ಸೋಮಸುಂದರ್ ಫೇಸ್ ಬುಕ್ ಲೈವ್ ಮಾಡುತ್ತಿದ್ದನ್ನು ತಡೆದ ಪೊಲೀಸರು ಹೊರಗಡೆ ಎಳೆದೊಯ್ಯದು ವಶಕ್ಕೆ ಪಡೆದರು.
- ಫೇಸ್ ಬುಕ್ ಲೈವ್ ಗೆ ಪೊಲೀಸರ ಅಡ್ಡಿ
- ಜನತಾದರ್ಶನದಲ್ಲಿ ಹೈಡ್ರಾಮಾ
- ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ
ತುಮಕೂರು: ಜನತಾದರ್ಶನ ಮುಗಿದು ವೇದಿಕೆಯಿಂದ ಕೆಳಗಿಳಿದು ಬರುತ್ತಿದ್ದ ಸಚಿವ ಡಾ.ಜಿ.ಪರಮೇಶ್ವರ್ಗೆ ಕೆಆರ್ಎಸ್ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ರಹಳ್ಳಿ ಮನವಿ ಕೊಡಲು ಮುಂದಾದ ವೇಳೆ ಆ ಪಕ್ಷದ ಉಪಾಧ್ಯಕ್ಷ ಸೋಮಸುಂದರ್ ಫೇಸ್ ಬುಕ್ ಲೈವ್ ಮಾಡುತ್ತಿದ್ದನ್ನು ತಡೆದ ಪೊಲೀಸರು ಹೊರಗಡೆ ಎಳೆದೊಯ್ಯದು ವಶಕ್ಕೆ ಪಡೆದರು.
ಈ ಸಂಬಂಧ ನಗರ ಠಾಣೆಯಲ್ಲಿ ಕೆಆರ್ಎಸ್ ಪಕ್ಷದ ಮುಖಂಡರ ವಿರುದ್ಧ ಠಾಣೆ ಪಿಎಸ್ಐ ಎಂ.ಎನ್.ಮಂಜುಳಾ ನೀಡಿದ ದೂರಿನ ಹಿನ್ನೆಲೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಮಹಿಳಾ ಅಧಿಕಾರಿ ಅವಮಾನಿಸಿರುವ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಸುಂದರ್ ಮೊದಲ ಆರೋಪಿಯನ್ನಾಗಿಸಿದ್ದು ಮಲ್ಲಿಕಾರ್ಜುನ್ ಹಾಗೂ ಜ್ಞಾನಸಿಂಧುಸ್ವಾಮಿರನ್ನು ಕ್ರಮವಾಗಿ 2,3ನೇ ಆರೋಪಿಯನ್ನಾಗಿಸಲಾಗಿದೆ.
ಈ ಘಟನೆ ಕುರಿತು ಸಾರ್ವಜನಿಕವಾಗಿ ಲಭ್ಯವಿರುವ ವಿಡಿಯೋ ಸಾಕ್ಷ್ಯಗಳು ಪೊಲೀಸರ ದೌರ್ಜನ್ಯವನ್ನು ಬಹಿರಂಗಪಡಿಸುತ್ತವೆ. ಜನರ ಅಹವಾಲು ಕೇಳಬೇಕಾದ ವೇದಿಕೆಯಲ್ಲಿ ಪ್ರಶ್ನೆ ಕೇಳಿದವರನ್ನು ಬಂಧಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ.
ಅದರ ಪರಿಣಾಮಾಗಿ, ದಾಖಲಾಗಿರುವ ಸುಳ್ಳು ಎಫ್ ಐಆರ್ ಅನ್ನು ತಕ್ಷಣ ರದ್ದುಗೊಳಿಸಬೇಕು.
ಶಾಂತಿಯುತವಾಗಿ ಮನವಿ ಸಲ್ಲಿಸಲು ಬಂದ ನಾಯಕರ ಮೇಲೆ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕೃಗೊಳ್ಳಬೇಕು ಎಂದು ಕೆಆರ್ಎಸ್ ಪಕ್ಷ ಆಗ್ರಹಿಸಿದೆ.