Guru's guidance contributes to the progress of society 
ತುಮಕೂರು

ಗುರುವಿನ ಮಾರ್ಗದರ್ಶನ ಸಮಾಜದ ಏಳಿಗೆಗೆ ಪೂರಕ

ಹುಳಿಯಾರು: ವಿದ್ಯಾರ್ಥಿಗಳು ತಮ್ಮ ಮೂಲ ಸಂಸತಿ ಮರೆಯದೆ, ಗುರುಗಳನ್ನು ಗೌರವಿಸಬೇಕು ಎಂದು ನಿವೃತ್ತ ಕನ್ನಡ ಅಧ್ಯಾಪಕ ಬಿ.ಸಿ.ಗಂಗಾಧರಯ್ಯ ತಿಳಿಸಿದರು.
ಹುಳಿಯಾರು ಸಮೀಪದ ತಿಮ್ಮನಹಳ್ಳಿಯ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಯ ಆವರಣದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಿಯದರ್ಶಿನಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಶಾರದಾ ವಿದ್ಯಾಪಿಠ ಪ್ರೌಢಶಾಲೆ ಮತ್ತು ಕಾಲೇಜಿನ 1989&2001ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದಿಂದ ಬುಧವಾರ ಹಮ್ಮಿಕೊಂಡಿದ್ದ ಗುರು ವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಆಂಗ್ಲ ಶಿಕ್ಷಕ ಟಿ.ಎನ್​.ಮಾಧವ್​ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದುತ್ತಿರುವುದು ಹೆಮ್ಮೆಯ ವಿಷಯ. ಕೇವಲ ಸಮಾರಂಭಕ್ಕೆ ಸೀಮಿತವಾಗದೆ, ಗ್ರಾಮದ ಶಾಲೆಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಶ್ರೀ ಶಾರದಾ ವಿದ್ಯಾಪಿಠ ಕಾಲೇಜಿನ ಪ್ರಾಂಶುಪಾಲ ಆರ್​.ರೇಣುಕ್​ ಕುಮಾರ್​ ಮಾತನಾಡಿ, ಇಂದಿನ ಇಂಟರ್​ನೆಟ್​ ಯುಗದಲ್ಲಿ ಹಳೆಯ ಆಚಾರ&ವಿಚಾರ ಮತ್ತು ಸಂಸತಿಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಸಂಟನಾ ಶಕ್ತಿ ವಿದ್ಯಾರ್ಥಿಗಳಲ್ಲಿ ಇರುವುದು ಆಶಾದಾಯಕ ಬೆಳವಣಿಗೆ ಎಂದರು.
ಕಾರ್ಯಕ್ರಮದ ಸಂಟಕ ರಾಜಣ್ಣ ಮತ್ತು ತಂಡದವರು ನೆರೆದಿದ್ದ ಸಮಸ್ತ ಗುರು ವೃಂದವನ್ನು ಸನ್ಮಾನಿಸಲಾಯಿತು.