ಕಂದಾಯ ಇಲಾಖೆಗೆ ವರ್ಗಾವಣೆಯಾದ ಅಬಕಾರಿ ಭೂಮಿ 
ತುಮಕೂರು

ಸೇಂದಿವನ, ಈಚಲುವನ ಉತ್ತವರ ದಶಕಗಳ ಗೋಳು!

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಮಂಜೂರಾತಿ ಕೋರಿದ 6367 ಅರ್ಜಿ
  • ಬಗರ್​ಹುಕುಂ ವಿಲೇವಾರಿಗೆ ಕಾನೂನು ಅಡ್ಡಿ
  • ಇತ್ಯರ್ಥಕ್ಕೆ ಕಂದಾಯ ಆಯುಕ್ತರ ಅಧ್ಯಕ್ಷತೆಯ ಸಮಿತಿ
ತುಮಕೂರು: ಜಿಲ್ಲೆಯಲ್ಲಿ ದಶಕಗಳಿಂದಲೂ ಉಳುಮೆ ಮಾಡಿಕೊಂಡು ಸರ್ಕಾರದ ದಾಖಲಾತಿಗಾಗಿ ಬಗರ್​ಹುಕುಂ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿರುವ ಜಮೀನುಗಳ ಪೈಕಿ ವಿವಾದಕ್ಕೆ ಕಾರಣವಾಗಿರುವ ಸೇಂದಿವನ/ಈಚಲವನ ಜಮೀನು ಇತ್ಯರ್ಥಕ್ಕೆ ಸರ್ಕಾರ ಮುಂದಾಗಬೇಕಿದೆ. ಕಾನೂನು ಸಡಿಲಿಸಿ ನೈಜ ರೈತರಿಗೆ ಭೂಮಿಯ ಹಕ್ಕು ನೀಡಬೇಕಿದೆ.
ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧೀನದಲ್ಲಿದ್ದ ಈಚಲುವನ, ಸೇಂದಿವನದ 43692 ಎಕರೆ ಜಮೀನು 2001ರದಲ್ಲಿ ಸರ್ಕಾರದ ಆದೇಶದಂತೆ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ. ಈ ಜಮೀನುಗಳಲ್ಲಿ ದಶಕಗಳಿಂದಲೂ ಕೃಷಿ ಮಾಡುತ್ತಿರುವ ಸಾವಿರಾರು ಜನರು ಹಕ್ಕುಪತ್ರಕ್ಕಾಗಿ ಸರ್ಕಾರದ ಮೊರೆಯಿಟ್ಟರೂ ಅಧಿಕಾರಿಗಳ ಮನಸ್ಸು ಕರಗಿಲ್ಲ.
ಈ ಹಿಂದೆಯೇ 2054 ರೈತರಿಗೆ ಕೃಷಿ ಉದ್ದೇಶಕ್ಕಾಗಿ ಹಾಗೂ ಇತರೆ ಸಾರ್ವಜನಿಕ ಬಳಕೆಗಾಗಿ 70 ಎಕರೆಗೂ ಹೆಚ್ಚು ಈಚಲುವನ, ಸೇಂದಿವನ ಎಂದು ನಮೂದಾಗಿರುವ ಜಮೀನು ಮಂಜೂರು ಮಾಡಿದ ಉದಾಹರಣೆಯಿದೆ ಆದರೆ, ಇತ್ತೀಚಿನ ಬಗರ್​ಹುಕುಂ ನಮೂನೆ 50, 53 ಹಾಗೂ 57ರಲ್ಲಿ ಅರ್ಜಿಗಳ ವಿಲೇವಾರಿಗೆ ಕಾನೂನು ಅಡ್ಡಿಯಾಗಿರುವುದು ಭೂರಹಿತ ಕುಟುಂಬಗಳ ನೆಮ್ಮದಿ ಕೆಡಿಸಿದೆ.
ದಶಕಗಳಿಂದಲೂ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರ ಸತತ ಮನವಿ ಮೇರೆಗೆ ಅರ್ಜಿಗಳ ಪರಿಗಣಿಸುವ ಬಗ್ಗೆ ಪರಿಶೀಲಿಸಲು ಕಂದಾಯ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ 2026 ಮಾ.2ರಂದು ಸಮಿತಿಯನ್ನು ಸರ್ಕಾರ ರಚಿಸಿದ್ದು ತುಮಕೂರು ಜಿಲ್ಲೆಯಲ್ಲಿ ದಾಖಲಾತಿಗಳಿಗಾಗಿ ಚಾತಕ ಪತಂತೆ ಕಾಯುತ್ತಿರುವ ರೈತರಲ್ಲಿ ಹೊಸಭರವಸೆ ಮೂಡಿಸಿದೆ.
