Felicitation in hometown: An inspiration for achievement. 
ತುಮಕೂರು

ಹುಟ್ಟೂರಲ್ಲಿ ಸನ್ಮಾನ ಸಾಧನೆಗೆ ಸ್ಫೂರ್ತಿ

ತುರುವೇಕೆರೆ: ಸ್ವಗ್ರಾಮದಲ್ಲಿ ಸಾಧನೆ ಮಾಡಿದವರನ್ನು ಆತ್ಮೀಯತೆಯಿಂದ ಅಭಿನಂದಿಸಿದರೆ ಮುಂದೊಂದು ದಿನ ಮತ್ತಷ್ಟು ಸಾಧಕರನ್ನು ಹೊರತರಲು ಸಹಾಯವಾಗುತ್ತದೆ ಎಂದು ಯುವ ಜೆಡಿಎಸ್​ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್​ ಹೇಳಿದರು.
ರಾಜೀವ್​ ಗಾಂಧಿ ಯೂನಿವರ್ಸಿಟಿ ಆಫ್​ ಹೆಲ್ತ್​ ಸೈನ್ಸ್​ನಲ್ಲಿ ಎರಡು ಚಿನ್ನದ ಪದಕಗಳಿಸಿದ ತಾಲೂಕಿನ
ಡಾ.ಕವನಾ ಅವರನ್ನು ಬೇಚಿನಹಳ್ಳಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಹೂಟ್ಟೂರಿನಲ್ಲಿ ಮಾಡಿದ ಸನ್ಮಾನ ಮುಖ್ಯಮಂತ್ರಿಗಳಿಂದ ಪಡೆದ ಸನ್ಮಾನಕ್ಕೆ ಸಮ. ಪಾಲಕರ ಮಾರ್ಗದರ್ಶನ ಹಾಗೂ ಶಿಕ್ಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದರು.
ನಿವೃತ್ತ ಉಪನ್ಯಾಸಕ ಎನ್​.ಪಿ.ನಾಗರಾಜ್​, ಶರಣ ಸಾಹಿತ್ಯ ವೇದಿಕೆಯ ದಿಬ್ಬದಹಳ್ಳಿ ಶ್ಯಾಮಸುಂದರ್​ ನಿವೃತ್ತ ಶಿಕ್ಷಕ ಹಬುಕನಹಳ್ಳಿ ಶಿವಣ್ಣ, ಮಂಜುನಾಥ್​, ಮೋಹನ್​, ಗೋಪಾಲ್​ ಇತರರು ಇದ್ದರು.