ತುಮಕೂರಿನಲ್ಲಿ ಬಿಎಸ್​ವೈ ಜನ್ಮದಿನದ ಅಂಗವಾಗಿ ಯಡಿಯೂರಪ್ಪ ಅಭಿಮಾನಿ ಬಳಗದಿಂದ ಹಿರಿಯ ಅಸಂಘಟಿತ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜಿ.ಬಿ.ಜ್ಯೋತಿಗಣೇಶ್​, ಎಚ್​.ಎಸ್​.ರವಿಶಂಕರ್​, ಆಟೋಯಡಿಯೂರಪ್ಪ, ಅಂಬಿಕಾಹುಲಿನಾಯ್ಕರ್​, ಎಚ್​.ಎನ್​.ಚಂದ್ರಶೇಖರ್​, ಎಸ್​.ಪಿ.ಚಿದಾನಂದ್​, ಟಿ.ಕೆ.ಧನುಷ್​ ಮತ್ತಿತರರು ಉಪಸ್ಥಿತರಿದ್ದರು.  
ತುಮಕೂರು

ಬಿಜೆಪಿಗೆ ಬದುಕನ್ನೇ ಮುಡಿಪಿಟ್ಟಿರುವ ಬಿಎಸ್​ವೈ

ಪ್ರಮುಖ ಮುಖ್ಯಾಂಶಗಳು

  • ಬಿ.ಎಸ್​.ಯಡಿಯೂರಪ್ಪ ಹುಟ್ಟುಹಬ್ಬ ಕಾರ್ಯಕ್ರಮ
  • ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​
  • ಬಿಎಸ್​ವೈ ರಾಜಕೀಯ ಜೀವನ ಸುವರ್ಣ ಸಂಭ್ರಮ
ತುಮಕೂರು: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಹೇಳಿದರು.
ನಗರದ ಬಿಜಿಎಸ್​ ವೃತ್ತದಲ್ಲಿ ಯಡಿಯೂರಪ್ಪ ಅಭಿಮಾನಿ ಆಟೋ ಯಡಿಯೂರಪ್ಪ (ಕೆ.ಎಂ.ಶಿವಕುಮಾರ್​)
ನೇತೃತ್ವದಲ್ಲಿ ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಅಭಿಮಾನಿಗಳ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ಬಿ.ಎಸ್​.ಯಡಿಯೂರಪ್ಪ ಅವರ 50ನೇ ವರ್ಷದ ರಾಜಕೀಯ ಜೀವನದ ಸಂಭ್ರಮ ಹಾಗೂ ಅವರ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 50 ವರ್ಷಗಳ ಕಾಲ ಎಂದಿಗೂ ವಿರಮಿಸದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ$ವನ್ನು ಕಟ್ಟಿಬೆಳೆಸಿದ ಶ್ರೇಯವು ಬಿಎಸ್​ವೈಗೆ ಸಲ್ಲಬೇಕು. ಅವರ ಪಕ್ಷನಿಷ್ಠೆ ಕಾರ್ಯಕರ್ತರಿಗೆ ಪ್ರೇರಣಿಯಾಗಿದೆ ಎಂದರು.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ನಾನು ಶಾಸಕನಾಗಬೇಕಾದರೆ ಬಿಜೆಪಿಯ ಜತೆಗೆ ಯಡಿಯೂರಪ್ಪ ವರ್ಚಸ್ಸು ಕಾರಣ. ಅವರ ಋಣ ನನ್ನ ಮೇಲಿದೆ. ಬಿಜೆಪಿಯನ್ನು ಸಧೃಢವಾಗಿ ಕಟ್ಟಿ ಮತ್ತೆ ಅಧಿಕಾರಕ್ಕೆ ತರುವ ಮೂಲಕ ಕಾರ್ಯಕರ್ತರು ಬಿಎಸ್​ವೈ ನವರಿಗೆ ಜನ್ಮದಿನದ ಕೊಡುಗೆ ನೀಡಬೇಕು ಎಂದು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಮನವಿ ಮಾಡಿದರು.
