Coordination between the department and farmers is necessary for agricultural success.
ಪಟ್ಟನಾಯಕನಹಳ್ಳಿ: ಮಣ್ಣಿನ ಸವಕಳಿ, ಅರಣ್ಯೀಕರಣ, ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ, ಸಮತೋಲನ ರಸಗೊಬ್ಬರಗಳ ಬಳಕೆ, ಇಲಾಖೆಯಲ್ಲಿ ದೊರೆಯುವ ಎಲ್ಲ ಯೋಜನೆಗಳ ಬಗ್ಗೆ ರೈತರು ತಿಳಿದುಕೊಂಡಾಗ ಮಾತ್ರ ಕೃಷಿ ಇಲಾಖೆ ಮತ್ತು ರೈತರಲ್ಲಿ ಸಮನ್ವಯತೆ ಮೂಡಲಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಚ್.ನಾಗರಾಜು ಹೇಳಿದರು.
ಶಿರಾ ತಾಲೂಕು ಗೌಡಗೆರೆ ಹೋಬಳಿಯ ಸಂಕಾಪುರದಲ್ಲಿ ಕೃಷಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಮರುಭೂಮೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಕಾಪುರದ ಕೃಷ್ಣಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ ಗೋಕಟ್ಟೆ ಕಾಮಗಾರಿಯನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ ಅರಣ್ಯ ಸಸಿಗಳನ್ನು ನಾಟಿ ಮಾಡಲಾಯಿತು. ಮುಖಂಡರಾದ ಸಿದ್ದಾಪುರದ ಈಶ್ವರಪ್ಪ, ಹಾಲಪ್ಪ, ಚಂಗಾವರ ಗ್ರಾಮದ ಮಡ್ನಿಮಾರಣ್ಣ, ಮಹಾಲಿಂಗಪ್ಪ ಹಾಗೂ ರೈತರು ಇದ್ದರು.