- ಭದ್ರತಾ ಸಿಬ್ಬಂದಿಯಿಂದ ತಪಾಸಣೆ
- ಇಂಚಿಂಚು ತಪಾಸಿಸಿದ ಸಿಬ್ಬಂದಿ
- ಸೆಕ್ಯುರಿಟಿ ಹೈ ಅಲರ್ಟ್
ತುಮಕೂರು: ರಾಷ್ಟ್ರಪತಿ ಆಗಮನ ಹಿನ್ನೆಲೆ ಮಠದ ಆವರಣದಲ್ಲಿ ಭದ್ರತಾಸಿಬ್ಬಂದಿ ತೀವ್ರ ತಪಾಸಣೆ ನಡೆಸಿತು. ಸಂಜೆ ಶ್ವಾನ ದಳ ತಂಡವು ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಕಚೇರಿ ತಪಾಸಿಸುವ ವೇಳೆ ಶ್ವಾನವು ಶ್ರೀಗಳ ಮುಂದೆ "ವಂದನೆ" ಸಲ್ಲಿಸುವಂತೆ ಸಿಬ್ಬಂದಿ ಕೊಟ್ಟ ಸೂಚನೆ ಪಾಲಿಸಿತು.
ಸಿದ್ದಗಂಗಾ ಮಠದ ಲಿಂಗೈಕ್ಯಡಾ.ಶಿವಕುಮಾರ ಮಹಾಶಿವಯೋಗಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪತಿ ಮುಮುರ್ ಬುಧವಾರ ಭಾಗಿಯಾಗಲಿದ್ದು ಈ ಹಿನ್ನೆಲೆ ಶ್ರೀಮಠದಲ್ಲಿ "ಖಾಕಿ' ಭದ್ರಕೋಟೆ ನಿರ್ಮಿಸಲಾಗಿದೆ. 1500 ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಕೇಂದ್ರ ವಲಯ ಐಜಿಪಿ ಲಾಬೂರಾಮ್ ನೇತೃತ್ವದಲ್ಲಿ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಮಾರ್ಗದರ್ಶನದಲ್ಲಿ
ಎಎಸ್ಪಿ 3, ಡಿವೈಎಸ್ಪಿ 8, ಪೊಲೀಸ್ ಇನ್ಸ್ಪೆಕ್ಟರ್ 29, ಪಿಎಸ್ಐ 79, ಎಎಸ್ಐ 114, ಮುಖ್ಯ ಪೇದೆ ಹಾಗೂ ಪೇದೆಗಳು 1181, ಮಹಿಳಾ ಪೊಲೀಸರು 81, ಡಿಎಆರ್ ತುಕಡಿ - 4 ಸೇರಿ ಒಟ್ಟು 1500ಕ್ಕು ಹೆಚ್ಚು ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ತುಮಕೂರು ವಿವಿ ಹೆಲಿಪ್ಯಾಡ್ನಿಂದ ಸಿದ್ದಗಂಗಾ ಮಠದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಪೊಲೀಸ್ ರಕ್ಷಣಾ ಪಡೆ ಇರಲಿದೆ.