ಶಿಕಾರಿಪುರದ ಪುರಸಭೆ ಸದಸ್ಯರಾಗಿ 50 ವರ್ಷಗಳ ಹಿಂದೆ ಸಾರ್ವಜನಿಕ ಜೀವನ ಪ್ರವೇಶಿಸಿದ ಯಡಿಯೂರಪ್ಪನವರು ಜನಸಾಮಾನ್ಯರ ಧ್ವನಿಯಾದರು. ಸತತ ಹೋರಾಟದ ಮೂಲಕ ಬಿಜೆಪಿಯ ಬಲವರ್ಧನೆಗೆ ಶ್ರಮಿಸಿ ಜನಾನುರಾಗಿ ನಾಯಕರಾಗಿ ಬೆಳೆದು ಲಕ್ಷಾಂತರ ಜನರ ಅಭಿಮಾನ ಪಡೆದಿದ್ದಾರೆ. ಇಂತಹ ನಾಯಕನ ಜನ್ಮದಿನವನ್ನು ಎಲ್ಲಾ ಕಾರ್ಯಕರ್ತರು ಹೆಮ್ಮೆಯಿಂದ ಆಚರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಹೇಳಿದರು.
ರಾಜ್ಯ ಬಿಜೆಪಿ ವಕ್ತಾರ ಎಚ್​.ಎನ್​.ಚಂದ್ರಶೇಖರ್​ ಮಾತನಾಡಿ, 1980ರಲ್ಲಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವದಲ್ಲಿರಲಿಲ್ಲ. ಆಗ ಲೋಕಸಭೆಯಲ್ಲಿ ಇಬ್ಬರು ಬಿಜೆಪಿ ಸಂಸದರಿದ್ದರು. ಪಕ್ಷ ಬೆಳೆದು ಸಂಸದರ ಸಂಖ್ಯೆ 302ಕ್ಕೆ ಏರಿತು. ಮೂರು ಬಾರಿ ಬಿಜೆಪಿ ದೇಶ ಆಳಿತು. ರಾಜ್ಯದಲ್ಲೂ ಇದೇ ಪರಿಸ್ಥಿತಿ ಇತ್ತು. ಹೊಸ ಸೂರ್ಯ ಉದಯಿಸಿದಂತೆ ಯಡಿಯೂರಪ್ಪನವರು ಬಂದು ಬಿಜೆಪಿಯನ್ನು ಬಲವರ್ಧನೆಗೆ ತರಲು ಶ್ರಮಿಸಿದರು. ಪಕ್ಷದಲ್ಲಿ ವಾಜಪೇಯಿ, ಅಡ್ವಾಣಿ ನಂತರದ ಸ್ಥಾನದಲ್ಲಿ ಯಡಿಯೂರಪ್ಪ ಅವರಿದ್ದರು ಎಂದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್​, ಮುಖಂಡ ಎಸ್​.ಪಿ.ಚಿದಾನಂದ್​, ಆಟೋ ಯಡಿಯೂರಪ್ಪ, ಬಿಜೆಪಿ ನಗರಾಧ್ಯಕ್ಷ ಟಿ.ಕೆ.ಧನುಷ್​, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಎಚ್​.ಎಂ.ರವೀಶಯ್ಯ, ನಿಸರ್ಗ ರಮೇಶ್​, ಬಂಬೂ ಮೋಹನ್​, ಸತ್ಯಮಂಗಲ ಜಗದೀಶ್​, ನಂಜುಂಡಸ್ವಾಮಿ(ದಾಸಣ್ಣ), ನಗರಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ್​, ವಿಷ್ಣುವರ್ಧನ್​,ರೇಖಾ ಶಿವಕುಮಾರ್​, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.
ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಬದುಕು ಹಾಗೂ ಹೋರಾಟ ಪಾಠವಾಗಲಿ, ಅವರ ರೀತಿ ಪಕ್ಷ ನಿಷ್ಠೆ, ಬದ್ಧತೆ ರೂಢಿಸಿಕೊಳ್ಳಲಿ.
ಅಂಬಿಕಾ ಹುಲಿನಾಯ್ಕರ್​
ಬಿಜೆಪಿ ರಾಜ್ಯ ಕಾರ್ಯದರ್ಶಿ