ಡಿಸಿಎಂ ಡಾ.ಜಿ.ಪರಮೇಶ್ವರ ಅವರನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಕೇಕ್ ಕತ್ತರಿಸಲಾಯಿತು. ಡಾ.ಕೆ.ಬಿ.ಲಿಂಗೇಗೌಡ. ಡಾ.ವಿವೇಕ್ ವೀರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
- ಅಂತರಾಳದ ನೋವು ಬಿಚ್ಚಿಟ್ಟ ಡಾ.ಜಿ.ಪರಮೇಶ್ವರ
- ಮೂರು ಬಾರಿ ಸಿಎಂ ಸ್ಥಾನ ಕೈತಪ್ಪಿತು
- ದುರಾದೃಷ್ಟನೋ, ಹಣೆಬರಹನೋ ಗೊತ್ತಿಲ್ಲ
ತುಮಕೂರು: ಮೂರು ಬಾರಿ ಸಿಎಂ ಸ್ಥಾನ ಕೈತಪ್ಪಿದ್ದರ ಬಗ್ಗೆ ತಮ್ಮ ಒಡೆತನದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮುಂದೆ ಡಿಸಿಎಂ ಡಾ.ಜಿ.ಪರಮೇಶ್ವರ ಅಂತರಾಳದ ನೋವು ಬಿಚ್ಚಿಟ್ಟಿದ್ದಾರೆ.
ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವತಿಯಿಂದ ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಶನಿವಾರ ಮಾತನಾಡಿದ ಅವರು, 2013 ರಲ್ಲಿ ನಾನು ಚುನಾವಣೆ ಸೋತೆ. ಬಹುಶಃ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನನ್ನ ದುರಾದೃಷ್ಟನೋ, ಹಣೆಬರಹನೋ ಏನೋ ಗೊತ್ತಿಲ್ಲ. ಆಗ ನಾನು ಸೋತ ಕಾರಣ್ಕಾಗಿ ಅವರು ಮುಖ್ಯಮಂತ್ರಿಯಾದರು. ಸಿಎಂ ಆದ್ರೂ. ಇನ್ನೂ 2018 ರಲ್ಲಿ ನಮ್ಮ ಪಕ್ಷ 80 ಸ್ಥಾನ ಗೆದ್ದಿತ್ತು. 30 ಸ್ಥಾನ ಗೆದ್ದಿದ್ದ ಬೇರೆ ಪಕ್ಷದ ಮೈತ್ರಿ ಮಾಡಿಕೊಂಡಾಗ ಕಾರಣಾಂತರಾದಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಅವತ್ತು ನನ್ನನ್ನು ಸಿಎಂ ಮಾಡಬಹುದಿತ್ತು. ಎರಡನೇ ಬಾರಿಗೂ ಅವಕಾಶ ಕೈತಪ್ಪಿತೆಂಬ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ಈ ಬಾರಿ ಮತ್ತೆ ಪ್ರಯತ್ನ ಮಾಡಿದೆ. ಸಿಎಂ ಆಗುವ ಎಲ್ಲ ವಿಶ್ವಾಸವು ಇತ್ತು. ಕಡೆಗೆ ಯಾವುದೋ ಕಾರಣಕ್ಕೆ ರಾಜಕೀಯದ ಬೆಳವಣಿಗೆಗಳಲ್ಲಾದ ತೀರ್ಮಾನಗಳು ಅವಕಾಶ ಕೈತಪ್ಪುವಂತೆ ಮಾಡಿತು. ಹಾಗಾಗಿ, ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿ ಸ್ಥಾನ. ಹೇಗೆಬೇಕಾದರೂ ಹಾಗೆ ನಡೆದುಕೊಳ್ಳುವುದಿಲ್ಲ. ರಾಜ್ಯ, ಜನರು ನಮ್ಮನ್ನು ನೋಡುತ್ತಿರುತ್ತಾರೆ. ಸಂಪುಟದ ಸಹದ್ಯೋಗಿಗಳು ಹೇಳುತ್ತಿರುತ್ತೇನೆ. ಜನ ನಮ್ಮನ್ನು ಮ್ಯಾಗ್ನಿಫೈಯಿಂಗ್ ಗ್ಲಾಸ್ ಹಾಕಿಕೊಂಡು ನೋಡುತ್ತಿರುತ್ತಾರೆ. ಬಹಳ ಜವಾಬ್ದಾರಿ ನಡೆದುಕೊಳ್ಳಬೇಕಿದೆ. ನಾನು ಖಣಡಿತವಾಗಿ ಮಾಡುತ್ತೇನೆ. ಎಂದೂ ಸ್ಥಾನಕ್ಕೆ, ನತೆಗೆ ಕುಂದು ಬಾರದ ಹಾಗೆ ಸರ್ಕಾರದಲ್ಲಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಒಂದು ಹಂತದಲ್ಲಿ ನಾನು ಹೈಕಮಾಂಡ್ ಬಳಿ ನನಗಿನ್ನೂ ಜವಾಬ್ದಾರಿಗಳು ಸಾಕು. ಆ ಸ್ಥಾನ ಕೊಡಲಿಕ್ಕೆ ಆಗಲಿಲ್ಲ ಅಂದರೆ ಮತ್ತೆ ಇನ್ಯಾವ ಸ್ಥಾನವು ಬೇಡ. ನನ್ನನ್ನು ಜವಾಬ್ದಾರಿಗಳಿಂದ ಬಿಡುಗಡೆಗೊಳಿಸಿ. ನನಗೆ ಬಹಳ ದೊಡ್ಡ ಕೆಲಸಗಳಿದಾವೇ. ನಾನು ವಾಪಸ್ ಹೋಗುವುದಾಗಿ ಹೇಳಿದ್ದೆ ಎಂದು ಪರಮೇಶ್ವರ್ ನೋವು ತೋಡಿಕೊಂಡರು.
ರಾಜಕಾರಣಕ್ಕೆ ಬಂದು 40 ವರ್ಷಗಳಾಗಿದ್ದು ಅಷ್ಟೋ ಇಷ್ಟೋ ಸೇವೆ ಮಾಡಿದ್ದೇನೆ. ಇಲ್ಲಾಂದ್ರೆ ಯಾರೂ ಗುರುತಿಸುವುದಿಲ್ಲ. ಪಕ್ಷನು ಗುರುತಿಸಲ್ಲ. ನನಗೆ ಎಲ್ಲಾ ಹುದ್ದೆನೂ ಕೊಟ್ಟಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಹಿಡಿದು ನಮ್ಮ ಪಕ್ಷದ ಸಿಡಬ್ಲೂಸಿ ಸಮಿತಿವರೆಗೆ ಜವಾಬ್ದಾರಿ ನಿರ್ವಹಿಸಿದ್ದೇನೆ.
ದೆಹಲಿಯಲ್ಲಿ ನಮ್ಮ ಪಕ್ಷದ ಎಲ್ಲಾ ತೀರ್ಮಾನಗಳು ನಡೆಯುವ ಕಾರ್ಯಕಾರಿ ಸಮಿತಿ ಸದಸ್ಯನಾಗಿಯು ದುಡಿದಿದ್ದೇನೆ.