- ಕಾಮಗಾರಿ ಪುನರಾಂಭಿಸಲು ಪರಮ್ ಅತ್ಯುತ್ಸಾಹ
- ಎಕ್ಸ್ಪ್ರೆಸ್ ಕೆನಾಲ್ ಮಾಡಿದರೆ ಜಿಲ್ಲೆಯಲ್ಲಿ ಕ್ರಾಂತಿ
- ಜೆಡಿಎಸ್, ಬಿಜೆಪಿ ಮುಖಂಡರ ಹೋರಾಟದ ಎಚ್ಚರಿಕೆ
ತುಮಕೂರು: ಸಿಎಂ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂ ಯೋಜನೆಯಾಗಿರುವ ಬೆಂಗಳೂರು ದಣ ಜಿಲ್ಲೆಗೆ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗುವ ನೆನಗುದಿಗೆ ಬಿದ್ದಿರುವ ಕಾಮಗಾರಿಗೆ ಡಿಸಿಎಂ ಡಾ.ಜಿ.ಪರಮೇಶ್ವರ ಕೂಡ ಬೆಂಬಲ ಸೂಚಿಸಿರುವುದು ಜಿಲ್ಲೆಯಲ್ಲಿ ರೈತರ ನೆಮ್ಮದಿ ಕೆಡಿಸಿದೆ.
ಜಿಲ್ಲೆಯೆಲ್ಲೆಡೆ ಜನಾಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಾಗೃತಗೊಂಡಿರುವ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಗುರುವಾರ ತುಮಕೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಮಗಾರಿಗೆ ಜಿಲ್ಲೆಯ ವಿರೋಧವಿದ್ದು ನಾಲೆಯಲ್ಲಿ ನೀಡು ತೆಗೆದುಕೊಂಡು ಹೋದರೆ ನಮ್ಮ ಅಭ್ಯಂತರವಿಲ್ಲ ಎಂದು ಎಚ್ಚರಿಕೆ ರವಾನಿಸಿದರು.
ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕುಣಿಗಲ್ ಮೂಲಕ ಮಾಗಡಿ ಮತ್ತು ರಾಮನಗರಕ್ಕೆ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಕಾಮಗಾರಿಗೆ ನಮ್ಮ ವಿರೋಧವಿದೆ. ಈಗಾಗಲೇ ಇರುವ ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ ಎಂದರು.
ಡಿ.ಕೆ.ಶಿವಕುಮಾರ್ ತರಾತುರಿಯಲ್ಲಿ ಕಾಮಗಾರಿ ನಡೆಸಲು ಬಂದಾಗ ಎಕ್ಸ್ಪ್ರೆಸ್ ಕೆನಾಲ್ನಿಂದ ಜಿಲ್ಲೆಯ ಗುಬ್ಬಿ, ಮಧುಗಿರಿ, ಕೊರಟಗೆರೆ, ತುಮಕೂರು ನಗರ, ಗ್ರಾಮಾಂತರ ತಾಲೂಕುಗಳಿಗೆ ಆಗುವ ನೀರಿನ ತೊಂದರೆಯನ್ನು ಮನಗಂಡು ಸಾರ್ವಜನಿಕರು, ರೈತರು, ಸ್ವಾಮೀಜಿಗಳು ಒಗ್ಗೂಡಿ ಬೃಹತ್ ಹೋರಾಟ ನಡೆಸಿದ್ದರ ಫಲವಾಗಿ, ಕಾಮಗಾರಿ ಸ್ಥಗಿತಗೊಂಡಿದೆ. ಈಗ ಡಿಸಿಎಂ ಡಾ.ಜಿ.ಪರಮೇಶ್ವರ ಕಾಮಗಾರಿ ಕೆಗೆತ್ತಿಕೊಳ್ಳುವ ಬಗ್ಗೆ ಮಾತನಾಡಿರುವುದು ಜಿಲ್ಲೆಗೆ ಕಾಂಗ್ರೆಸ್ ಮಾಡುತ್ತಿರುವ ಮೋಸ ಎಂದರು.