ಸೇಂದಿವನ ಎಂದು ನಮೂದಾಗಿರುವ ಜಮೀನು ಕಂದಾಯ ಇಲಾಖೆಗೆ ವರ್ಗಾವಣೆಗೊಂಡ ಬಳಿಕ ಸಾರ್ವಜನಿಕ ಸ್ಮಶಾನಕ್ಕೆ ತುಮಕೂರು ತಾಲೂಕಿನಲ್ಲಿ 3&10 ಎಕರೆ, ಗುಬ್ಬಿ ತಾಲೂಕು ಹಾಗಲವಾಡಿಯಲ್ಲಿ 1&20 ಎಕರೆ, ಶಿವರಾಂಪುರದಲ್ಲಿ 3 ಎಕರೆ, ಶಿರಾ ನಗರದಲ್ಲಿ ಬರೋಬ್ಬರಿ 50 ಎಕರೆಯನ್ನು ಸ್ಮಾಶಾನ, ಆಶ್ರಯ ಯೋಜನೆ ಹಾಗೂ ನತ್ಯಾಜ್ಯ ವಿಲೇವಾರಿ ಟಕ ನಿರ್ಮಾಣಕ್ಕೆ ನೀಡಲಾಗಿದೆ ಮತ್ತು ತಿಪಟೂರಿನಲ್ಲಿ 12 ಎಕರೆ ಭೂಮಿಯನ್ನು ಆಶ್ರಯ ಯೋಜನೆಗಾಗಿ ನೀಡಲಾಗಿದೆ.
ಈ ಹಿಂದೆಯೇ ಸೇಂದಿವನ, ಈಚಲವನ ಎಂದು ನಮೂದಾಗಿರುವ ಭೂಮಿಯಲ್ಲಿಯೇ ಉಳಿಮೆ ಮಾಡಿ ಅರ್ಜಿ ಸಲ್ಲಿಸಿದ್ದ 2054 ಜನರಿಗೆ ಭೂಮಿ ಮಂಜೂರಾತಿ ನೀಡಿದ್ದು ಈತ್ತೀಚೆಗೆ ಕಾನೂನು ತೊಡಕು ಇಟ್ಟುಕೊಂಡು ಅರ್ಜಿ ವಿಲೇವಾರಿಯನ್ನು ಕೈಬಿಟ್ಟಿರುವುದು ಜಿಲ್ಲೆಯಲ್ಲಿ ಭೂಮಿಗಾಗಿ ಚಾತಕ ಪಯಂತೆ ಕಾದಿರುವ ರೈತರಿಗೆ ನಿರಾಸೆ ಮೂಡಿಸಿದೆ. ಸರ್ಕಾರ ಈ ಸಮಸ್ಯೆಗೆ ಶ್ರೀ ಪರಿಹಾರ ಸೂಚಿಸಬೇಕಿದೆ.
ಕಂದಾಯ ಇಲಾಖೆಗೆ ವರ್ಗಾವಣೆಯಾದ ಅಬಕಾರಿ ಭೂಮಿ:
ತಾಲೂಕು ವಿಸ್ತೀರ್ಣ(ಎಕರೆ)
ತುಮಕೂರು 16
ಗುಬ್ಬಿ 1957
ಕುಣಿಗಲ್​ 95
ತಿಪಟೂರು 52
ಚಿ.ನಾ.ಹಳ್ಳಿ 9524
ತುರುವೇಕೆರೆ 87
ಮಧುಗಿರಿ 195
ಶಿರಾ 10766
ಕೊರಟಗೆರೆ 45
ಪಾವಗಡ 33
ಒಟ್ಟು 22774
====
ಅಬಕಾರಿ ಇಲಾಖೆಗೆ ಸರ್ಕಾರ ನೀಡಿದ್ದ ಭೂಮಿ ಮೀಸಲಿದ್ದ ಉದ್ದೇಶಕ್ಕೆ ಬಳಕೆಯಾಗದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ವಾಪಸ್​ ನೀಡಲಾಗಿದೆ. ಕೃಷಿ ಹಾಗೂ ಸಾರ್ವಜನಿಕ ಬಳಕೆಗೆ ಹಿಂದೆಯೂ ಮಂಜೂರು ಮಾಡಲಾಗಿದೆ, ಸಾವಿರಾರು ರೈತರು ಈಗಲೂ ಸಕ್ರಮಾತಿ ಕೋರಿ ನಮೂನೆ 50, 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿದ್ದು ಸರ್ಕಾರ ಕಾನೂನು ಸಡಿಲಗೊಳಿಸಿ ಉಳುಮೆ ಮಾಡುತ್ತಿರುವ ರೈತರಿಗೆ ಭೂಮಿ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದೇನೆ.
