ತುಮಕೂರಿನಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಆಯೋಜಿಸಿದ್ದ ದಣ ಭಾರತ ಎಂಎಸ್​ಎಂಇ ಸಮಾವೇಶದ ಅಂಗವಾಗಿ ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ಸಚಿವ ಪರಮೇಶ್ವರ್​ ಉದ್ಘಾಟಿಸಿದರು.  
ತುಮಕೂರು

ತುಮಕೂರನ್ನು ಬದಲಾಯಿಸೋಲ್ಲ !

ಪ್ರಮುಖ ಮುಖ್ಯಾಂಶಗಳು

  • ಸಚಿವ ಪರಮೇಶ್ವರ ಸ್ಪಷ್ಟನೆ
  • ಬೆಂಗಳೂರು ಭಾಗವಾಗಬೇಕೆಂಬ ಕಲ್ಪನೆ
  • ನಾನು ಇಲ್ಲೇ ಹುಟ್ಟಿ ಬೆಳದವನು
ತುಮಕೂರು: ತುಮಕೂರು ಬೆಂಗಳೂರಿನ ಒಂದುಭಾಗವಾಗಬೇಕು ಎಂಬುದು ನನ್ನ ಕಲ್ಪನೆ. ತುಮಕೂರು ಹೆಸರನ್ನು ಬದಲಾಯಿಸೋಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಪುನರುಚ್ಚರಿಸಿದರು.
ನಗರದ ಗಾಜಿನಮನೆ ಆವರಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ದಕ್ಷಿಣ ಭಾರತ ಎಂಎಸ್​ಎಂಇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ತುಮಕೂರಿನವನೇ. ನಾನು ಇಲ್ಲೇ ಹುಟ್ಟಿ ಬೆಳದವನು. ತುಮಕೂರಿನ ಅಸ್ಮಿತೆಗೆ ಧಕ್ಕೆ ತರುವುದಿಲ್ಲ. ಭೌಗೋಳಿಕ, ಆಡಳಿತಾತ್ಮಕವಾಗಿ ತುಮಕೂರು ಬದಲಾಗುವುದಿಲ್ಲ. ಆದರೆ, ಬೆಂಗಳೂರಿನ ಒಂದು ಭಾಗವಾಗಿಸುವ ಪ್ರಯತ್ನವನ್ನು ಮುಂದುವರೆಸುವೆ ಎಂದರು.
ನಗರ ಶಾಸಕ ಜ್ಯೋತಿ ಗಣೇಶ್​, ತುಮಕೂರು ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು , ಕಾಶಿಯಾ ಅಧ್ಯಕ್ಷ ಬಿ.ಆರ್​.ಗಣೇಶ್​ರಾವ್​, ಉಪಾಧ್ಯಕ್ಷ ನಿಂಗಣ್ಣ ಎಸ್​.ಬಿರದಾರ್​, ಪ್ರಧಾನಕಾರ್ಯದರ್ಶಿ ಎಸ್​.ಎಂ.ಹುಸೇನ್​, ಆರ್​.ಕೇಶವಮೂರ್ತಿ, ವೈ.ದಿನೇಶ್​ ಕುಮಾರ್​, ಆರ್​.ದೊರೈ, ಕಾಸಿಯಾ ದಣಭಾರತ ಪ್ಯಾನೆಲ್​ ಛೇರ್ಮನ್​ ಸದಾಶಿವ ಆರ್​.ಅಮಿನ್​, ಪಿ.ಎಸ್​.ಶ್ರೀಕಂಠ ದತ್ತ, ಕೆ.ಆನಂದರಾವ್​, ಕೆನರಾಬ್ಯಾಂಕ್​ ಪ್ರಾದೇಶಿಕ ಮುಖ್ಯಸ್ಥ ಗಂಗೇಶ್​ ಗುಂಜಾನ್​, ಎಸ್​ಬಿಐ ಪ್ರಾದೇಶಿಕ ವ್ಯವಸ್ಥಾಪಕ ಪಿ. ಶ್ರೀರಾಮ್​ ಉಪಸ್ಥಿತರಿದ್ದರು.
ಕೇಂದ್ರ ಸಚಿವ ವಿ.ಸೋಮಣ್ಣ, ಜ್ಯೋತಿಗಣೇಶ್​ ಬೇರೆ ಪಕ್ಷದವರು. ಆದರೆ, ನಮ್ಮಿಬ್ಬರಿಗೆ ಜನ ಕೊಟ್ಟಿರುವ ಟಾರ್ಗೆಟ್​ ತುಮಕೂರನ್ನು ಆರೋಗ್ಯಕರವಾಗಿ ಬೆಳೆಸಬೇಕು. ಆ ಕೆಲಸವನ್ನು ಜ್ಯೋತಿನು, ಸೋಮಣ್ಣನು ಮಾಡ್ತಾರೆ. ನಾನು ಕೂಡ ಅಭಿವೃದ್ಧಿ ಕೆಲಸ ಮಾಡುತ್ತೇನೆ. ರೈಲ್ವೆ ಯೋಜನೆಗೆ ತೊಡಕಾಗಿದ್ದ ಭೂಸ್ವಾಧಿನ ಪ್ರಕ್ರಿಯೆಯನ್ನು ಜಿಲ್ಲೆಯಲ್ಲಿ ಪೂರ್ಣಗೊಳಿಸಲಾಗಿದೆ.
ಡಾ.ಜಿ.ಪರಮೇಶ್ವರ್​
ಗೃಹ ಸಚಿವ
ಸಣ್ಣ ಕೈಗಾರಿಕೆಗಳ ಅಸ್ತಿತ್ವಕ್ಕೆ ಬೃಹತ್​ ಕೈಗಾರಿಕೆಗಳು ಹೊಡೆತ ನೀಡಿವೆ. ಆದರೆ, ದೇಶದ ಜಿಡಿಪಿಗೆ ಸಣ್ಣ ಕೈಗಾರಿಕೆಗಳ ಕೊಡುಗೆ ನೀಡಿವೆ. ರಾಜ್ಯ, ಕೇಂದ್ರ ಸರ್ಕಾರಗಳು ದೇಶದ ಬೆನ್ನೆಲುಬಾಗಿರುವ ಸಣ್ಣ ಕೈಗಾರಿಗಳ ಬೆಳವಣಿಗೆಗೆ ಅಗತ್ಯ ನೆರವನ್ನು ನೀಡಿವೆ.
ಜಿ.ಬಿ.ಜ್ಯೋತಿಗಣೇಶ್​
ನಗರ ಶಾಸಕ