ಜಿ.ಪರಮೇಶ್ವರ ತುಮಕೂರು ಜಿಲ್ಲೆಯಿಂದ ಗೆಲುವು ಸಾಧಿಸಿ, ಸಚಿವರಾಗಿದ್ದರೂ ಜಿಲ್ಲೆಯ ಹಿತ ಕಾಯುವುದನ್ನು ಬಿಟ್ಟು, ಪೈಪ್ ಲಾಬಿಗೆ ಮಣಿದು ಎಕ್ಸ್ಪ್ರೆಸ್ ಕೆನಾಲ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಮನವೊಲಿಸುವ ಮಾತನಾಡುತಿದ್ದಾರೆ. ಆದರೆ, ಕುಣಿಗಲ್ ತಾಲೂಕಿನ ಮಾಕೋರ್ನಹಳ್ಳಿ, ಮಂಗಳ ಜಲಾಶಯ, ಕುಣಿಗಲ್ ದೊಡ್ಡ ಕೆರೆಗೆ ಸ್ವಾಭಾವಿಕವಾಗಿಯೇ ಈವರೆಗೂ 7.50 ಟಿಎಂಸಿ ನೀರು ಹರಿದಿದೆ, ಇದನ್ನು ಮುಚ್ಚಿಟ್ಟು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಬಾರದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಒಂದೆರಡು ತಿಂಗಳು ಮಳೆ ವೆತ್ಯಾಸ ಆಗಿರುವುದಕ್ಕೆ ರೈತರ ಕೊಳವೆ ಬಾವಿಗಳಲ್ಲಿ ನೀರಿಲ್ಲದ ತೋಟ, ತುಡಿಕೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಏಕ್ಸ್ಪ್ರೆಸ್ ನಾಲೆಯ ಮೂಲಕ ನೀರು ತೆಗೆದುಕೊಂಡು ಹೋದರೆ ಉಳಿದವರ ಪಾಡೇನು? ಹಾಗಾಗಿ ಎಕ್ಸ್ಪ್ರೆಸ್ ಕೆನಾಲ್ ವಿರುದ್ದದ್ದ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ದಿಲೀಪ್ಕುಮಾರ್, ಚಂದ್ರಶೇಖರಬಾಬು, ಜೆಡಿಎಸ್ ಮುಖಂಡರಾದ ಶಿರಾ ಉಗ್ರೇಶ್, ಕೆ.ಟಿ.ಶಾಂತಕುಮಾರ್, ನಾಗರಾಜು ಮತ್ತಿತರರು ಇದ್ದರು.
ಪೈಪ್ ಲಾಬಿಗೆ ಮಣಿದಿರುವ ಡಾ.ಜಿ.ಪರಮೇಶ್ವರ ಪೊಲೀಸರ ಬಲ ಪ್ರಯೋಗಿಸಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಪುನರಾರಂಭಿಸುವ ಮಾತನಾಡಿರುವುದು ಜಿಲ್ಲೆಯ ಜನರಿಗೆ ಮಾಡಿರುವ ಮೋಸ. ಇದು ನೀರಿನ ಸಮಸ್ಯೆ ಜನರು ಸ್ವಯಂ ಪ್ರೇರಿತವಾಗಿ ಹೋರಾಟಕ್ಕೆ ಬರಲಿದ್ದಾರೆ, ಪೊಲೀಸರು ಲಾಠಿಗೆ ನಾವು ಎಡೆಮಟ್ಟೆ ಬೀಸಬೇಕಾಗುತ್ತದೆ, ಜಿಲ್ಲೆಯ ಹಿತಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗಬೇಕಿದ್ದು ಪಾತೀತವಾಗಿ ಜಿಲ್ಲೆಯ ಹಿತ ಕಾಯೋಣ.