ತುಮಕೂರಿನಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಆಯೋಜಿಸಿದ್ದ ದಣ ಭಾರತ ಎಂಎಸ್ಎಂಇ ಸಮಾವೇಶದ ಅಂಗವಾಗಿ ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ಸಚಿವ ಪರಮೇಶ್ವರ್ ವೀಸಿದರು.
- ಮೆಟ್ರೋ ರೈಲು ಡಿಪಿಆರ್ ಸಲ್ಲಿಕೆ
- ಸಚಿವ ಸಂಪುಟದಲ್ಲಿ ಪ್ರಸ್ತಾಪ
- ತುಮಕೂರಿನಲ್ಲಿ ಎಂಎಸ್ಎಂಇ ಸಮಾವೇಶ
ತುಮಕೂರು: ನಮ್ಮ ಮೆಟ್ರೋ ರೈಲು ತುಮಕೂರಿಗೆ ವಿಸ್ತರಿಸುವ ಯೋಜನೆ ಡಿಪಿಆರ್ ಸಿದ್ಧವಾಗಿದೆ. ಸರ್ಕಾರಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಲಾಗಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಚಿವ ಸಂಪುಟಕ್ಕೆ ತಂದು ಚರ್ಚಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಗಾಜಿನಮನೆ ಆವರಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ದಕ್ಷಿಣ ಭಾರತ ಎಂಎಸ್ಎಂಇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಮಕೂರಿಗೆ ಮೆಟ್ರೋ ರೈಲು ತರುವುದಾಗಿ 10 ವರ್ಷಗಳಿಂದ ಹೇಳಿಕೊಂಡು ಬಂದಿದ್ದೇನೆ. ಇದು ರೈಲು ಬಿಡುವುದಲ್ಲ. ತುಮಕೂರಿಗೆ ಮೆಟ್ರೋ ತರುತ್ತಿದ್ದೇವೆ. ಅದನ್ನು ಸ್ಪೆಷಲ್ ವೆಹಿಕಲ್ ಪರ್ಪಸ್ (ಎಸ್ವಿಪಿ) ಅಡಿ ತರುವುದಾ ಅಥವಾ ಪಿಪಿಪಿ ಮಾದರಿಯಡಿ ಯೋಜನೆ ಅನುಷ್ಠಾನಗೊಳಿಸಬೇಕಾ ಎಂಬ ಸಾಧಕಬಾಧಕಗಳನ್ನು ಸಂಪುಟದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
2ನೇ ಏರ್ಪೋರ್ಟ್ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಎರಡನೇ ಏರ್ಪೋರ್ಟ್ ನಿರ್ಮಿಸುವ ನಿಟ್ಟಿನಲ್ಲಿ ಈಗಾಗಲೇ ನೆಲಮಂಗಲ, ಡಾಬಸಪೇಟೆ, ಬಿಡದಿ ಬಳಿ ಜಾಗವನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮಧ್ಯೆ ಜಿಲ್ಲೆಯ ಶಿರಾ&ತುಮಕೂರು ನಡುವೆ 2 ಸಾವಿರ ಎಕರೆಯನ್ನು ಏರ್ ಪೋರ್ಟ್ ನಿರ್ಮಾಣಕ್ಕೆ ಕೊಡುವ ಭರವಸೆಯನ್ನು ಕೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ ಎಂದು ಪರಮೇಶ್ವರ್ ಹೇಳಿದರು.