Education for poor children from Dr. Ampanna's family
ಪಟ್ಟನಾಯಕನಹಳ್ಳಿ: ಶಿರಾ ತಾಲೂಕಿನ ಗೊಲ್ಲಹಳ್ಳಿಯ ಶ್ರೀ ಮಂಜುನಾಥ ಗ್ರಾಮಾಂತರ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಭಾನುವಾರ ಗುರುವಂದನಾ, ಸ್ನೇಹಮಿಲನ ಹಾಗೂ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಹಳೆಯ ವಿದ್ಯಾರ್ಥಿಗಳು, ವೈದ್ಯಕಿಯ ವೃತ್ತಿಯೊಂದಿಗೆ ಸಮಾಜ ಸೇವೆಯನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿದ್ದ ಶಾಲೆಯ ಸಂಸ್ಥಾಪಕ ದಿವಂಗತ ಡಾ.ಅಂಪಣ್ಣ ಅವರು, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಸದಾಶಯದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಗೊಲ್ಲಹಳ್ಳಿಯಲ್ಲಿ ಶಾಲೆ ನಿರ್ಮಿಸಿ ಉಚಿತ ಶಿಕ್ಷಣ ನೀಡುವ ಮಹತ್ವದ ಕಾರ್ಯ ಮಾಡಿದ್ದಾರೆ. ಜತೆಗೆ ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸಿ ಜನಸೇವೆ ಸಲ್ಲಿಸಿದ್ದರು. ತಮ್ಮ ದ್ವೀತಿಯ ಪುತ್ರ ಡಾ.ಮಂಜುನಾಥ್ ಅವರ ಹೆಸರಿನಲ್ಲಿ ಶ್ರೀ ಮಂಜುನಾಥ ಗ್ರಾಮಾಂತರ ಪ್ರೌಢಶಾಲೆ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಅಂಪಣ್ಣ ಅವರ ಪತ್ನಿ ಸೌಭಾಗ್ಯಾ ಅಂಪಣ್ಣ, ಹಿರಿಯ ಪುತ್ರ ಡಾ.ಗೋಪಾಲಕೃಷ್ಣ ಹಾಗೂ ದ್ವೀತಿಯ ಪುತ್ರ ಡಾ.ಮಂಜುನಾಥ್ ಅವರನ್ನು ಹಳೇಯ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಚಂದ್ರಶೇಖರ್, ಶಿಕ್ಷಕರಾದ ಶಿವಕುಮಾರ್, ಜಯಣ್ಣ, ಕುಮಾರ್, ತಿಮ್ಮರೆಡ್ಡಿ, ಕೃಷ್ಣಪ್ಪ, ಮಂಜುನಾಥ್, ರಂಗನಾಥಪ್ಪ, ರಂಗನಾಥ್, ರಂಗಸ್ವಾಮಿ, ದೇವರಾಜು, ರಂಗಶ್ಯಾಮಪ್ಪ, ರಾಜಣ್ಣ, ರಾಘವೇಂದ್ರ, ಶಿವಾನಂದ್, ಜನಾರ್ಧನ್, ಹನುಮಂತರಾಯಪ್ಪ, ದೊಡ್ಡಹೋಬಳಯ್ಯ, ಪಾಟೀಲ್ ಜಯರಾಮ್ ಇತರರು ಇದ್ದರು.