ವಿದ್ಯುತ್ ಕಂಬವೇರಿದ ವ್ಯಕ್ತಿ
- ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ
- ಪಾವಗಡ ತಾಲೂಕು ಬಿ.ಕೆ.ಹಳ್ಳಿಯ ರೈತ ಗೊಪಾಲಪ್ಪ
- ಹೈಟೆಂಷನ್ 400 ಕೆವಿ ಕಂಬ ಹತ್ತಿ ಆತ್ಮಹತ್ಯೆಯತ್ನ
ತುಮಕೂರು: ಪಾವಗಡ ತಾಲೂಕು ನಾಗಲಮಡಿಕೆ ಹೋಬಳಿ ಬಿ.ಕೆ.ಹಳ್ಳಿ ಗ್ರಾಮದ ರೈತ ಗೊಪಾಲಪ್ಪ ಎಂಬುವವರು ಸಾಲ ಬಾಧೆಯಿಂದ ಸೊಲಾರ್ ವಿದ್ಯುತ್ ಸರಬರಾಜಾಗುವ 400 ಕೆವಿ ವಿದ್ಯುತ್ ಕಂಬವೇರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಬುಧವಾರ ನಡೆದಿದೆ.
ಗೋಪಾಲಪ್ಪ ಕಳೆದ ವರ್ಷ ಆರು ಲಕ್ಷ ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿದ್ದು ನಂತರ ಮಕ್ಕಳ ಮದುವೆಗೆ ಸಾಲ ಮಾಡಿಕೊಂಡಿದ್ದು. ಸಾಲಗಾರರ ಕಿರುಕುಳದಿಂದ ಮನನೊಂದು ಮದ್ಯ ಸೇವಿಸಿ ಬಿ.ಕೆ ಹಳ್ಳಿ ಗ್ರಾಮದ ಹೊರವಲಯದಲ್ಲಿ ಹಾದು ಹೋಗಿರವ ಸೋಲಾರ್ ವಿದ್ಯುತ್ ಸರಬರಾಜಾಗುವ ಹೈಟೆಂಷನ್ 400 ಕೆವಿ ಕಂಬ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಸಿ ಹೈಡ್ರಾಮ ಸೃಷ್ಠಿಸಿದ್ದ.
ಕಂಬವೇರಿದ ವ್ಯಕ್ತಿಯನ್ನು ಅಕ್ಕಪಕ್ಕದ ತೊಟದ ಜನ ಕಂಬ ಹತ್ತಿರುವುದನ್ನು ಗಮನಿಸಿ. ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.
ವಿಯಷ ತಿಳಿದ ತಕ್ಷಣ ತಿರಮಣಿ ಪೊಲೀಸ್ ಸಿಬ್ಬಂದಿ ಮತ್ತು ಪಾವಗಡ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು 120 ಅಡಿ ಹೈಟೆಂಷನ್ ಎಲೆಕ್ಟ್ರಿಕಲ್ ಕಂಬದ ಮೇಲಿದ್ದ ವ್ಯಕ್ತಿ ಮನವೊಲಿಸಿ ಹಾರ್ನೆಸ್ಟ್ ಬೆಲ್ಟ್ ಹಾಗೂ ಹಗ್ಗಗಳ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.