Education without discipline is like a boat without a rudder. 
ತುಮಕೂರು

ಶಿಸ್ತು ಇಲ್ಲದ ಶಿಕ್ಷಣ ಚುಕ್ಕಾಣಿ ಇಲ್ಲದ ದೋಣಿಯಂತೆ

ಹುಳಿಯಾರು: ವಿದ್ಯಾರ್ಥಿಗಳು ಮೊದಲು ತಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಶಿಸ್ತು ಇಲ್ಲದ ಶಿಕ್ಷಣವು ಚುಕ್ಕಾಣಿ ಇಲ್ಲದ ದೋಣಿಯಂತಾಗುತ್ತದೆ ಎಂದು ಬಿಎಂಎಸ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಜಿ.ಬಿ.ಜಗದೀಶ್​ ಅಭಿಪ್ರಾಯಪಟ್ಟರು.\
ಹುಳಿಯಾರು ಬಿ.ಎಂ.ಎಸ್​. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಕಂದಿಕೆರೆಯಲ್ಲಿ ಹಮ್ಮಿಕೊಂಡಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ "ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಶಿಕ್ಷಣದ ಮಹತ್ವ" ಕುರಿತ ಬೌದ್ಧಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎನ್​ಎಸ್​ಎಸ್​ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಶಿಸ್ತನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ಕಲಿತ ಶಿಸ್ತು ಉತ್ತಮ ನಾಗರಿಕರನ್ನಾಗಿ ಮಾಡಲಿ ಎಂದು ಆಶಿಸಿದರು.
ಸಂಪನ್ಮೂಲ ವ್ಯಕ್ತಿ ಎನ್​.ಆರ್​.ಸುಮಯ್ಯ ಮಾತನಾಡಿ, ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ರೂಪಿಸಿಕೊಳ್ಳುವ ಸುಸಂದರ್ಭ. ಇಲ್ಲಿ ಅಳವಡಿಸಿಕೊಳ್ಳುವ ಶಿಸ್ತು ಮತ್ತು ಪಡೆಯುವ ಶಿಕ್ಷಣವು ಮುಂದಿನ ಇಡೀ ಜೀವನಕ್ಕೆ ಭದ್ರ ಬುನಾದಿಯಾಗಲಿದೆ ಎಂದರು.