Ensure eligible voters are not deprived of voting. 
ತುಮಕೂರು

ಅರ್ಹರು ಮತದಾನದಿಂದ ವಂಚಿತರಾಗದಿರಲಿ

ತಿಪಟೂರು: ಕೇಂದ್ರ ಚುನಾವಣಾ ಆಯೋಗದ ನಿಯಮದಂತೆ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಪ್ರತಿಯೊಬ್ಬರ ಮನೆಗಳಲ್ಲಿ ನಡೆಯಲಿದ್ದು, ಅರ್ಹ ಮತದಾರರು ಸಮಗ್ರ ಮಾಹಿತಿಯೊಂದಿಗೆ ಸಹಕರಿಸಿ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ಶಾಸಕ ಕೆ.ಷಡಕ್ಷರಿ ತಮ್ಮ ಸ್ವಗೃಹದಲ್ಲಿ ಎಸ್​ಐಆರ್​ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಸಂವಿಧಾನದ ಅಡಿಯಲ್ಲಿ ಅರ್ಹ ಪ್ರಜೆಗಳು ಚುನಾವಣೆ ಸಂದರ್ಭದಲ್ಲಿ ಮತದಾನದಿಂದ ವಂಚಿತರಾಗಬಾರದು. ಬಿಎಲ್​ಒಗಳು ನೀಡುವ ಫಾರಮ್​ರ್ ಅನ್ನು ಸರಿಯಾಗಿ ಭರ್ತಿ ಮಾಡಿ, ತಿಳಿಯದಿದ್ದರೆ ಅವರಿಂದಲೇ ಭರ್ತಿ ಮಾಡಿಸಿ ಅವರಿಗೆ ನೀಡಬೇಕು ಎಂದರು.
ತಾಲೂಕು ದಂಡಾಧಿಕಾರಿ ಮೋಹನ್​ ಕುಮಾರ್​ ಮಾತನಾಡಿ, ನಗರ ಮತ್ತು ತಾಲೂಕಿನಲ್ಲಿ 1,86.174 ಮತದಾರರಿದ್ದು, ಮೂರು ದಿನಗಳಿಂದ 58,257 ಎಸ್​ಐಆರ್​ ಫಾರಮ್​ರ್ಗಳನ್ನು ವಿತರಿಸಲಾಗಿದೆ. ತಿಪಟೂರು ತಾಲೂಕು ರಾಜ್ಯದಲ್ಲಿ ಎರಡನೇ ಸ್ಥಾನ ಮತ್ತು ಜಿಲ್ಲೆಯಲ್ಲಿ ಮೊದಲನೇ ಸ್ಥಾನದಲ್ಲಿದೆ ಬಿಎಲ್​ಒಗಳಿಗೆ ಸಹಕರಿಸಬೇಕು ಎಂದು ತಿಳಿಸಿದರು.