ಸಿದ್ದಗಂಗಾ ಮಠದಲ್ಲಿ ನಡೆದ ಡಾ.ಶಿವಕುಮಾರ ಮಹಾಶಿವಯೋಗಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಭಾಗಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬಸವಣ್ಣನ ಪ್ರತಿಮೆಯನ್ನು ನೀಡಿ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಗೌರವಿಸಿದರು.
- ಸಿದ್ದಗಂಗೆಯ ಶಿಕ್ಷಣ ಕ್ರಾಂತಿ
- ರಾಷ್ಟ್ರಪತಿ ದ್ರೌಪದಿ ಮುರ್ಮು ಮೆಚ್ಚುಗೆ
- ಡಾ.ಶಿವಕುಮಾರ ಮಹಾಶಿವಯೋಗಿಗಳ 119ನೇ ಜಯಂತಿ
ತುಮಕೂರು: ಲಿಂಗೈಕ್ಯ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಶಿವಯೋಗಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದ ಭಕ್ತಿಯ ಸಂಗಮದಲ್ಲಿ ಹಳೇ ವಿದ್ಯಾರ್ಥಿಗಳು, ಸಹಸ್ರಾರು ಭಕ್ತರು ಮಿಂದೆದ್ದರು. ಬುಧವಾರ ಶ್ರೀಮಠದಲ್ಲಿ ಎಲ್ಲೆಡೆ ಸಿದ್ದಗಂಗಾ ಶ್ರೀಗಳ ನಾಮಸ್ಮರಣೆ ಅನುರಣಿಸುತ್ತಿತ್ತು. ಶ್ರೀಗಳ ಗದ್ದುಗೆಗೆ ಬೆಳಗಿನಜಾವ ರುದ್ರಾಭಿಷೇಕ ನೆರವೇರಿಸಿ ಬಳಿಕ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹರಗರು ಚರಮೂರ್ತಿಗಳ ಮಹಾಮಂಗಳರಾತಿ ನೆರವೇರಿಸಿದರು. ಇಡೀದಿನ ಸಾಲಗಟ್ಟಿ ನಿಂತ ಭಕ್ತರು ಶ್ರೀಗಳ ಗದ್ದುಗೆಗೆ ತೆರಳಿ ಭಕ್ತಿ ಸಮರ್ಪಣೆ ಮಾಡಿದರು.
ಶಿಕ್ಷಣದಿಂದ ವ್ಯಕ್ತಿತ್ವ, ಚಾರಿತ್ರ$್ಯ ನಿರ್ಮಾಣ: ಸಿದ್ದಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆದ ಡಾ.ಶಿವಕುಮಾರ ಮಹಾಶಿವಯೋಗಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿಮುಮುರ್,ಶಿಕ್ಷಣವು ವ್ಯಕ್ತಿತ್ವ ವಿಕಸನ ಮತ್ತು ಚಾರಿತ್ರ$್ಯ ನಿಮಾರ್ಣಕ್ಕೆ ಬುನಾದಿಯಾಗಿದೆ. ಶಿಕ್ಷಣವು ಆತ್ಮನಿರ್ಭರತೆಗೆ ದಾರಿ ತೋರಿಸಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ಹಾಗೂ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಶ್ರೀ ಸಿದ್ದಗಂಗಾ ಮಠವು ಅತ್ಯಂತ ಅಮೂಲ್ಯ ಕೊಡುಗೆ ನೀಡುತ್ತಿದೆ. ಪ್ರಾಥಮಿಕ ಶಾಲೆಯಿಂದ ವೈದ್ಯಕಿಯ, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಕೋರ್ಸ್ವರೆಗಿನ ಶಿಕ್ಷಣವನ್ನು ಶ್ರೀಮಠದ ಶಿಕ್ಷಣ ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ. ನಮ್ಮ ಸಂಸತಿಯಲ್ಲಿ ವಿದ್ಯಾದಾನಕ್ಕೆ ಅತ್ಯಂತ ಮಹತ್ವವಿದ್ದು ವ್ಯಕ್ತಿತ್ವ ವಿಕನಸ ಹಾಗೂ ಚಾರಿತ್ರ$್ಯ ನಿರ್ಮಾಣ ರೂಪಿಸುವ ಮೂಲಧಾರವಾಗಿದೆ. ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಶ್ರೀಮಠವು ತೊಡಗಿಕೊಂಡಿದೆ ಎಂದು ಪ್ರಶಂಶಿಸಿದರು.
ಕಠಿಣ ಪರಿಶ್ರಮ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆ ಪರಸ್ಪರ ಸಂಬಂಧ ಹೊಂದಿವೆ. ಮಂಚೂಣಿಯಲ್ಲಿ ಕರ್ನಾಟಕ: ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆಗೆ ಆಧ್ಯಾತ್ಮಿಕತೆಯು ಬಲವಾದ ಅಡಿಪಾಯ ಒದಗಿಸಲಿದ್ದು ಆಧ್ಯಾತ್ಮಿಕ, ಧಾರ್ಮಿಕ ನೆಲವಾಗಿರುವ ಕರ್ನಾಟಕವು ರಾಷ್ಟ್ರ ನಿರ್ಮಾಣದಲ್ಲಿ ಮಂಚೂಣಿಯಲ್ಲಿದೆ. ಶ್ರಮಶೀಲ ಮತ್ತು ಪ್ರತಿಭಾನ್ವಿತ ಕರ್ನಾಟಕದ ಜನರು ನಿರಂತರವಾಗಿ ರಾಷ್ಟ್ರ ನಿಮಾರ್ಣಕ್ಕೆ ಕೊಡುಗೆ ನೀಡಿದ್ದಾರೆ. ಕರ್ನಾಟಕವು ರಾಷ್ಟ್ರ ನಿಮಾರ್ಣದ ಪ್ರಮುಖ ಕೇಂದ್ರವಾಗಬಹುದು ಎಂಬುದು ನನ್ನ ನಂಬಿಕೆ ಎಂದು ಮುರ್ಮು ಹೇಳಿದರು.
ತ್ರಿವಿಧ ದಾಸೋಹ ಕೇಂದ್ರ: ಅನ್ನ, ಅಕ್ಷರ, ಆಶ್ರಯ ದಾಸೋಹದ ಕೇಂದ್ರ ಸಿದ್ದಗಂಗಾ ಮಠ. ಈ ಮಠದ ಜವಾಬ್ದಾರಿವಹಿಸಿಕೊಂಡಿದ್ದ ಪರಮಪೂಜ್ಯ ಶಿವಕುಮಾರ ಶ್ರೀಗಳು ತಮ್ಮ ಇಡೀ ಬದುಕನ್ನು ಮಾನವ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟುಕೊಂಡಿದ್ದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ರೀತಿ ಶ್ರೀಗಳು ಅನನ್ಯ ಸೇವೆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸ್ಮರಿಸಿದರು.