Guardians of a Healthy Society
ಕೊರಟಗೆರೆ: ವೈದ್ಯರು ಸಮಾಜದ ಆರೋಗ್ಯದ ಕಾವಲುಗಾರರು ಎಂಬ ಸಂದೇಶ ಸಾರುವ ಉದ್ದೇಶದಿಂದ ಪಟ್ಟಣದ ಲಂಡನ್ಸ್ ಕಿಡ್ಸ್ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪುಟಾಣಿ ವಿದ್ಯಾರ್ಥಿಗಳು ವೈದ್ಯರ ಸಮವಸ್ತ್ರ ಧರಿಸಿ ವೈದ್ಯಕಿಯ ವೃತ್ತಿಯ ಮಹತ್ವವನ್ನು ಪ್ರತಿಬಿಂಬಿಸುವ ಮೂಲಕ ಎಲ್ಲರ ಗಮನ ಸೆಳೆದರು. ಶಾಲೆಯ ಮುಖ್ಯಶಿಕ್ಷಕಿ ಶ್ರುತಿ ಮಾತನಾಡಿ, ಭಾರತೀಯ ಸಂಸತಿಯಲ್ಲಿ ವೈದ್ಯರನ್ನು ದೇವರಿಗೆ ಸಮಾನವಾಗಿ ಗೌರವಿಸಲಾಗುತ್ತದೆ. ವೈದ್ಯಕಿಯ ವೃತ್ತಿ ಕೇವಲ ಉದ್ಯೋಗವಲ್ಲ. ಅದು ಮಾನವಸೇವೆಯ ಅತ್ಯುನ್ನತ ರೂಪವಾಗಿದೆ. ಜೀವ ಉಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿರುವ ವೈದ್ಯರ ಸೇವೆ ಸಮಾಜಕ್ಕೆ ಅನನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕಿಯ ವೃತ್ತಿಗೆ ಸಂಬಂಧಿಸಿದ ಪರಿಚಯಾತ್ಮಕ ಚಟುವಟಿಕೆಗಳು, ಆರೋಗ್ಯ ಜಾಗೃತಿ ಹಾಗೂ ಸೇವಾ ಮನೋಭಾವದ ಕುರಿತು ಮಾಹಿತಿ ನೀಡಲಾಯಿತು.ಶಾಲೆಯ ಶಿಕ್ಷಕಿಯರಾದ ಶಾಜಿಯಾ, ಕವಿತಾ, ಪ್ರಿಯಾಂಕಾ, ಪಾಲಕರು, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.