ಎಸ್​.ಆರ್​.ಶ್ರೀನಿವಾಸ್​  
ತುಮಕೂರು

ಬಾಯಿ ಚಪಲಕ್ಕೆ ಮಾತನಾಡಬೇಕು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಸ್​.ಆರ್​.ಶ್ರೀನಿವಾಸ್​
  • ಯೋಗ್ಯತೆಗೆ ತಕ್ಕಂತೆ ಮಾತು
  • ಹಿತಿಮಿತಿ ಇದ್ದರೆ ಪಕ್ಷಕ್ಕು ಒಳಿತು
ತುಮಕೂರು: ನಾಯಕತ್ವ ಬದಲಾವಣೆ ಕುರಿತು ಯಾರೇ ಆದರೂ ಬಾಯಿ ಚಪಲಕ್ಕೆ ಮಾತನಾಡಬೇಕು. ಸಿಎಂ, ಡಿಸಿಎಂ ನಡುವಿನ ಮಾತುಕತೆ ಯಾರು ಇರಲಿಲ್ಲ. ನಮ್ಮ ಯೋಗ್ಯತೆಗೆ ತಕ್ಕಂತೆ ಮಾತನಾಡಬೇಕು ಎಂದು ಶಾಸಕ ಎಸ್​ ಆರ್​ ಶ್ರೀನಿವಾಸ್​ ಮಾರ್ಮಿಕವಾಗಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್​ ಆರೋಗ್ಯ ಮಂದಿರ ನಿಮಾರ್ಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡುವವರು ಪತ್ರಿಕೆಗಳಲ್ಲಿ ಬರಲಿ, ದೊಡ್ಡವರು ಗಮನಸಲಿ ಎಂದು ಮಾತನಾಡುವುದು ಸರಿಯಲ್ಲ. ನಮ್ಮ ಹಿತಿಮಿತಿಗಳಲ್ಲಿ ಮಾತನಾಡಿದರೆ ಸಮಾಜಕ್ಕು ಒಳ್ಳೆಯದು, ಪಕ್ಷಕ್ಕು ಒಳಿತು ಎಂದರು.
ಶಿಕ್ಷಣ ಸಚಿವನಾಗಿದ್ದ ವೇಳೆ 9 ಕೆಪಿಎಸ್​ ಶಾಲೆಯನ್ನು ತಾಲೂಕಿನಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, ಈ ಯೋಜನೆಯು ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಕಲ್ಪನೆಯಾಗಿತ್ತು. ಇದು ಉತ್ತಮ ಯೋಜನೆ, ಇದೀಗ 9 ಕೆಪಿಎಸ್​ ಶಾಲೆಗೆ ಅನುಮತಿ ದೊರಕಿದೆ. ಶಿರಾ ನೆಲ್ಲಿಗೆರೆ ರಸ್ತೆಗೆ 50 ಕೋಟಿ ರೂ., ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆಗಿದ್ದು, ಉಳಿದದ್ದಕ್ಕೆ 35 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಯುದ್ಧ ಹಿನ್ನೆಲೆ ಎಲ್ಲಾ ಕಚ್ಚಾವಸ್ತುಗಳ ದರ ಏರಿಕೆ ಹಿನ್ನೆಲೆ ಗುತ್ತಿಗೆದಾರರು ಕಾಮಗಾರಿ ಮಾಡಲು ಹಿಂದೇಟು ಹಾಕುತ್ತಿದ್ದು, ಜಲ್ಲಿ ರಸ್ತೆಯನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಬಿಂದು ಮಾಧವ, ಪಿಡಿಒ ರವಿ, ಮುಖಂಡರಾದ ಯತೀಶ್​, ಲಕ್ಕಣ್ಣ, ಗುತ್ತಿಗೆದಾರ ರವಿ, ಸಿದ್ದರಾಮಯ್ಯ, ಪಟೇಲ್​ ಶಿವರಾಜ್​, ನಂದೀಶ್​, ಸಿದ್ದರಾಜು, ಬಿಸಿಎಂ ಇಲಾಖೆ ಪವಿತ್ರ ಮತ್ತಿತರರು ಉಪಸ್ಥಿತರಿದ್ದರು.