದರು ಎಂಬ ವದಂತಿ?
ಸೇವೆಯಿಂದ ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಪವನ್ ನಜ್ಜೂರ್ಶಿರಾ ತಾಲೂಕು ಬರಗೂರು ಸಮೀಪದಲ್ಲಿಯೇ ಇರುವ ಬ್ಯಾಚ್ಮೆಟ್ ಐಪಿಎಸ್ ಅಧಿಕಾರಿಯೊಬ್ಬರ ಫಾಮ್ರ್ಹೌಸ್ನಲ್ಲಿ ಶುಕ್ರವಾರ ರಾತ್ರಿ ತಂಗಿದ್ದರು ಎನ್ನಲಾಗಿದೆ.
ನಿದ್ದೆಮಾತ್ರ ಸೇವಿಸಿದ್ದರಿಂದ ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಿದ್ದ ಕಾರಣದಿಂದ ಸ್ಥಳಿಯ ಆಸ್ಪತ್ರೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದು ಫಾಮ್ರ್ಹೌಸ್ಗೆ ವಾಪಸಾಗಿದ್ದರು ಎನ್ನಲಾಗಿದೆ.ಆದರೆ, ಆತ್ಮಹತ್ಯೆ ಯತ್ನ ಎಂಬ ವದಂತಿಯ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.
ಅಮಾನತು ಆದೇಶದಲ್ಲಿ ಕೇಂದ್ರ ಸ್ಥಾನಬಿಟ್ಟು ಹೊರಹೋಗದಂತೆ ಸೂಚನೆ ನೀಡಿದ್ದರಿಂದ ಟನೆ ಬಗ್ಗೆ ಹೊರಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ, ಆದರೆ,ಶಿರಾ ತಾಲೂಕಿನ ಬರಗೂರಿನಲ್ಲಿ ಫಾಮ್ರ್ಹೌಸ್ನಲ್ಲಿ ಶನಿವಾರ ಸಾಕಷ್ಟು ಸಂಖ್ಯೆಯ ಕಾರುಗಳು, ಅಧಿಕಾರಿಗಳು ಭೇಟಿ ನೀಡಿದ್ದನ್ನು ಸ್ಥಳಿಯರು ಖಚಿತಪಡಿಸಿದ್ದಾರೆ.
ತುಮಕೂರಿನಲ್ಲಿ ಖುದ್ದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಬಗ್ಗೆ ಪ್ರತಿಕ್ರಿಯಿಸಿ, ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದು ಅಮಾನತು ಆದೇಶದ ನಂತರ ಪವನ್ ನಜ್ಜೂರ್ ಸಹಜವಾಗಿಯೇ ಖಿನ್ನತೆಗೆ ಒಳಗಾಗಿದ್ದು ಈಗ ಆರೋಗ್ಯವಾಗಿದ್ದಾರೆ, ಬೆಂಗಳೂರಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ಟನೆ ಬಗ್ಗೆ ತುಮಕೂರು ಜಿಲ್ಲೆಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ.