educational-progress-is-possible-when-rural-children-are-encouraged 
ತುಮಕೂರು

ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹಿಸಿದಾಗ ಶೈಕ್ಷಣಿಕ ಪ್ರಗತಿ ಸಾಧ್ಯ

ವಿಜಯವಾಣಿ ಸುದ್ದಿಜಾಲ ಮಧುಗಿರಿ
ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆ ಬರೆಯಲು ಕಿವಿಯೋಲೆ, ಜನಿವಾರ ತೆಗೆಯುವ ಪರಿಸ್ಥಿತಿ ಬಂದಿರುವುದು ದುರಂತ ಎಂದು ಪಾವಗಡ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ ಮಹರಾಜ್​ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಎಂಜಿಎಂ ಬಾಲಿಕಾ ಫ್ರೌಡ ಶಾಲೆಯಲ್ಲಿ ಗುರುವಾರ 60ನೇ ವಜ್ರ ಮಹೋತ್ಸವ ಸಂಭ್ರಮ ಹಾಗೂ ಮಾನ್​ ಹುಮ್ಮೆಲ್​ ಕಂಪನಿಯ ಸಹಯೋಗದಿಂದ ನಿಮಾರ್ಣಗೊಂಡಿರುವ ಶಾಲಾ ಕಟ್ಟಡ ಮತ್ತು ಶಾರದಾದೇವಿ ಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಮಕ್ಕಳು ಪ್ರತಿಭಾವಂತರಾಗಿದ್ದು, ಅವರಿಗೆ ಪ್ರೋತ್ಸಾಹ ನೀಡಿದರೆ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧ್ಯ. ಎಂಜಿಎಂ ಶಾಲೆಯು ಭವಿಷ್ಯ ಭಾರತದ ನಿಮಾರ್ಣಕ್ಕೆ ಅಡಿಪಾಯ ಹಾಕಿದೆ. ಶಾಲೆಯು ಶಿಕ್ಷಣ ಜತೆಗೆ ಸಂಸ್ಕಾರ, ಸಂಸತಿ ಪರಂಪರೆಯನ್ನು ಕಲಿಸುತ್ತಿದೆ. ಮಕ್ಕಳು ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಈ ಶಾಲೆಗೆ ದೂರ ಶಿಕ್ಷಣಕ್ಕಾಗಿ 5 ಲಕ್ಷ ರೂ. ನೆರವು ನೀಡುವುದಾಗಿ ಭರವಸೆ ತಿಳಿಸಿದರು.
ಡಿಡಿಪಿಐ ಮಾಧವರೆಡ್ಡಿ ಮಾತನಾಡಿ, 60 ವರ್ಷಗಳಿಂದ ಎಂಜಿಎಂ ಶಾಲೆಯು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಣವು ಪ್ರಮುಖಪಾತ್ರ ವಹಿಸುತ್ತದೆ. ಶಾಲೆಯಲ್ಲಿ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ತಮ್ಮ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಎಂಜಿಎಂ ವಿದ್ಯಾ ಸಂಸ್ಥೆಯ ಖಜಾಂಚಿ ಡಿ.ಜಿ.ಶಂಕರನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಂ.ಎಸ್​ ಶಂಕರನಾರಾಯಣ, ಮಧುಗಿರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ.ಶ್ರೀನಿವಾಸ್​, ಬಿಇಒ ಕೆ.ಎಚ್​.ಹನುಮಂತರಾಯಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಿತ್ತಯ್ಯ, ಪುರಸಭೆಯ ಮಾಜಿ ಉಪಾಧ್ಯಕ್ಷೆ ಸುಜಾತಾ ಶಂಕರನಾರಾಯಣ, ನಿರ್ದೇಶಕರಾದ ನಟರಾಜು, ಸಂದೀಪ್​ ನಾರಾಯಣ್​, ಮುಖ್ಯಶಿಕ್ಷಕಿ ಚೇತನಕುಮಾರಿ, ಶ್ವೇತಾ ಇದ್ದರು.
02 ಎಂಜಿಡಿ 01
ಮಧುಗಿರಿ ಪಟ್ಟಣದ ಎಂಜಿಎಂ ಬಾಲಿಕಾ ಫ್ರೌಡಶಾಲೆಯಲ್ಲಿ ಆಯೋಜಿಸಿದ್ದ 60ನೇ ವಜ್ರಮಹೋತ್ಸವವನ್ನು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ ಮಹರಾಜ್​ ಉದ್ಘಾಟಿಸಿದರು. ಡಿಡಿಪಿಐ ಮಾಧವರೆಡ್ಡಿ, ಮಾನ್​ ಹುಮ್ಮೆಲ್​ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜಿತ್​ ನಾಯರ್​, ಪ್ರಶಾಂತ್​ ಗಾಯ್​ ತೊಂಡೆ, ಡಾ.ಹಾಲಮ್ಮ, ಡಾ.ಮಾಲಿ ಮಿಥುನ್​, ಕಾರ್ತಿಕ್​ ರಾಜ್​, ಡಯಟ್​ ಪ್ರಾಂಶುಪಾಲ ಎಚ್​.ಆರ್​.ಗಂಗಾಧರ್​ ಮತ್ತಿತರರು ಇದ್ದರು.