ತುಮಕೂರಿನಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸಭೆ ನಡೆಸಿದರು. ಏಳುಕೊಂಡಲ ಮತ್ತಿತರರು ಇದ್ದರು.
- ಅರಣ್ಯ ಸಚಿವ ಈಶ್ವರ ಖಂಡ್ರೆ
- ಚಿರತೆ- ಮಾನವ ಸಂಘರ್ಷ
- ತುಮಕೂರಿನಲ್ಲಿ ಅರಣ್ಯಾಧಿಕಾರಿಗಳ ತುರ್ತು ಸಭೆ
ತುಮಕೂರು: ಜಿಲ್ಲೆಯಲ್ಲಿ ಚಿರತೆ ಉಪಟಳ ಹೆಚ್ಚಿರುವ ಹಿನ್ನೆಲೆಯಲ್ಲಿ ತತ್ಕ್ಷಣವೇ 31 ಹೊಸ ಬೋನುಗಳನ್ನು ಖರೀದಿಸಲು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಾಕೀತು ಮಾಡಿದರು.
ನಗರದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಸಭೆ ನಡೆಸಿದ ಸಚಿವರು,
ಜಿಲ್ಲೆಯ50ಕ್ಕು ಹೆಚ್ಚು ಗ್ರಾಮಗಳಲ್ಲಿ ಚಿರತೆ&ಮಾನವ ಸಂಘರ್ಷವಿದ್ದು ಜನಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎನಿಸಿದೆ. ಈ ಕೂಡಲೇ 31 ಹೊಸ ಬೋನುಗಳನ್ನು ಖರೀದಿಸಿ. ಯಾವುದೇ ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿರುವ ಮಾಹಿತಿ ಬಂದ ಕೂಡಲೇ ವನ್ಯಜಿವಿ ವಿಭಾಗದ ಸಿಬ್ಬಂದಿ ಕಳಿಸಿ, ಪರಿಶೀಲಿಸಿ ಚಿರತೆ ಸಂಚಾರ ಖಚಿತವಾದರೆ, ಬೋನುಗಳನ್ನು ಇಡಲು ತುರ್ತು ಕ್ರಮವಹಿಸಬೇಕು. ತುರ್ತು ಕ್ರಮವಹಿಸುವಂತೆ ಸಚಿವರು ಸೂಚಿಸಿದರು.
ಆಡಿಟ್ ಮಾಡಿಸಿ: ಕ್ಷೀಣಿಸಿದ ಅರಣ್ಯಗಳಲ್ಲಿ ಬರುವ ಮುಂಗಾರಿನಲ್ಲಿ ಸಸಿ ನೆಟ್ಟು ಅರಣ್ಯ ಸಂವರ್ಧನೆ ಮಾಡಬೇಕು. ನಗರ ಪ್ರದೇಶಗಳ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲು ಕ್ರಮವಹಿಸಬೇಕು, ರಸ್ತೆ ಬಳಿಯ ಸಸಿಗಳ ಸುತ್ತ ಕನಿಷ್ಠ 3 ಅಡಿ ಮಣ್ಣಿಸುವಂತೆ ನಿಗಾ ವಹಿಸಬೇಕು, ಎಷ್ಟು ಸಸಿ ಬದುಕಿ ಉಳಿದಿವೆ ಎಂಬ ಬಗ್ಗೆ ಆಡಿಟ್ ಮಾಡಿಸಬೇಕು. ತಿಪಟೂರಿನಲ್ಲಿ ಕಮಾಂಡ್ ಸೆಂಟರ್ ತೆರೆಯುವಂತೆ ಕ್ರಮವಹಿಸಲು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಭೂಮಿಗೆ ಬಂಗಾರದ ಬೆಲೆ ಬದಿರುವ ಹಿನ್ನೆಲೆಯಲ್ಲಿ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಅರಣ್ಯಭೂಮಿ ಕಬಳಿಸಲು ಯತ್ನಿಸುತ್ತಿದ್ದು, ಕೂಡಲೇ ಪೊಲೀಸ್ ದೂರು ದಾಖಲಿಸುವುದರ ಜತೆಗೆ ಅರಣ್ಯ ಅಪರಾಧ ಕಾಯ್ದೆಯಡಿ ಪ್ರಕರಣದಾಖಲಿಸಬೇಕು. ತುಮಕೂರು ಬಯಲು ಸೀಮೆಯಲ್ಲಿರುವ ಅರಣ್ಯಪ್ರದೇಶವೇ ಕಡಿಮೆ. ಇದರಲ್ಲಿ ಒತ್ತುವರಿಯು ಆಗಿದೆ. ಕೆಲವರು ನಕಲಿ ದಾಖಲೆ ಸೃಷ್ಟಿಸಿ ಅರಣ್ಯದ ಮೇಲೆ ಹಕ್ಕು ಚಲಾಯಿಸುತ್ತಿದ್ದರೆ, ಇನ್ನು ಕೆಲವು ಕಡೆ ಅಕ್ರಮಮಂಜೂರಾತಿ ಆಗಿದೆ ಈ ಬಗ್ಗೆ ಅರಣ್ಯಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲ ಮತ್ತಿತರರು ಇದ್ದರು.