Education is the key weapon for success in life. 
ತುಮಕೂರು

ಶಿಕ್ಷಣವೇ ಜೀವನದ ಯಶಸ್ಸಿಗೆ ಪ್ರಮುಖ ಅಸ್ತ್ರ

ಎಂ.ಎನ್​.ಕೋಟೆ : ಪರಿಶ್ರಮ, ಶಿಸ್ತು ಹಾಗೂ ಗುರಿಯಡಿ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಉತ್ತಮ ಸಾಧನೆ ಮಾಡಬೇಕು ಎಂದು ಎಸ್​.ಆರ್​.ಎಸ್​.ಪ್ಲೆವುಡ್​ ಮಾಲೀಕ ಸಾಗರ್​ ತಿಳಿಸಿದರು.
ಗುಬ್ಬಿ ತಾಲೂಕಿನ ತ್ಯಾಗಟೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎನ್​ಎಂಎಂಎಸ್​ ಪರೀಕ್ಷೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಅವಿಭಾಜ್ಯ ಅಂಗವಿದ್ದದಂತೆ. ಶಿಕ್ಷಣವೇ ಜೀವನದಲ್ಲಿ ಯಶಸ್ಸಿಗೆ ಪ್ರಮುಖ ಅಸ್ತ್ರ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶವನ್ನು ಪಡೆದು ಉನ್ನತ ಗುರಿ ಸಾಧಿಸಬೇಕು. ಜೀವನದಲ್ಲಿ ದೊಡ್ಡ ಗುರಿ ಇದ್ದಾಗ ಮಾತ್ರ ಏನು ಬೇಕಾದರೂ ಸಾಧಿಸಬಹುದು ಎಂದರು.
ಮುಖ್ಯಶಿಕ್ಷಕ ಲೋಕೇಶ್​ ಮಾತನಾಡಿ, ಮಕ್ಕಳು ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕು. ಎನ್​.ಎಂ.ಎಂ.ಎಸ್​ನಲ್ಲಿ ಕಳೆದ ವರ್ಷದಂತೆ ಈ ಬಾರಿಯೂ 9 ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರಸ್ವಾಮಿ , ಎಸ್​ಡಿಎಂಸಿ ಅಧ್ಯಕ್ಷ ದಯಾನಂದ್​ ಶಿಕ್ಷಕರು ಇದ್ದರು.