ಸ್ಥಳ ಶೋಧ ನಡೆಸುತ್ತಿರುವ ಬಾಂಬ್ ನಿಷ್ಕ್ರಿಯ ದಳ
- ಪಾವಗಡ ತಾಲೂಕು ಪೊನ್ನಸಮುದ್ರ
- ತೋಟದ ಪಂಪ್ಹೌಸ್ನಲ್ಲಿ ಬಾಂಬ್ ಸ್ಫೋಟ
- ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
ತಾಲೂಕಿನ ಪೊನ್ನಸಮುದ್ರದ ಕನಿಕಲಬಂಡೆಯ ತೋಟದ ಪಂಪ್ಹೌಸ್ನಲ್ಲಿ ನಾಡಬಾಂಬ್ ಸ್ಫೋಟಗೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರೈತ ಕರಿಯಣ್ಣ ಎಂಬುವರು ಜಮೀನಿನ ಬೆಳೆಗೆ ನೀರು ಹಾಯಿಸಲು ಶುಕ್ರವಾರ ಬೆಳಗ್ಗೆ ತೆರಳಿದ್ದ ವೇಳೆ ತೋಟದ ಮನೆಯಲ್ಲಿ ಪಂಪ್ಹೌಸ್ನಲ್ಲಿನ ಸ್ಟಾರ್ಟರ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಏಕಾಏಕಿ ನಾಡಬಾಂಬ್ ಸ್ಫೋಟಗೊಂದ್ದು ಸ್ಫೋಟದ ಶಬ್ದಕ್ಕೆ ಬೆಚ್ಚಿಬಿದ್ದ ಕರಿಯಣ್ಣ ಕೂಡಲೇ ಹೊರಗೆ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂತರ ಪಂಪ್ಹೌಸ್ ಪರಿಶೀಲಿಸಿದಾಗ ಮತ್ತೊಂದು ಬಾಂಬ್ ಇಟ್ಟಿರುವುದು ಪತ್ತೆಯಾಗಿದೆ. ಸ್ಫೋಟದ ಶಬ್ದ ಹಾಗೂ ದಟ್ಟ ಹೊಗೆ ಹರಡುತ್ತಿದ್ದಂತೆ ಸುತ್ತಮುತ್ತಲಿನ ಜಮೀನುಗಳಲ್ಲಿದ್ದ ರೈತರು ಸ್ಥಳಕ್ಕೆ ಧಾವಿಸಿ, ನಾಡಬಾಂಬ್ ಸ್ಫೋಟದ ಟನೆ ಎಲ್ಲರಲ್ಲು ಆತಂಕ ಮನೆಮಾಡುವಂತೆ ಮಾಡಿದೆ.
ಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ಮಧುಗಿರಿ ಉಪವಿಭಾಗದ ಡಿವೈಎಸ್ಪಿ ಪಿ.ಮಂಜುನಾಥ್, ಪಾವಗಡ ಠಾಣೆಯ ಸಿಪಿಐ ಸುರೇಶ್ಗೌಡ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಬಾಂಬ್ ನಿಷ್ಕ್ರಿಯ ದಳ: ಈ ಸಂಬಂಧ ತುಮಕೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಲ್ಲದೆ, ಮತ್ತೊಂದು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ನಾಡ ಬಾಂಬ್ನ ತೀವ್ರತೆ, ಗುಣಮಟ್ಟ ತಿಳಿದುಬಂದಿಲ್ಲ. ಬಾಂಬ್ ಮಾದರಿ ಸಂಗ್ರಹಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಜಮೀನು ವಿವಾದದ ಹಿನ್ನೆಲೆ: ಕರಿಯಣ್ಣ ಹಾಗೂ ವೆಂಕಟೇಶ್ ಎನ್ನುವರು ನಡುವೆ ಜಮೀನು ವಿವಾದ ಇದ್ದು 3 ತಿಂಗಳ ಹಿಂದಷ್ಟೇ ಇದೇ ಗ್ರಾಮದ ವೆಂಕಟೇಶ್ ಎಂಬಾತ ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆ ಇಲ್ಲವಾದರೆ ಪ್ರಾಣಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ಕರಿಯಣ್ಣ ದೂರು ನೀಡಿದ್ದು ಈವರೆಗೆ ಯಾವುದೇ ಕ್ರಮವಾಗಿರಲಿಲ್ಲ. ಈ ದ್ವೇಷದ ಹಿನ್ನೆಲೆ ವೆಂಕಟೇಶ್ ಪಂಪ್ಹೌಸ್ನಲ್ಲಿ ನಾಡ ಬಾಂಬ್ ಇಟ್ಟಿರುವ ಶಂಕೆ ಇದೆ ಎಂದು ಕರಿಯಣ್ಣ ಆರೋಪಿಸಿದ್ದಾರೆ.