ಟಿ.ಬಿ.ಜಯಚಂದ್ರ
ಶಾಸಕ, ಶಿರಾ
ಜಿಲ್ಲೆಯಲ್ಲಿ ಮಂಜೂರಾತಿ ಕೋರಿದ 6367 ಅರ್ಜಿ:
ಈಚಲುವನ ಅಥವಾ ಸೇಂದಿವನ ಎಂದು ನಮೂದಾಗಿರುವ ಕಂದಾಯ ಇಲಾಖೆ ವಶದಲ್ಲಿರುವ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ 6367 ರೈತರು ಭೂಮಿ ಮಂಜೂರಾತಿಗಾಗಿ ಬಗರ್​ಹುಕುಂ ಅರ್ಜಿ ನಮೂನೆ 50, 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿ ಪ್ರತಿನಿತ್ಯ ಶಾಸಕರು ಹಾಗೂ ಸಮಿತಿ ಸದಸ್ಯರ ಮನೆ ಮುಂದೆ ಕಾಯುವಂತಾಗಿದೆ.
ಚಿಕ್ಕನಾಯನಹಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು ನಮೂನೆ 50ರಲ್ಲಿ 20, 53ರಲ್ಲಿ 42 ಹಾಗೂ ನಮೂನೆ 57ರಲ್ಲಿ 3189 ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ಜಿಲ್ಲೆಯಲ್ಲಿ ನಮೂನೆ 50ರಲ್ಲಿ ಸ್ವೀಕೃತವಾಗಿದ್ದ 750 ಅರ್ಜಿಗಳ ಪೈಕಿ 444 ತಿರಸತಗೊಂಡಿದ್ದು 370 ಮಂಜೂರಿಯಾಗಿದೆ, ಇನ್ನುಳಿದ 38 ಬಾಕಿ ಇದೆ.
ನಮೂನೆ 53ರಲ್ಲಿ ಸ್ವೀಕೃತಗೊಂಡಿರುವ 2460 ಅರ್ಜಿಗಳ ಪೈಕಿ 941 ತಿರಸತಗೊಂಡಿದ್ದು 208 ಮಂಜೂರಾಗಿದೆ, ಇನ್ನೂ 208 ಅರ್ಜಿ ವಿಲೇವಾರಿಗೆ ಕಾದಿವೆ. ನಮೂನೆ 57ರಲ್ಲಿ 8153 ಅರ್ಜಿ ಸಲ್ಲಿಕೆಯಾಗಿದ್ದು ಈವರೆಗೂ 1657 ತಿರಸತಗೊಂಡಿವೆ, ಕೇವಲ 373 ಜನರಿಗೆ ಮಾತ್ರ ಹಕ್ಕುಪತ್ರ ನೀಡಿದ್ದು ಇನ್ನೂ 6123 ಅರ್ಜಿಗಳ ವಿಲೇವಾರಿಯಾಗಬೇಕಿದೆ.
ಈಚಲುವನ ಅಥವಾ ಸೇಂದಿವನ ಜಮೀನುಗಳಲ್ಲಿ ರೈತರು ನಮೂನೆ 50, 53 ಹಾಗೂ 57ರ ಅಡಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸುವ ಸೂಕ್ಷ$್ಮತೆಯ ಕುರಿತು ಪರಿಶೀಲಿಸಲು ಕಂದಾಯ ಆಯುಕ್ತಾಲಯದ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ವರದಿ ಸಲ್ಲಿಸಿದ ಬಂತರ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು.
ಕೃಷ್ಣಬೈರೇಗೌಡ
ಕಂದಾಯ ಸಚಿವ