ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಜಿಲ್ಲಾಧಿಕಾರಿ ಶುಭಕಲ್ಯಾಣ್
- 42ನೇ ಎಸಿಜೆಎಂ ನ್ಯಾಯಾಲಯ ಆದೇಶ
- ಹಂದ್ರಾಳ್ ನಾಗಭೂಷಣ ನೀಡಿದ್ದ ಖಾಸಗಿ ದೂರು
- ಡಿಸಿ ಶುಭಕಲ್ಯಾಣ್ ಜತೆ 500ರೂ. ಬೆಟ್ಟಿಂಗ್
ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ತುಮಕೂರಿನಲ್ಲಿ ವಿಜಯಪುರ ಹಾಗೂ ದಣಕನ್ನಡ ಜಿಲ್ಲೆಗಳ ನಡುವೆ ನಡೆದಿದ್ದ
ಪಿಯು ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಜತೆ 500ರೂ. ಬೆಟ್ಟಿಂಗ್ ಆಡಿದ್ದಾಗಿ ಪರಮೇಶ್ವರ ಹೇಳಿದ್ದರು.
ಕಳೆದ ವರ್ಷದ ಅಕ್ಟೋಬರ್ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಟ್ಟಿಂಗ್ ಆಡಿ 500ರೂ. ಕಳೆದುಕೊಂಡೆ ಎಂದು ಪರಮೇಶ್ವರ್ ಬಹಿರಂಗವಾಗಿ ನೀಡಿದ್ದ ಹೇಳಿಕೆ ಆಧರಿಸಿ ಎ್ಐಆರ್ ದಾಖಲಿಸುವಂತೆ ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿಗೆ ಎ್ಐಆರ್ ದಾಖಲಿಸದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ಮುಂದುವರಿಸಿದ್ದರು.
ಬಟ್ಟಿಂಗ್ ಬಗ್ಗೆ ನೀಡಿದ್ದ ಹೇಳಿಕೆ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗಿದ್ದ ಕೂಡಲೇ ಎಚ್ಚೆತ್ತುಕೊಂಡಿದ್ದ ಡಾ.ಜಿ.ಪರಮೇಶ್ವರ "ನಾನೊಬ್ಬ ಗೃಹ ಸಚಿವನಾಗಿ ಬೆಟ್ಟಿಂಗ್ ಮಾಡುವುದಕ್ಕೆ ಹೋಗ್ತೀನಾ? ಅಷ್ಟು ಕನಿಷ್ಟ ಜ್ಞಾನ ಇಲ್ಲವೇ? ತಮಾಷೆಗಾಗಿ ಆಡಿದ ಮಾತನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ" ಎಂದು ಪ್ರತಿಕ್ರಿಯೆ ನೀಡಿದ್ದರು.
ಈ ಸಂದರ್ಭದಲ್ಲಿ ಎ್ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ನೀಡಿರುವ ತೀರ್ಪು ಡಾ.ಜಿ.ಪರಮೇಶ್ವರ್ಗೆ ಸಾರ್ವಜನಿಕವಾಗಿ ತೀವ್ರ ಮುಜುಗರ ತಂದಿದೆ. ಇದೇ ಪ್ರಕರಣದಲ್ಲಿ ದೂರು ನೀಡಿದಾಗ ಎ್ಐಆರ್ ದಾಖಲಿಸದ ಕೊಡಿಗೇನಹಳ್ಳಿ ಪಿಎಸ್ಐ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ವಿರುದ್ಧವೂ ಮಧುಗಿರಿ ನ್ಯಾಯಾಲಯದಲ್ಲಿ ಮತ್ತೊಂದು ದಾವೆ ಹೂಡಲಾಗಿದ್ದು ಇದು ಕೂಡ ವಿಚಾರಣೆಯಲ್ಲಿದೆ.
ಇತ್ತೀಚೆಗೆ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೆಆರ್ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ ಕೂಡ ಬೆಟ್ಟಿಂಗ್ ವಿಷಯವನ್ನು ಪ್ರಸ್ತಾಪಿಸಿ ಗೃಹ ಸಚಿವರು ಹಾಗೂ ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಟೀಕಿಸಿದ್ದರು.
ಡಿಸಿ ಶುಭಕಲ್ಯಾಣ್ ಜತೆ ಪರಮ್ 500ರೂ. ಬೆಟ್ಟಿಂಗ್!
ತುಮಕೂರಿನಲ್ಲಿ ಆಯೋಜಿಸಿದ್ದ ಪಿಯು ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಪೈನಲ್ ಪಂದ್ಯ 2025 ಅಕ್ಟೋಬರ್ 19ರಂದು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದಿತ್ತು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಗೆ ಆಗಮಿಸಿದ್ದ ಡಾ.ಜಿ.ಪರಮೇಶ್ವರ ಬಿಡುವು ಮಾಡಿಕೊಂಡು ವಿಜಯಪುರ ಹಾಗೂ ದಣ ಕನ್ನಡ ಜಿಲ್ಲಾ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ೈನಲ್ ಪಂದ್ಯವನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್ ಜತೆ ವೀಸಿದ್ದರು.
ದಕ್ಷಿಣ ಕನ್ನಡ ತಂಡ 36-&26 ಅಂಕಗಳಿಂದ ವಿಜಯಪುರ ತಂಡಕ್ಕೆ ಸೋಲುಣಿಸಿ ಡಾ.ಜಿ.ಪರಮೇಶ್ವರ ಅವರಿಂದ ಪ್ರಶಸ್ತಿ ಸ್ವೀಕರಿಸಿತ್ತು, ಈ ಸಂದರ್ಭದಲ್ಲಿ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿ ಮಾತನಾಡಿದ್ದ ಪರಮೇಶ್ವರ, "ನಾನು 500 ಕಳೆದುಕೊಂಡು ಬಿಟ್ಟೆ, ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಜತೆ ಬೆಟ್ಟಿಂಗ್ ಮಾಡಿಕೊಂಡಿದ್ದೆ' ಎಂದು ಬಹಿರಂಗವಾಗಿಯೇ ಹೇಳಿದ್ದರು.
ಮರು ದಿನ ದಿನಪತ್ರಿಕೆಗಳಲ್ಲಿ ಸುದ್ದಿ ಯಥಾವತ್ ಪ್ರಕಟವಾಗಿತ್ತು. ಬೆಟ್ಟಿಂಗ್ ಆಡಿರುವ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಹಂದ್ರಾಳು ನಾಗಭೂಷಣ ತುಮಕೂರು ಜಿಲ್ಲಾ ಪೊಲೀಸರು ಎ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದರು.