ತುಮಕೂರು ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು 
ತುಮಕೂರು

ಜಿಲ್ಲೆಯಲ್ಲಿ ನಿಲ್ಲದ ನವಿಲುಗಳ ಸಾವು

ಪ್ರಮುಖ ಮುಖ್ಯಾಂಶಗಳು

  • ಎಚ್​5ಎನ್​1 ಸೋಂಕಿಗೆ ನಲುಗಿದ ನವಿಲು
  • ಜಿಲ್ಲೆಯಲ್ಲೆಡೆ ನವಿಲುಗಳ ಸರಣಿ ಸಾವು
ತುಮಕೂರು: ಜಿಲ್ಲೆಯಲ್ಲಿ ಎಚ್​5ಎನ್​1 ಭಯ ಮುಂದುವರಿದಿದ್ದು ತುಮಕೂರು ತಾಲೂಕಿನ ಊರ್ಡಿಗೆರೆ ಭಾಗದಲ್ಲಿ ನವಿಲುಗಳ ಸಾವಿನ ಸರಣಿ ಮುಂದುವರಿದಿದೆ. ಜಿಲ್ಲೆಯೆಲ್ಲೆಡೆ ಹೆಚ್ಚಿಕೊಂಡಿರುವ ನವಿಲುಗಳಲ್ಲಿ ಎಚ್​5ಎನ್​1ವೈರಸ್​ ದೃಢವಾಗಿದ್ದರೂ ಗ್ರಾಮಗಳಲ್ಲಿ ಕೋಳಿಗಳಲ್ಲಿ ವೈರಸ್​ ತಡೆಯಲು ಅಗತ್ಯವಾದ ಮುಂಜಾಗ್ರತೆ ಕಾಣಿಸುತ್ತಿಲ್ಲ.
ಜಿಲ್ಲಾಡಳಿತ ವೈರಸ್​ ಇರುವುದನ್ನು ದೃಢಪಡಿಸಿ ಮೌನವಾಗಿದ್ದು ಕೆಲವು ಗ್ರಾಮಗಳಲ್ಲಿ ಕೋಳಿಗಳು ಸಹ ತೂಕಡಿಸಲಾರಂಭಿಸಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ 20 ದಿನಗಳಲ್ಲಿ 54 ನವಿಲುಗಳ ಏಕಾಏಕಿ ಸಾವನ್ನಪ್ಪಿರುವ ದಾಖಲೆ ಅರಣ್ಯ ಇಲಾಖೆಗೆ ಲಭ್ಯವಾಗಿದೆ ಆದರೆ, ವಾಸ್ತವದಲ್ಲಿ ನೂರಾರು ನವಿಲುಗಳು ಸಾವನ್ನಪ್ಪಿರುವ ಶಂಕೆಯಿದೆ.
ಮಂಗಳವಾರ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿಂಭಾಗ ಹಾಗೂ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 2 ನವಿಲು ಮೃತಪಟ್ಟಿವೆ. ಬುಧವಾರ ಕೋಳಿಹಳ್ಳಿ ವ್ಯಾಪ್ತಿಯಲ್ಲಿ  ನವಿಲು ಸಾವನ್ನಪ್ಪಿದೆ. ಕಳೆದ ಮೂರು ದಿನದಲ್ಲಿ 9 ನವಿಲುಗಳು ಸಾವನ್ನಪ್ಪಿವೆ.
ಊರ್ಡಿಗೆರೆ ಹೋಬಳಿ ಕೋಳಿಹಳ್ಳಿ ಸುತ್ತಮುತ್ತಲಿನ 10 ಕಿಮೀ ವ್ಯಾಪ್ತಿಯ 38 ಹಳ್ಳಿಗಳ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಆರು ದಿನಗಳಿಂದ ಪ್ರತಿ ಮನೆಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ 15 ಗ್ರಾಮಗಳಲ್ಲಿ ಪರೀಕ್ಷಾ ಕಾರ್ಯ ಮುಗಿದಿದೆ.