Farmers are suffering due to electricity privatization
ಮಧುಗಿರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣದ ನೆಪದಲ್ಲಿ ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸಿ ರೈತರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 1.20 ಕೋಟಿ ಲಕ್ಷ ಭಾಗ್ಯಜ್ಯೋತಿ ಮತ್ತು ಕುಟಿರ ಜ್ಯೋತಿಗಳಿವೆ. ಯೂನಿಟ್ ದರದಲ್ಲಿ ಬೇಕಾಬಿಟ್ಟಿ ಏರಿಕೆಯಾಗುತ್ತದೆ. ಕೃಷಿ ಪಂಪ್ಸೆಟ್ಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸಲಾಗುತ್ತಿದೆ. ಇದರಿಂದ ಕೃಷಿಕರು ಬೀದಿಪಾಲಾಗುತ್ತಿದ್ದಾರೆ. ಆದ್ದರಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಬಾರದು. ಎತ್ತಿನಹೊಳೆ ಯೋಜನೆ ನೀರನ್ನು ಈ ವರ್ಷ ತಾಲೂಕಿಗೆ ಹರಿಸಬೇಕು. ನೀರಿನ ಹಂಚಿಕೆಯನ್ನು ಎರಡು ಟಿಎಂಸಿಗೆ ಹೆಚ್ಚಿಸಬೇಕು ಎಂದರು.
ಮಧುಗಿರಿ ಉಪವಿಭಾಗದಲ್ಲಿ ಬಿತ್ತನೆ ಹತ್ತಿ ಸುಮಾರು ಹದಿನೈದು ವರ್ಷಗಳಿಂದ ಬೆಳೆಯುತ್ತಿದ್ದಾರೆ. ಬೀಜದ ಕಂಪನಿಗಳು ಹೊರರಾಜ್ಯದಲ್ಲಿವೆ. ಅವರು ಏಜೆಂಟರು ನೇಮಿಸಿಕೊಂಡು ಬಿತ್ತನೆ ಹತ್ತಿ ಬೆಳೆಯುತ್ತಿದ್ದಾರೆ. ಏಜೆಂಟರ್ ಬೀಜ ಮತ್ತು ಹತ್ತಿಯನ್ನು ತೂಗುವಾಗ ಕ್ವಿಂಟಲ್ಗೆ 7 ಕೆಜಿಗೂ ಹೆಚ್ಚು ಮೋಸ ಮಾಡುತ್ತಿದ್ದಾರೆ. ಕಳಪೆ ಗೊಬ್ಬರ ಔಷಧವನ್ನು ದುಬಾರಿ ಬೆಲೆಗೆ ನೀಡುತ್ತಿದ್ದಾರೆ. ಹತ್ತಿ ಮಾರುಕಟ್ಟೆಗಿಂತ ಎರಡರಿಂದ ಮೂರು ಸಾವಿರ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏ.13 ರಂದು ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.