- ತುಮಕೂರು ಜತೆ ಚಿತ್ರದುರ್ಗ ಜವಾಬ್ದಾರಿ
- ತತ್ಕ್ಷಣದಿಂದಲೇ ಜಾರಿಬರುವಂತೆ ಆದೇಶ
- ಇನ್ನೂ ಜಿಲ್ಲಾ ಉಸ್ತುವಾರಿ ಹಂಚಿಕೆ ಆಗಿಲ್ಲ
ತುಮಕೂರು: ಡಿಸಿಎಂ ಡಾ.ಜಿ.ಪರಮೇಶ್ವರ್ಗೆ ಪ್ರಕೃತಿ ವಿಕೋಪ ನಿರ್ವಹಣೆಯ ಎರಡ ಜಿಲ್ಲೆಗಳ ಮೇಲುಸ್ತವಾರಿ ವಹಿಸಲಾಗಿದೆ.
ಖಾತೆ ಕ್ಯಾತೆ, ಸಂಪುಟ ವಿಸ್ತರಣೆ, ಇನ್ನೂ ಹಂಚಿಕೆಯಾಗದ ಜಿಲ್ಲಾ ಉಸ್ತುವಾರಿ ಹೀಗೆ ಡಿ.ಕೆ.ಶಿವಕುಮಾರ್ ಸರ್ಕಾರ ಹಲವು ಸವಾಲುಗಳ ನಡುವೆ ವಿವಿಧ ಜಿಲ್ಲೆಗಳ ಪ್ರಕೃತಿ ವಿಕೋಕ ನಿರ್ವಹಣೆ ಮೇಲುಸ್ತುವಾರಿಯನ್ನು ಡಿಸಿಎಂ ಸೇರಿದಂತೆ ಸಂಪುಟದ ಸಚಿವರುಗಳಿಗೆ ವಹಿಸಲಾಗಿದೆ. ತುಮಕೂರು, ಚಿತ್ರದುರ್ಗ: ಡಿಸಿಎಂ ಪರಮೇಶ್ವರ್ಗೆ ತುಮಕೂರು ಜತೆ ಚಿತ್ರದರ್ಗು ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಾಹಣೆ ಉಸ್ತುವಾರಿಯನ್ನು ತತ್ಕ್ಷಣದಿಂದ ವಹಿಸಲಾಗಿದೆ.
ಯು.ಟಿ.ಖಾದರ್ ಹೆಗಲಿಗೆ 4 ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿದೆ. ಉಡುಪಿ, ಕೊಡಗು, ದಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆ ವಹಿಸಲಾಗಿದೆ. ಕೆ.ಎಚ್.ಮುನಿಯಪ್ಪಗೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ ಹಾಗೂ ಸತೀಶ್ ಜಾರಕಿಹೊಳಿಗೆ ಬೆಳಗಾವಿ, ಧಾರವಾಡ, ಹಾವೇರಿ ವಹಿಸಲಾಗಿದೆ. ಇನ್ನುಳಿದಂತೆ ಸಂಪುಟದ ಸಚಿವರಿಗೆ ಎರಡೆರಡು ಜಿಲ್ಲೆಗಳ ಮೇಲುಸ್ತಾರಿವಹಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಈವರೆಗೆ ಯಾರಿಗೂ ವಹಿಸಿಲ್ಲ. 2018ರಲ್ಲಿ ಹಾಗೂ 2023ರಲ್ಲಿ ಡಿಸಿಎಂ ಪರಮೇಶ್ವರ್ ತುಮಕೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನಿರ್ವಹಿಸಿದ್ದರು. ಪರಮೇಶ್ವರ್ ಪ್ರಸ್ತುತ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪ್ರಭಾವಿಯಾಗಿದ್ದು ಮತ್ತೊಮ್ಮೆ ತುಮಕೂರು ಜಿಲ್ಲೆಯ ಉಸ್ತುವಾರಿಯನ್ನೇ ಪಡೆದುಕೊಳ್ಳಲಿದ್ದಾರೆ.